ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ರಸ್ತೆ ರಿಪೇರಿ ಮಾಡಿಕೊಡಿ ಅಂದಿದ್ದೇ ತಪ್ಪಾಯ್ತಾ? ವಿಶೇಷಚೇತನ ವ್ಯಕ್ತಿ ಮೇಲೆ ಇದೆಂಥಾ ದರ್ಪ?

Disabled man dragged out of office: ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕ ಕುಂದುಕೊರತೆ ಅಧಿವೇಶನ ನಡೆಯುತ್ತಿದ್ದಾಗ ವಿಶೇಷಚೇತನ ವ್ಯಕ್ತಿಯೊಬ್ಬರನ್ನು ಸಿಬ್ಬಂದಿ ಬಲವಂತವಾಗಿ ಹೊರಗೆ ಕರೆದೊಯ್ದ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ತೆಲಂಗಾಣದ ಜಗ್ತಿಯಾಲ್‌ನಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಘಟನೆಗೆ ಪ್ರತಿಕ್ರಿಯಿಸಿದ ತೆಲಂಗಾಣ ಸಚಿವ ಅಡ್ಲೂರಿ ಲಕ್ಷ್ಮಣ್ ಕುಮಾರ್, ಅವರ ಸಮಸ್ಯೆಯನ್ನು ತಕ್ಷಣ ಪರಿಹರಿಸಲು ಆದೇಶಿಸಿದರು.

ರಸ್ತೆ ರಿಪೇರಿ ಮಾಡಿಕೊಡಿ ಅಂದಿದ್ದೇ ತಪ್ಪಾಯ್ತಾ? ಈ ವಿಡಿಯೊ ನೋಡಿ

Priyanka P Priyanka P Aug 12, 2025 4:14 PM

ಹೈದರಾಬಾದ್: ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕ ಕುಂದುಕೊರತೆ ಅಧಿವೇಶನ ನಡೆಯುತ್ತಿದ್ದಾಗ ವಿಶೇಷಚೇತನ ವ್ಯಕ್ತಿಯೊಬ್ಬರನ್ನು ಸಿಬ್ಬಂದಿ ಬಲವಂತವಾಗಿ ಹೊರಗೆ ಕರೆದೊಯ್ದ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ತೆಲಂಗಾಣದ ಜಗ್ತಿಯಾಲ್‌ನಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಇನ್ನು ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದ್ದು, ಅನೇಕರಿಂದ ಆಕ್ರೋಶ ವ್ಯಕ್ತವಾಗಿದೆ.

ವಿಶೇಷಚೇತನ ವ್ಯಕ್ತಿಯನ್ನು ಮಲ್ಲಾಪುರ ಮಂಡಲದ ಮುತ್ಯಂಪೇಟೆ ಗ್ರಾಮದ ರಾಜ ಗಂಗಾರಾಮ್ ಎಂದು ಗುರುತಿಸಲಾಗಿದೆ. ರಾಜ ಗಂಗಾರಾಮ್ ಅವರು ಕಳೆದ ಎಂಟು ವರ್ಷಗಳಿಂದ ತನ್ನ ಮನೆಗೆ ರಸ್ತೆಗಾಗಿ ಬೇಡಿಕೊಳ್ಳುತ್ತಿದ್ದರು. ಈ ಹಿಂದೆ ತಮ್ಮ ದೂರನ್ನು ಜಿಲ್ಲಾಧಿಕಾರಿ ಸತ್ಯಪ್ರಸಾದ್ ಅವರಿಗೆ ಸಲ್ಲಿಸಿದ್ದರು, ಅವರು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಯಾವುದೇ ಪ್ರಗತಿ ಕಾಣದ ಕಾರಣ, ಗಂಗಾರಾಮ್ ಕಚೇರಿಗೆ ಬಂದು ದೂರು ನೀಡಲು ಕಾಯುತ್ತಿದ್ದರು. ಈ ವೇಳೆ ಈ ಘಟನೆ ನಡೆದಿದೆ.

ವಿಡಿಯೊದಲ್ಲಿ, ಗಂಗಾರಾಮ್ ಕಿಕ್ಕಿರಿದ ಕಚೇರಿಯಲ್ಲಿ ವ್ಹೀಲ್‌ಚೇರ್‌ನಲ್ಲಿ ಕುಳಿತಿರುವುದನ್ನು ಕಾಣಬಹುದು. ಸಿಬ್ಬಂದಿ ಅವರ ಬಳಿಗೆ ಬರುತ್ತಿದ್ದಾರೆ. ಇಬ್ಬರು ಪುರುಷರು ಅವರ ಕುರ್ಚಿಯನ್ನು ಎಳೆಯಲು ಪ್ರಯತ್ನಿಸಿದರೆ, ಇತರರು ಹಿಂದಿನಿಂದ ತಳ್ಳುತ್ತಿದ್ದಾರೆ. ಇದರಿಂದ ಅವರು ನೆಲದ ಮೇಲೆ ಬೀಳುವಂತಾಗಿದೆ. ಆದರೆ, ಡಿಸಿ ಅಲ್ಲಿ ನಿಲ್ಲದೆ ಮುಂದೆ ನಡೆದುಕೊಂಡು ಹೋಗಿದ್ದಾರೆ. ಸ್ಥಳದಲ್ಲಿದ್ದವರು ತಮ್ಮ ಫೋನ್‌ಗಳಲ್ಲಿ ದೃಶ್ಯವನ್ನು ರೆಕಾರ್ಡ್ ಮಾಡಿದ್ದಾರೆ. ಆ ವ್ಯಕ್ತಿಯನ್ನು ಆ ಪ್ರದೇಶದಿಂದ ಹೊರಗೆ ಎಳೆದುಕೊಂಡು ಹೋಗುವಾಗ ಬಹಳ ದುಃಖಿತನಾಗಿದ್ದಾನೆ.

ವಿಡಿಯೊ ವೀಕ್ಷಿಸಿ:



ರಾಜ ಗಂಗಾರಾಮ್‌ರನ್ನು ಅಲ್ಲಿಂದ ಹೋಗುವಂತೆ ವಿನಂತಿಸಿದರೂ ನಿರ್ಲಕ್ಷಿಸಿದ ನಂತರ ಸಿಬ್ಬಂದಿ ಈ ಕ್ರಮ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಘಟನೆಗೆ ಪ್ರತಿಕ್ರಿಯಿಸಿದ ತೆಲಂಗಾಣ ಸಚಿವ ಅಡ್ಲೂರಿ ಲಕ್ಷ್ಮಣ್ ಕುಮಾರ್, ಗಂಗಾರಾಮ್ ಅವರ ಸಮಸ್ಯೆಯನ್ನು ತಕ್ಷಣ ಪರಿಹರಿಸಲು ಆದೇಶಿಸಿದರು. ಯಾವುದೇ ವಿಳಂಬವಿಲ್ಲದೆ ಅವರ ನಿವಾಸಕ್ಕೆ ರಸ್ತೆ ನಿರ್ಮಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈ ಸುದ್ದಿಯನ್ನೂ ಓದಿ: Narendra Modi: ಕೆಟ್ಟ ರಸ್ತೆಗಳು, ಟ್ರಾಫಿಕ್‌ ಸಮಸ್ಯೆ; ಪ್ರಧಾನಿ ಮೋದಿಗೆ ಬೆಂಗಳೂರಿನ 5 ವರ್ಷದ ಬಾಲಕಿ ಬರೆದ ಪತ್ರ ವೈರಲ್‌!

ತಂದೆ ಮೇಲೆ ಹಲ್ಲೆಗೈದ ಪುತ್ರ

ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ, ಮಹಾರಾಷ್ಟ್ರದ ನಾಗ್ಪುರದಲ್ಲಿ ವ್ಯಕ್ತಿಯೊಬ್ಬ ತನ್ನ ತಂದೆಯ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋ ಬಹಿರಂಗವಾಗಿದೆ. ಕೌಟುಂಬಿಕ ವಿಷಯಕ್ಕಾಗಿ ತಾಯಿಯ ಮುಂದೆಯೇ ತನ್ನ ತಂದೆಗೆ ಥಳಿಸಿದ್ದಾನೆ. ಸಂತ್ರಸ್ತ ಯಾವುದೇ ದೂರು ನೀಡದಿದ್ದರೂ, ಪೊಲೀಸರು ಶಾಂತಿ ನಗರದ ನಿವಾಸಿಯಾದ ಆ ವ್ಯಕ್ತಿಯನ್ನು ಪತ್ತೆಹಚ್ಚಿದ್ದು, ಕೇಸ್ ದಾಖಲಿಸಿದ್ದಾರೆ.