ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜರ್ಮನಿಯಲ್ಲಿ 10 ವರ್ಷ ಕಳೆದು ಭಾರತಕ್ಕೆ ಮರಳಿದ ಕುಟುಂಬ: ಈ ನಡೆಗೆ ಕಾರಣ ಏನೆಂದು ಸತ್ಯ ಬಿಚ್ಚಿಟ್ಟ ವ್ಯಕ್ತಿ!

Viral Video: ಜರ್ಮನಿಯಲ್ಲಿ ಸುಮಾರು ಹತ್ತು ವರ್ಷಗಳ ಕಾಲ ನೆಲೆಸಿದ್ದ ಭಾರತೀಯ ಕುಟುಂಬ ವೊಂದು ಕೊನೆಗೂ ಭಾರತದಲ್ಲೇ ಬದುಕು ಸಾಗಿಸುವ ಇಚ್ಚೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ‌. ಯಾವುದೇ ಒತ್ತಡ,ಅಥವಾ ಅಸಮಾಧಾನದಿಂದ ಜರ್ಮನಿ ತ್ಯಜಿಸಿಲ್ಲ,ಕೇವಲ ವೈಯಕ್ತಿಕ ಕಾರಣದಿಂದ ಭಾರತಕ್ಕೆ ಬರಲು ನಿರ್ಧರಿಸಿದ್ದೇವೆ ಎಂದಿದ್ದಾರೆ...

ಜರ್ಮನಿಯಲ್ಲಿ 10 ವರ್ಷ ಕಳೆದು ಭಾರತಕ್ಕೆ ವಾಪಸ್ಸಾದ ಕುಟುಂಬ: ಕಾರಣವೇನು?

ಜರ್ಮನಿಯಲ್ಲಿ 10 ವರ್ಷ ಕಳೆದು ಭಾರತಕ್ಕೆ ವಾಪಸ್ಸಾದ ಕುಟುಂಬ -

Profile
Pushpa Kumari Jul 3, 2026 5:12 PM

ನವದೆಹಲಿ,ಜು.3: ಇಂದು ಕೆಲಸದ ನಿಮಿತ್ತ ವಿದೇಶದಲ್ಲಿ ಜೀವನದ ಬಂಡಿ ಸಾಗಿಸೋರು ಅನೇಕರು ಇದ್ದಾರೆ. ಊರಿನಲ್ಲಿ ಬದುಕು ಸಾಗಿಸುವ ಆಸೆ ಇದ್ದರೂ ತಮಗೆ ಬೇಕಾದ ಉದ್ಯೋಗ ಗಿಟ್ಟಿಸಿಕೊಳ್ಳಲು ಅಥವಾ ಆರ್ಥಿಕ ಸಮಸ್ಯೆ ನಿಭಾಯಿಸಲು ಇಲ್ಲಿ ಕೆಲಸ ಮಾಡವವರು ಅನೇಕರು ಇದ್ದಾರೆ. ಇದೀಗ ಜರ್ಮನಿಯಲ್ಲಿ ಸುಮಾರು ಹತ್ತು ವರ್ಷಗಳ ಕಾಲ ನೆಲೆಸಿದ್ದ ಭಾರತೀಯ ಕುಟುಂಬವೊಂದು ಕೊನೆಗೂ ಭಾರತದಲ್ಲೇ ಬದುಕು ಸಾಗಿಸುವ ಇಚ್ಚೆಯನ್ನು ಸೋಷಿಯಲ್ ಮೀಡಿಯಾದಲ್ಲಿ (Viral News) ಹೇಳಿಕೊಂಡಿದ್ದಾರೆ‌. ಯಾವುದೇ ಒತ್ತಡ,ಅಥವಾ ಅಸಮಾಧಾನ ದಿಂದ ಜರ್ಮನಿ ತ್ಯಜಿಸಿಲ್ಲ,ಕೇವಲ ವೈಯಕ್ತಿಕ ಕಾರಣದಿಂದ ಭಾರತಕ್ಕೆ ಬರಲು ನಿರ್ಧರಿಸಿದ್ದೇವೆ ಎಂದಿದ್ದಾರೆ.

ಲೀಡರ್‌ಶಿಪ್ ಕೋಚ್ ಹರಿತ್ ಭಾಸಿನ್ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಜರ್ಮನಿ ತನ್ನ ಜೀವನದ ಪ್ರಮುಖ ಮತ್ತು ಅರ್ಥಪೂರ್ಣ ಭಾಗವಾಗಿತ್ತು. ಆದಾಗ್ಯೂ ತಮ್ಮ ವೈಯಕ್ತಿಕ ವಿಚಾರದ ಕಾರಣಕ್ಕಾಗಿ ಕುಟುಂಬದೊಂದಿಗೆ ಭಾರತಕ್ಕೆ ಮರಳಲು ನಿರ್ಧಾರ ಮಾಡಿದ್ದೇವೆ ಅಂದರು. ಇಲ್ಲಿ ಯಾವುದೇ ಒತ್ತಡದ ಜೀವನ ಇರಲಿಲ್ಲ ಅಥವಾ ಅನ್ ಸೆಕ್ಯುರ್ಡ್ ಎಂದು ಯಾವತ್ತು ಅನಿಸಿಲ್ಲ. ಆದರೆ ಕುಟುಂಬದ ಪ್ರೀತಿಪಾತ್ರರಿಗೆ ಹತ್ತಿರವಾಗಲು ಮತ್ತು ಅವರ ಆತ್ಮೀಯರೊಂದಿಗೆ ಮತ್ತೆ ಸಂಪರ್ಕ ಸಾಧಿಸಲು ಭಾರತಕ್ಕೆ ಮರಳಲು ಯೋಚಿಸಿದ್ದಾರೆ.

ಇದು ಯೋಚಿಸಿ ತೆಗೆದುಕೊಂಡ ನಿರ್ಧಾರವಾಗಿದ್ದು ಆಕಸ್ಮಿಕವಲ್ಲ, ಜರ್ಮನಿಯಲ್ಲಿ ಹತ್ತು ವರ್ಷಗಳ ಕಾಲ ಕಳೆದ ನಂತರ ನಮ್ಮ ಮಕ್ಕಳು ಹುಟ್ಟಿ ಬೆಳೆದ ದೇಶವನ್ನು ಬಿಟ್ಟು, ನಮ್ಮೆಲ್ಲಾ ಲಗೇಜ್ ಹೊತ್ತುಕೊಂಡು ಭಾರತಕ್ಕೆ ಮರಳಿದ್ದೇವೆ ಎಂದು ಹರಿತ್ ಬರೆದುಕೊಂಡಿದ್ದಾರೆ. ವೃತ್ತಿಜೀವನದ ಬೆಳವಣಿಗೆ, ಕುಟುಂಬದ ನೆನಪುಗಳು ಮತ್ತು ಅಮೂಲ್ಯವಾದ ಜೀವನ ಪಾಠಗಳನ್ನು ಒಳಗೊಂಡಂತೆ ಜರ್ಮನಿ ತನಗೆ ಬಹಳಷ್ಟು ನೀಡಿದೆ‌. ಮಕ್ಕಳು ಇಲ್ಲಿಯೇ ಜನಿಸಿದ್ದು ಜೀವನವನ್ನು ನಿರ್ಮಿಸಿದ ಸ್ಥಳ ಎಂದು ಬಣ್ಣಿಸಿದರು.

Viral Video: ನೂರಾರು ಕೋತಿಗಳ ಆರೈಕೆ ಮಾಡುತ್ತಿರುವ 77ರ ವೃದ್ಧ ತಾಯಿ; ನಿವೃತ್ತ ಪೊಲೀಸ್ ಅಧಿಕಾರಿಯ ಪ್ರಾಣಿ ಪ್ರೇಮಕ್ಕೆ ನೆಟ್ಟಿಗರು ಫಿದಾ

ಈ ಸ್ಥಳಾಂತರದ ಹಿಂದಿನ ಕಾರಣವನ್ನು ವಿವರಿಸುತ್ತಾ, ಅವರು ಪ್ರಮುಖ ಅಂಶವೆಂದರೆ "ಕುಟುಂಬ" ಎಂದು ಹೇಳಿದರು. ಅವರು ತಮ್ಮ ಮಕ್ಕಳು ಎರಡೂ ಸಂಸ್ಕೃತಿಗಳನ್ನು ಅನುಭವಿ ಸುತ್ತಾ ಬೆಳೆಯಬೇಕೆಂದು ಅಂದುಕೊಂಡಿದ್ದರು. ಭಾರತ ನಮ್ಮನ್ನು ಭಾವನಾತ್ಮಕವಾಗಿ ಹಚ್ಚಿ ಕೊಂಡಿತ್ತು. ನಮಗೆ ನಮ್ಮ ಕುಟುಂಬದ ಹತ್ತಿರವಿರಬೇಕು ಅನಿಸಿತು‌‌. ಹೀಗಾಗಿ ತಮ್ಮ ಸ್ವದೇಶಕ್ಕೆ ಮರಳಲು ಯೋಜಿತವಾಗಿ ಕೈಗೊಂಡ ಅಂತಿಮ ನಿರ್ಧಾರ ಎಂದರು.

ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಒಬ್ಬ ಬಳಕೆದಾರರು, "ನಾನು 5 ವರ್ಷಗಳ ನಂತರ ಜರ್ಮನಿಯಿಂದ ಹೊರಡಲು ಯೋಜಿಸುತ್ತಿದ್ದೇನೆ, ಏನಾಗುತ್ತದೆ ಎಂದು ತಿಳಿದಿಲ್ಲ" ಎಂದು ಬರೆದಿದ್ದಾರೆ. ಮತ್ತೊಬ್ಬರು ಯಾವುದೇ ಸ್ಥಳ ತನ್ನ ಜೀವನದ ಒಂದು ಪ್ರಮುಖ ಭಾಗವಾಗಿದ್ದರೂ ತಮ್ಮ ನಾಡನ್ನು ಮರೆಯುವಂತಿಲ್ಲ ಎಂದರು‌.