ಪುಣೆಯ ರಾಜಗಢ ಕೋಟೆ ಬೆಟ್ಟದ ಮೇಲೆ ಸಾವನ್ನಪ್ಪಿದ ಮಾಲಕನಿಗೆ ಕಾವಲು ನಿಂತ ಸಾಕು ನಾಯಿ: ಹೃದಯಸ್ಪರ್ಶಿ ವಿಡಿಯೊ ವೈರಲ್
Viral Video: ಪುಣೆ ಸಮೀಪದ ರಾಜಗಢ ಕೋಟೆಯ ಬೆಟ್ಟದ ಮೇಲೆ ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿಯೊಬ್ಬರ ಶವದೊಂದಿಗೆ ಅವರ ಸಾಕು ನಾಯಿ ಬೆಟ್ಟದಿಂದ ಕೆಳಗೆ ಬಂದ ಹೃದಯವಿದ್ರಾವಕ ಘಟನೆ ನಡೆದಿದೆ. ಸಾಕು ನಾಯಿಯೊಂದಿಗೆ ಜಿಗ್ನೇಶ್ ಸದಾಶಿವ ಖಂಡಲ್ಕರ್ ಅವರು ರಾಜಗಢ ಕೋಟೆಗೆ ಚಾರಣಕ್ಕೆ ತೆರಳಿದ್ದು, ಬೆಟ್ಟದ ಮೇಲೆ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಸಂಗ್ರಹ ಚಿತ್ರ -
ಪುಣೆ: ನಿಷ್ಠಾವಂತ ಪ್ರಾಣಿಗಳಲ್ಲಿ ನಾಯಿ (pet dog) ಸದಾ ಮುಂದಿರುತ್ತದೆ ಎಂಬುದನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಇದಕ್ಕೆ ಈಗ ಮತ್ತೊಂದು ಉದಾಹರಣೆ ಪುಣೆಯಲ್ಲಿ (pune) ನಡೆದಿರುವ ಈ ಘಟನೆ. ಬೆಟ್ಟದ ಮೇಲೆ ಸಾವನ್ನಪ್ಪಿದ ಮಾಲೀಕನ ಶವದೊಂದಿಗೆ ಅವರ ಸಾಕು ನಾಯಿ ಕೂಡ ಬೆಟ್ಟ ಇಳಿದು ಬಂದ ಹೃದಯ ವಿದ್ರಾವಕ ಘಟನೆ (Viral Video) ಪುಣೆಯ ಸಮೀಪ ರಾಜಗಢ ಕೋಟೆಯಲ್ಲಿ (Rajgad Fort) ನಡೆದಿದೆ. ಸಾಕು ನಾಯಿಯೊಂದಿಗೆ ಜಿಗ್ನೇಶ್ ಸದಾಶಿವ ಖಂಡಲ್ಕರ್ (Jignesh Sadashiv Khandalkar) ಅವರು ಶನಿವಾರ ರಾಜಗಢ ಕೋಟೆಗೆ ಚಾರಣಕ್ಕೆ ತೆರಳಿದ್ದು, ಬೆಟ್ಟದ ಮೇಲೆ ಅವರು ಹೃದಯಾಘಾತದಿಂದ (heart attack) ಸಾವನ್ನಪ್ಪಿದ್ದಾರೆ.
ನಾಯಿಗಳು ಸಾಮಾನ್ಯವಾಗಿ ಮನುಷ್ಯರೊಂದಿಗೆ ಗಾಢವಾದ ಬಾಂಧವ್ಯವನ್ನು ಹೊಂದಿರುತ್ತವೆ. ಮಾಲೀಕರ ಸುಖ-ದುಃಖದಲ್ಲಿ ಅವುಗಳು ಕೂಡ ಜೊತೆ ನಿಲ್ಲುತ್ತವೆ. ಇಂತಹ ಎಷ್ಟೋ ಘಟನೆಗಳು ನಡೆದಿವೆ. ಅವುಗಳಲ್ಲಿ ಈಗ ಪುಣೆಯ ಈ ಘಟನೆ ಕೂಡ ಒಂದು.
ರಾಜಗಢ ಕೋಟೆಯಲ್ಲಿ ಮಾಲೀಕ ಹಠಾತ್ತನೆ ಸಾವನ್ನಪ್ಪಿದಾಗ ಅವರ ಸಾಕುನಾಯಿಯೊಂದು ಅವರ ಮೃತದೇಹದೊಂದಿಗೆ ಬೆಟ್ಟದಿಂದ ಕೆಳಗೆ ಬರುವವರೆಗೂ ಜೊತೆ ನಡೆಯಿತು. ಈ ಭಾವುಕ ಘಟನೆಯು ಸ್ಥಳೀಯರ ಮನ ಕಲಕುವಂತೆ ಮಾಡಿತು.
हा व्हिडीओ पाहा; राजगड किल्ल्यावर पर्यटकाचा हृदयविकाराने मृत्यू; मालकाच्या मृत्यूनंतरही निष्ठावान जुली राहिली सोबत #punenews #Fort #RajgadFort Source - IMnewslive https://t.co/7funq08SHR
— Ankita Shantinath Khane (@KhaneAnkita) October 12, 2026
ಜಿಗ್ನೇಶ್ ಸದಾಶಿವ ಖಂಡಲ್ಕರ್ ಅವರು ಶನಿವಾರ ಐತಿಹಾಸಿಕ ರಾಜಗಢ ಕೋಟೆಗೆ ಚಾರಣಕ್ಕೆ ತೆರಳಿದ್ದರು. ಅವರು ತಮ್ಮ ಸಾಕುನಾಯಿಯನ್ನೂ ಜೊತೆಗೆ ಕರೆದುಕೊಂಡು ಹೋಗಿದ್ದರು. ದಾರಿಯಲ್ಲಿ ಅವರಿಗೆ ತೀವ್ರ ಆಯಾಸವೆನಿಸಿ ವಿಶ್ರಾಂತಿ ಪಡೆಯಲು ನಿಂತರು. ಆದರೆ ಅವರ ಆರೋಗ್ಯ ಸ್ಥಿತಿ ಹದಗೆಟ್ಟು ಮಾರಣಾಂತಿಕ ಹೃದಯಾಘಾತ ಸಂಭವಿಸಿತು.
ತಕ್ಷಣವೇ ಅಲ್ಲಿದ್ದ ಪ್ರವಾಸಿಗರು ಸ್ಥಳೀಯ ನಿವಾಸಿಗಳಿಗೆ ಮಾಹಿತಿ ನೀಡಿದರು. ಸ್ಥಳೀಯರು ರಕ್ಷಣಾ ತಂಡಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಜಿಗ್ನೇಶ್ ಅವರ ಮೃತದೇಹವನ್ನು ಕೆಳಗೆ ಕೊಂಡೊಯ್ಯಲು ಪ್ರಾರಂಭಿಸಿದಾಗ ಅವರ ನಾಯಿ ಕೂಡ ಪ್ರಯಾಣದುದ್ದಕ್ಕೂ ಸ್ಟ್ರೆಚರ್ನ ಪಕ್ಕದಲ್ಲೇ ನಿಂತುಕೊಂಡು ಜೊತೆ ನೀಡಿತು.
ದುರಂತದ ಸಂಪೂರ್ಣ ಅರಿವಿಲ್ಲದಿದ್ದರೂ ನಿಷ್ಠಾವಂತ ಆ ಪ್ರಾಣಿ ಕೊನೆಯ ಕ್ಷಣದವರೆಗೂ ತನ್ನ ಮಾಲೀಕನ ಜೊತೆಗೆ ಇದ್ದಿತು. ಇದನ್ನು ಕಂಡು ಪ್ರವಾಸಿಗರು, ಸ್ಥಳೀಯರು ಭಾವುಕರಾದರು.
ಇನ್ನೊಂದು ಘಟನೆ ಅಮೆರಿಕದ ಕ್ಯಾನ್ಸಾಸ್ನಲ್ಲಿ ನಡೆದಿದೆ. ಮನೆಯಲ್ಲಿ ಬಿದ್ದು ಏಳಲಾಗದ ಸ್ಥಿತಿಯಲ್ಲಿದ್ದ ಮಾಲೀಕನನ್ನು ರಕ್ಷಿಸಲು ನಾಯಿಯೊಂದು ಪೊಲೀಸರನ್ನು ಕರೆದುಕೊಂಡು ಬಂದಿದೆ. ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಲೀವೂಡ್ ಪೊಲೀಸ್ ಇಲಾಖೆಯು ಬಾಡಿಕ್ಯಾಮ್ ದೃಶ್ಯಾವಳಿಗಳನ್ನು ಹಂಚಿಕೊಂಡಿದೆ.
"ಲಡಾಖ್ ಭಾರತದ ಅವಿಭಾಜ್ಯ ಅಂಗ": ಚೀನಾದ ತಗಾದೆಗೆ ಖಡಕ್ ತಿರುಗೇಟು ನೀಡಿದ ವಿದೇಶಾಂಗ ಸಚಿವಾಲಯ!
ಸೆಪ್ಟೆಂಬರ್ 17 ರಂದು ನಡೆದಿರುವ ಈ ಘಟನೆಯಲ್ಲಿ ಅಧಿಕಾರಿಯೊಬ್ಬರನ್ನು ನಾಯಿ ಕರೆದುಕೊಂಡು ಬಂದು ಗ್ಯಾರೇಜ್ ಒಳಗೆ ಅಸಹಾಯಕರಾಗಿ ಬಿದ್ದಿದ್ದ ಮಾಲೀಕನನ್ನು ತೋರಿಸಿದೆ. ಮೂರು ಗಂಟೆಗಳಿಗೂ ಹೆಚ್ಚು ಕಾಲ ಏಳಲಾಗದ ಸ್ಥಿತಿಯಲ್ಲಿ ಅವರು ಅಲ್ಲಿ ಬಿದ್ದಿದ್ದರು ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ.