ರೀಲ್ಸ್ ಗೀಳು: ಮಗುವನ್ನು ಮೊದಲ ಮಹಡಿಯಿಂದ ಕೆಳಕ್ಕೆ ಜಿಗಿಸಿದ ತಂದೆ, ವಿಡಿಯೋ ನೋಡಿ
Viral Video: ಯುವಜನತೆ ಮತ್ತು ಮಕ್ಕಳಲ್ಲಿ ರೀಲ್ಸ್ ಗೀಳು ಹೆಚ್ಚಾಗಿದೆ. ಅಪಾಯಕಾರಿ ಸ್ಥಳದಲ್ಲಿಯೂ ರೀಲ್ಸ್ ಮಾಡಿ ಪ್ರಾಣಕ್ಕೆ ಅಪಾಯ ಉಂಟು ಮಾಡುತ್ತಿದ್ದಾರೆ. ಈ ನಡುವೆ ರೀಲ್ಸ್ ಗೋಸ್ಕರ ತಂದೆಯೇ ಮಗುವನ್ನು ಮೊದಲ ಮಹಡಿಯಿಂದ ಮಗುವನ್ನು ಜಿಗಿಯುವಂತೆ ಪ್ರೇರೇಪಿಸಿದ ಘಟನೆ ನಡೆದಿದೆ.
ರೀಲ್ಸ್ ಗಾಗಿ ಮಗುವಿನ ಜೀವವನ್ನೇ ಲೆಕ್ಕಿಸದೆ ಸಾಹಸ ಮೆರೆದ ತಂದೆ -
ನವದೆಹಲಿ,ಎ.11: ಇತ್ತೀಚೆಗೆ ಯುವಜನತೆ ಮತ್ತು ಮಕ್ಕಳಲ್ಲಿ ರೀಲ್ಸ್ ಗೀಳು ಹೆಚ್ಚಾಗಿದೆ. ಅಪಾಯಕಾರಿ ಸ್ಥಳದಲ್ಲಿಯೂ ರೀಲ್ಸ್ ಮಾಡಿ ಪ್ರಾಣಕ್ಕೆ ಅಪಾಯ ಉಂಟು ಮಾಡುತ್ತಿದ್ದಾರೆ. ಈ ನಡುವೆ ರೀಲ್ಸ್ ಗೋಸ್ಕರ ತಂದೆಯೇ ಮಗುವನ್ನು ಮೊದಲ ಮಹಡಿ ಯಿಂದ ಮಗುವನ್ನು ಜಿಗಿಯುವಂತೆ ಪ್ರೇರೇಪಿಸಿದ ಘಟನೆ ನಡೆದಿದೆ. ಈ ದೃಶ್ಯ (Viral News) ನೋಡಿದ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಮಾರು ಎರಡು-ಮೂರು ವರ್ಷದ ಮಗುವೊಂದು ಬಾಲ್ಕನಿಯ ಮೇಲೆ ನಿಂತಿರುವುದು ಕಂಡು ಬಂದಿದೆ. ಕೆಳಗೆ ನಿಂತಿರುವ ತಂದೆಯೂ ಕೆಳಕ್ಕೆ ಹಾರುವಂತೆ ಸನ್ನೆಯನ್ನು ಮಾಡಿದ್ದಾನೆ. ಮಗು ಮೇಲೆ ನಿಂತು ಚಪ್ಪಾಳೆ ತಟ್ಟುತ್ತಾ ಖುಷಿ ಯಿಂದಲೇ ಕೆಳಗೆ ಹಾರಿದೆ. ಆದರೆ ತಂದೆ ಮಗುವನ್ನು ಹಿಡಿಯಲು ಪ್ರಯತ್ನ ಮಾಡಿದರೂ ಅವನ ಕೈಯಿಂದ ಜಾರಿ ಕೆಳಗೆ ಬಿದ್ದಿದೆ. ಅಲ್ಲಿ ಹಾಸಿಗೆ ಹಾಕಿರುವುದರಿಂದ ಮಗುವಿಗೆ ಯಾವುದೇ ತೊಂದರೆಯಾಗಲಿಲ್ಲ.
ವಿಡಿಯೋ ನೋಡಿ:
वीडियो बनाने के नाम पर अपने बच्चों की जान जोखिम में न डालें।
— ममता ट्राबल (@Mamtasulaniya) April 10, 2026
ऐसे बच्चों कों आदत लगती है कभी अकेलेपन में यदि ऐसा कर दिया तो..? pic.twitter.com/jtoxWAGsKE
ಆದರೆ ರೀಲ್ಸ್ ಗಾಗಿ ಮಗುವಿನ ಪ್ರಾಣಕ್ಕೆ ತೊಂದರೆ ಉಂಟು ಮಾಡಿದ ಈ ದೃಶ್ಯದ ಬಗ್ಗೆ ಅನೇಕರು ಕಿಡಿಕಾರಿದ್ದಾರೆ."ರೀಲ್‌ಗಾಗಿ ಈ ಮಟ್ಟಕ್ಕೆ ಇಳಿಯುವುದು ಮೂರ್ಖ "ಎಂದು ತಂದೆಯ ವರ್ತನೆ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ. ಒಂದು ವೇಳೆ ಹಾಸಿಗೆಯಿಂದ ತಪ್ಪಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು?" ಎಂದು ಪ್ರಶ್ನೆ ಮಾಡಿದ್ದಾರೆ.
Viral News: ನಾಯಿಯ ಪಾಲನೆಗೆ ತಿಂಗಳಿಗೆ 15,000 ರೂ. ಖರ್ಚು! ಬೆಂಗಳೂರಿನ ದಂಪತಿ ಶ್ವಾನ ಪ್ರೇಮ
ಬಳಕೆದಾರರೊಬ್ಬರು ಮಗುವಿಗೆ ತನ್ನ ತಂದೆಯ ಮೇಲೆ ಎಷ್ಟು ನಂಬಿಕೆ ಇದೆ, ಆದರೆ ಮಗುವಿನ ಜೀವಕ್ಕೆ ತೊಂದರೆ ಯಾದರೆ ಏನಾಗುತ್ತಿತ್ತು ಅಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಲು ಮಕ್ಕಳನ್ನು ಬಳಸುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಅನೇಕರು ಆತಂಕ ವ್ಯಕ್ತಪಡಿಸಿದರು.