ರೀಲ್ಸ್‌ಗೆ ಲೈಕ್ ಮಾಡುತ್ತಲೇ 40 ವರ್ಷದ ಆಂಟಿಯನ್ನು ಪಟಾಯಿಸಿದ 14ರ ಬಾಲಕ; ಪೊಲೀಸ್ ಠಾಣೆ ಮೆಟ್ಟಿಲೇರಿದ ವಿಚಿತ್ರ ಪ್ರಕರಣ
Viral News: ಉತ್ತರ ಪ್ರದೇಶದ ಮಹಾರಾಜ್‌ಗಂಜನ್‌ನ 4 ಮಕ್ಕಳ ತಾಯಿ, 40 ವರ್ಷದ ಮಹಿಳೆ ತಮಿಳುನಾಡಿನ 14 ವರ್ಷದ ಬಾಲಕನನ್ನು ಪ್ರೀತಿಸಿದ್ದಾಳೆ. ಸದ್ಯ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ದೇಶದ ಗಮನ ಸೆಳೆದಿದೆ.
ಮೆಟಾ ಎಐ ರಚಿತ ಚಿತ್ರ -
ಲಖನೌ, ಮೇ 26: ಪ್ರೀತಿ ಕುರುಡು ಎನ್ನುವ ಮಾತಿದೆ. ಅಂದರೆ ಪ್ರೀತಿಯಲ್ಲಿ ಬಿದ್ದವರಿಗೆ ತಮ್ಮ ಪ್ರೀತಿಯನ್ನು ಬಿಟ್ಟು ಬೇರೆ ಯಾವ ಸಂಗತಿಯೂ ಕಾಣಿಸುವುದಿಲ್ಲ. ಪ್ರೀತಿಗಾಗಿ ಯಾವ ಮಟ್ಟಕ್ಕೆ ಇಳಿಯಲೂ ಹೇಸುವುದಿಲ್ಲ. ಅಂತಹದ್ದೇ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದಲ್ಲಿ ಇದೀಗ ಬೆಳಕಿಗೆ ಬಂದಿದೆ. ಮಹಾರಾಜ್‌ಗಂಜನ್‌ನ 4 ಮಕ್ಕಳ ತಾಯಿ, 40 ವರ್ಷದ ಮಹಿಳೆ ತಮಿಳುನಾಡಿನ 14 ವರ್ಷದ ಬಾಲಕನನ್ನು ಪ್ರೀತಿಸಿದ್ದಾಳೆ. ಸದ್ಯ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ದೇಶದ ಗಮನ ಸೆಳೆದಿದೆ (Viral News). ಅಚ್ಚರಿ ಎಂದರೆ ಇನ್‌ಸ್ಟಾಗ್ರಾಮ್ ರೀಲ್ಸ್ ಮೂಲಕ ಇವರು ಪರಿಚಿತರಾಗಿದ್ದರು.
40 ವರ್ಷದ ಮಹಿಳೆ 14 ವರ್ಷದ ಬಾಲಕ ತನ್ನ ಪ್ರಿಯಕರ ಎಂದು ಹೇಳಿ ನೌತನವಾ ಪೊಲೀಸ್ ಠಾಣೆ ಮೆಟ್ಟಿಲೇರುವ ಮೂಲಕ ಈ ಪ್ರಕರಣದ ಎಳೆ ಬಿಚ್ಚಿಕೊಂಡಿತು. ವಿಚಿತ್ರ ರಂದರೆ ಮಹಿಳೆಯ ದೊಡ್ಡ ಮಗನಿಗೆ ಈಗ 19 ವರ್ಷ. ಅಂದರೆ ಆಕೆಯ ಮಗನಿಗಿಂತೂ ಪ್ರಿಯಕರ 5 ವರ್ಷ ಚಿಕ್ಕವನು.
40 ವರ್ಷದ ಮಹಿಳೆ ವಿಚಿತ್ರ ಲವ್ ಸ್ಟೋರಿ:
A 40+ yr old woman (mother of 4) from Gorakhpur connected with a 14 yr old boy from Maharajganj via Insta Reels, claimed marriage, then complained to police when he refused to stay with her.
— Ghar Ke Kalesh (@gharkekalesh) May 26, 2026
Cops refused to force the minor & warned her of POCSO. She quietly withdrew the… pic.twitter.com/3F2HMEDBvB
ಘಟನೆ ವಿವರ
ಈ ಮಹಿಳೆ ಉತ್ತರ ಪ್ರದೇಶದ ಗೋರಾಖ್‌ಪುರ ಮೂಲದವಳು. ಕೆಲವು ದಿನಗಳ ಹಿಂದೆ ಆಕೆಗೆ ಮತ್ತು 14 ವರ್ಷದ ಬಾಲಕನಿಗೆ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಯಿತು. ಅವರಿಬ್ಬರು ರೀಲ್ಸ್‌ಗಳಿಗೆ ಪರಸ್ಪರ ಲೈಕ್ ಮಾಡುವ ಮೂಲಕ ಇನ್ನಷ್ಟು ಹತ್ತಿರವಾದರು. ಬಳಿಕ ನಿಧಾನವಾಗಿ ಮಾತುಕತೆ ಆರಂಭಿಸಿದರು. ಸಂಭಾಷಣೆ ಮುಂದುವರಿದಂತೆ ಭಾವನಾತ್ಮಕವಾಗಿ ಇಬ್ಬರು ಹತ್ತಿರವಾದರು. ಇದೀಗ ಆತ ನಿರ್ಲಕ್ಷಿಸುತ್ತಿದ್ದಾನೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ಆಕೆ ತಮಗಿಬ್ಬರಿಗೆ ಮದುವೆಯಾಗಿದೆ ಎನ್ನುವ ಆಘಾತಕಾರಿ ಸಂಗತಿಯನ್ನೂ ಬಹಿರಂಗಪಡಿಸಿದ್ದಾಳೆ. ಆದರೆ ದಾಖಲೆ ಒದಗಿಸುವಲ್ಲಿ ವಿಫಲವಾಗಿದ್ದು, ಈ ವಿಚಾರ ಸುಳ್ಳು ಎನ್ನುವುದು ಗೊತ್ತಾಗಿದೆ.
ʼಸಾರ್ವಜನಿಕ ಸ್ಥಳದಲ್ಲಿ ಸಭ್ಯತೆಯಿರಲಿʼ; ರಸ್ತೆಯಲ್ಲಿ ರೀಲ್ಸ್ ಮಾಡುತ್ತಿದ್ದ ಯುವತಿಯರಿಗೆ ತರಾಟೆ
4 ಮಕ್ಕಳ ತಾಯಿಯ ವಿಚಿತ್ರ ಲವ್ ಸ್ಟೋರಿ
ʼʼಈಗಾಗಲೇ ಮದುವೆಯಾಗಿರುವ 40 ವರ್ಷದ ಮಹಿಳೆಗೆ ನಾಲ್ವರು ಮಕ್ಕಳಿದ್ದಾರೆ. ಅದರಲ್ಲೂ ಆಕೆಯ ಪ್ರಿಯಕರನಿಗಿಂತ ದೊಡ್ಡ ಮಗ 5 ವರ್ಷ ದೊಡ್ಡವನುʼʼ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಂದರೆ ಮಗನಂತಿರುವ ಬಾಲಕನ ಮೇಲೆ ಆಕೆಗೆ ಪ್ರೀತಿಯ ಭಾವನೆ ಮೂಡಿದ್ದು ತಿಳಿದು ನೆಟ್ಟಿಗರು ದಂಗಾಗಿದ್ದಾರೆ.
ಮಗುವನ್ನು ಮೊದಲ ಮಹಡಿಯಿಂದ ಕೆಳಕ್ಕೆ ಜಿಗಿಸಿದ ತಂದೆ, ವಿಡಿಯೋ ನೋಡಿ
ಚೆನ್ನೈ ಮೂಲದ ಬಾಲಕ
ಈ ಬಾಲಕ ತಮಿಳುನಾಡಿನ ಚೆನ್ನೈ ಮೂಲದವನು. ಆತ ತಂದೆಯೊಂದಿಗೆ ವಾಸವಾಗಿದ್ದಾನೆ. ಅದುವರೆಗೆ ನಿರಂತರ ಚಾಟ್ ನಡೆಸುತ್ತಿದ್ದ ಬಾಲಕ ಇದ್ದಕ್ಕಿದ್ದಂತೆ ಯಾವುದೇ ಮೆಸೇಜ್‌ಗೆ ಉತ್ತರಿಸದಿದ್ದಾಗ ಕಂಗಾಲಾದ ಮಹಿಳೆ ನಾಟಕ ಆರಂಭಿಸಿದ್ದಾಳೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಆಕೆ ನೌತನವಾ ಪೊಲೀಸ್ ಠಾಣೆ ಮೆಟ್ಟಿಲೇರಿ, ಬಾಲಕನೊಂದಿಗೆ ತನಗೆ ಮದುವೆಯಾಗಿದ್ದು, ಆತ ಮೋಸ ಮಾಡಿದ್ದಾನೆ ಎಂದು ದೂರು ನೀಡಿದ್ದಾಳೆ. ತನಿಖೆ ಕೈಗೆತ್ತಿಕೊಂಡ ಮೊಲೀಸರು ಎರಡೂ ಕಡೆಯವರನ್ನು ಕರೆಸಿ ಮಾತುಕತೆ ನಡೆಸಿದ್ದಾರೆ. ಮಹಿಳೆ ಮದುವೆಯಾಗಿರುವ ದಾಖಲೆ ಒದಗಿಸಲು ವಿಫಲವಾಗಿರುವುದರಿಂದ ಆಕೆಯದು ಸುಳ್ಳು ಆರೋಪ ಎನ್ನುವುದು ಸಾಬೀತಾಗಿದೆ. ಎರಡೂ ಕಡೆಯವರು ದೂರು ನೀಡದ ಹಿನ್ನೆಲೆಯಲ್ಲಿ ಇನ್ನುಮುಂದೆ ಯಾವುದೇ ರೀತಿಯ ಸಂಪರ್ಕ ಹೊಂದಬಾರದೆಂದು ಎಚ್ಚರಿಸಿ ಕಳುಹಿಸಲಾಗಿದೆ.
ಇನ್ನಷ್ಟು ವೈರಲ್ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.