Viral Video: ಸೇತುವೆ ಅಂಚಿನಲ್ಲಿ ನೇತಾಡುತ್ತಾ ಪುಲ್-ಅಪ್ ಮಾಡಿದ ಭೂಪ! ಎದೆ ಝಲ್ಲೆನಿಸೋ ವಿಡಿಯೊ
Man pull-ups in bridge: ವ್ಯಕ್ತಿಯೊಬ್ಬ ಸೇತುವೆಯ ಅಂಚಿನಿಂದ ನೇತಾಡುತ್ತಾ ಪುಲ್-ಅಪ್ ಮಾಡಿದ್ದಾನೆ. ಅಸ್ಸಾಂನ ಧೋಲಾ-ಸಾದಿಯಾ ಸೇತುವೆ ಎಂದೇ ಜನಪ್ರಿಯವಾಗಿರುವ ಡಾ. ಭೂಪೇನ್ ಹಜಾರಿಕಾ ಸೇತುವೆ ಮೇಲೆ ವ್ಯಕ್ತಿಯೊಬ್ಬ ಜೀವಕ್ಕೆ ಅಪಾಯಕಾರಿಯಾಗಿರುವಂತಹ ಸಾಹಸ ಪ್ರದರ್ಶಿಸಿದ್ದಾನೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಹಲವರ ಕೆಂಗಣ್ಣಿಗೆ ಗುರಿಯಾಗಿದೆ.


ದಿಸ್ಪುರ್: ಸೇತುವೆಯ ಮೇಲೆ ವ್ಯಕ್ತಿಯೊಬ್ಬ ಅಪಾಯಕಾರಿ ಸಾಹಸ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್(Viral Video) ಆಗಿದೆ. ಅಸ್ಸಾಂನ ಧೋಲಾ-ಸಾದಿಯಾ ಸೇತುವೆ ಎಂದೇ ಜನಪ್ರಿಯವಾಗಿರುವ ಡಾ. ಭೂಪೇನ್ ಹಜಾರಿಕಾ ಸೇತುವೆ ಮೇಲೆ ವ್ಯಕ್ತಿಯೊಬ್ಬ ಜೀವಕ್ಕೆ ಅಪಾಯಕಾರಿಯಾಗಿರುವಂತಹ ಸಾಹಸ ಪ್ರದರ್ಶಿಸಿದ್ದಾನೆ.ವ್ಯಕ್ತಿಯು ಸೇತುವೆಯ ಅಂಚಿನಿಂದ ನೇತಾಡುತ್ತಾ ಪುಲ್-ಅಪ್ ಮಾಡಿದ್ದಾನೆ. ಹಾಗೆಯೇ ಆತನ ಜೊತೆಗಿರುವವರು ಈ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳುವ ಪ್ರಕಾರ, ಈ ಸಾಹಸವು ಹೊಸದಲ್ಲ. ಅನೇಕ ಮಂದಿ ಯುವಕರು ಸಾಮಾಜಿಕ ಮಾಧ್ಯಮಗಳಲ್ಲಿ ಖ್ಯಾತಿ ಪಡೆಯುವ ಉದ್ದೇಶದಿಂದ ಈ ರೀತಿ ವರ್ತಿಸುತ್ತಿರುವುದು ಸಾಮಾನ್ಯವಾಗಿದೆ ಎಂದು ಹೇಳಿದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೊ ವಿರುದ್ಧ ಸ್ಥಳೀಯರು ಮತ್ತು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಈ ಕೃತ್ಯವನ್ನು ಖಂಡಿಸಿದ್ದು, ಪೊಲೀಸರು ತ್ವರಿತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ವಿಡಿಯೊ ವೀಕ್ಷಿಸಿ:
What’s happening to our youth?
— Oxomiya Jiyori 🇮🇳 (@SouleFacts) August 5, 2025
Risking life and limb for a few likes and views on social media!
This shocking stunt by a young boy on the Dr. Bhupen Hazarika Setu (Dhola-Sadiya Bridge)—India’s longest river bridge—is not bravery, it’s sheer recklessness.
cc @assampolice… pic.twitter.com/WaBHMRcEO6
ಇಂತಹ ದುಸ್ಸಾಹಸಗಳು ದುರಂತ ಪರಿಣಾಮಗಳನ್ನು ಉಂಟುಮಾಡಬಹುದು. ಸೇತುವೆಗಳಂತಹ ಸಾರ್ವಜನಿಕ ಸ್ಥಳಗಳನ್ನು ಇಂತಹ ಅಜಾಗರೂಕ ಪ್ರದರ್ಶನಗಳಿಗೆ ಬಳಸಬಾರದು. ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಲು ಅಧಿಕಾರಿಗಳಿಗಳು ಭಾಗಿಯಾಗಿರುವವರನ್ನು ಗುರುತಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ವರದಕ್ಷಿಣೆಗಾಗಿ ನಡೀತು ಬೀದಿ ರಂಪಾಟ-ವಿಡಿಯೊ ವೈರಲ್