ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ನಡುರಸ್ತೆಯಲ್ಲಿ ಕಾರು ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡಿದ ಕಿಡಿಗೇಡಿ; ಮುಂದೇನಾಯ್ತು ನೋಡಿ

Viral Video: ಕುಡಿದ ಮತ್ತಿನಲ್ಲಿದ್ದ ಪುಣೆಯ ರೆಸ್ಟೋರೆಂಟ್‌ವೊಂದರ ಮಾಲೀಕನ ಮಗ ಗೌರವ್ ಅಹುಜಾ ನಡು ರಸ್ತೆಯಲ್ಲಿ ತನ್ನ ಬಿಎಂಡಬ್ಲ್ಯು ಕಾರನ್ನು ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡಿದ್ದಾನೆ. ಈ ಘಟನೆಯನ್ನು ದಾರಿಹೋಕರೊಬ್ಬರು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಂತರ ಪೊಲೀಸರು ಗೌರವ್ ಅಹುಜಾ ಹಾಗೂ ಆತನ ಜತೆಗಿದ್ದ ಆತನ ಸ್ನೇಹಿತ ಭಾಗ್ಯೇಶ್ ಓಸ್ವಾಲ್ ಅವನನ್ನು ಬಂಧಿಸಿದ್ದಾರೆ.

ಕುಡಿದು ಕಾರು ಓಡಿಸಿ ಈ ವ್ಯಕ್ತಿ ಮಾಡಿದ ಅವಾಂತರ ನೋಡಿ!

Profile pavithra Mar 10, 2025 12:32 PM

ಮುಂಬೈ: ಕುಡಿದ ಮತ್ತಿನಲ್ಲಿದ್ದ ಯುವಕನೊಬ್ಬ ಟ್ರಾಫಿಕ್ ಜಂಕ್ಷನ್‍ನಲ್ಲಿ, ನಡು ರಸ್ತೆಯಲ್ಲೇ ತನ್ನ ಬಿಎಂಡಬ್ಲ್ಯು ಕಾರನ್ನು ನಿಲ್ಲಿಸಿ ಮೂತ್ರ ವಿಸರ್ಜಿಸಿ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಈ ಘಟನೆ ಯೆರವಾಡಾದ ಶಾಸ್ತ್ರಿನಗರ ಪ್ರದೇಶದಲ್ಲಿ ನಡೆದಿದ್ದು, ದಾರಿ ಹೋಕರೊಬ್ಬರು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಆತನ ವಿರುದ್ದ ನೆಟ್ಟಿಗರು ಕಿಡಿಕಾರಿದ್ದಾರೆ. ನಂತರ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ವೈರಲ್ ವಿಡಿಯೊದಲ್ಲಿ ಯುವಕನೊಬ್ಬ ಕಾರಿನೊಳಗೆ ಕುಳಿತಿದ್ದರೆ, ಅವನ ಸ್ನೇಹಿತ ಕಾಲುದಾರಿಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವುದು ಸೆರೆಯಾಗಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ ಪೊಲೀಸರ ಗಮನಕ್ಕೆ ಬಂದಿದೆ. ಆರೋಪಿಯನ್ನು ಗೌರವ್ ಅಹುಜಾ ಎಂದು ಗುರುತಿಸಲಾಗಿದ್ದು, ಆತನ ಸ್ನೇಹಿತ ಭಾಗ್ಯೇಶ್ ಓಸ್ವಾಲ್ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ವೇಳೆ ಇಬ್ಬರು ಕುಡಿದಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ. ಹೀಗಾಗಿ ಗೌರವ್ ಅಹುಜಾ ಸಹಚರ ಓಸ್ವಾಲ್‌ನನ್ನು ಪೊಲೀಸರು ಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ. ಆದರೆ ಅಹುಜಾ ಪರಾರಿಯಾಗಿದ್ದಾನೆ. ಸಾರ್ವಜನಿಕರಿಗೆ ಉಪದ್ರವ, ದುಡುಕಿನ ಮತ್ತು ನಿರ್ಲಕ್ಷ್ಯದ ಚಾಲನೆ, ಸಾರ್ವಜನಿಕ ರಸ್ತೆಗಳಲ್ಲಿ ಅಪಾಯವನ್ನುಂಟು ಮಾಡುವುದು ಮತ್ತು ಇತರ ಅಪರಾಧಗಳಿಗಾಗಿ ಭಾರತೀಯ ನ್ಯಾಯ ಸಂಹಿತಾ ಮತ್ತು ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.



ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆದ ಈ ವಿಡಿಯೊ ನೋಡಿ ಅನೇಕರು ಯುವಕರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಅನೇಕ ವರದಿಗಳ ಪ್ರಕಾರ, ಆರೋಪಿ ಪುಣೆಯ ರೆಸ್ಟೋರೆಂಟ್ ಮಾಲೀಕನ ಮಗನಾಗಿದ್ದು, ಆತ ತನ್ನ ಮಗನ ನಡವಳಿಕೆಯ ಬಗ್ಗೆ ಮುಜುಗರ ವ್ಯಕ್ತಪಡಿಸಿದ್ದಾನೆ ಎನ್ನಲಾಗಿದೆ.

ಈ ಘಟನೆಯ ನಂತರ ಗೌರವ್ ಅಹುಜಾ ವಿಡಿಯೊ ಮೂಲಕ ತನ್ನ ಕೃತ್ಯಗಳಿಗೆ ಕ್ಷಮೆಯಾಚಿಸಿ ಅದನ್ನು ಪೋಸ್ಟ್ ಮಾಡಿದ್ದಾನೆ. ಇದಕ್ಕಾಗಿ ತಮ್ಮ ಕುಟುಂಬಕ್ಕೆ ತೊಂದರೆ ನೀಡದಂತೆ ಸಾರ್ವಜನಿಕರು ಮತ್ತು ಅಧಿಕಾರಿಗಳನ್ನು ಒತ್ತಾಯಿಸಿದ್ದಾನೆ. ನಂತರ ಆತ ಪೊಲೀಸರಿಗೆ ಶರಣಾಗಿದ್ದಾನೆ.

ಆರೋಪಿ ಗೌರವ್ ಅಹುಜಾನನ್ನು ಮುಂಬೈ ಪೊಲೀಸರು ಸತಾರಾ ಜಿಲ್ಲೆಯ ಕರಡ್ ಪ್ರದೇಶದಲ್ಲಿ ಬಂಧಿಸಿದ್ದಾರೆ. ಆರೋಪಿಗಳ ವೈದ್ಯಕೀಯ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಲಾಗಿದ್ದು, ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಕುಡಿದ ಮತ್ತಿನಲ್ಲಿ ಫುಟ್‌ಪಾತ್ ಮೇಲೆ ಗಾಡಿ ಓಡಿಸಿದ್ದಲ್ಲದೇ, ವೃದ್ಧನಿಗೆ ಥಳಿಸಿದ ಬೈಕ್‌ ಸವಾರ; ವಿಡಿಯೊ ಪುಲ್‌ ವೈರಲ್

ಇತ್ತೀಚೆಗೆ ಕುಡಿದ ಮತ್ತಿನಲ್ಲಿ ಬೈಕ್ ಸವಾರನೊಬ್ಬ ಫುಟ್‍ಪಾತ್‍ ಮೇಲೆ ಗಾಡಿ ಓಡಿಸಿದ್ದಾನೆ. ಈ ಕುರಿತು ಪ್ರಶ್ನಿಸಿದ ವೃದ್ಧನ ಜತೆ ಬೈಕ್‌ ಸವಾರ ಅನುಚಿತವಾಗಿ ವರ್ತಿಸಿದ್ದಾನೆ. ಹೆಲ್ಮೆಟ್ ಇಲ್ಲದ ವ್ಯಕ್ತಿ ತನ್ನ ಬೈಕ್‍ ಅನ್ನು ಫುಟ್‍ಪಾತ್‍ನಲ್ಲಿ ಓಡಿಸಿದ್ದಲ್ಲದೇ, ಮುಖ್ಯ ರಸ್ತೆಯಲ್ಲಿ ಬೈಕ್ ಓಡಿಸುವಂತೆ ಹೇಳಿದ ವೃದ್ಧನಿಗೆ ಮನಬಂದಂತೆ ಥಳಿಸಿ ನೆಲಕ್ಕೆ ತಳ್ಳಿ ಕಪಾಳಮೋಕ್ಷ ಮಾಡಿದ್ದಾನೆ. ಈ ವಿಡಿಯೊ ಕೂಡ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.