ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜಬಲ್ಪುರ ದೋಣಿ ದುರಂತದ ಕೊನೆ ಕ್ಷಣದ ವಿಡಿಯೊ: ಆಡಳಿತ ಮಂಡಳಿಯ ವೈಫಲ್ಯವೇ ಕಾರಣ?

Viral Video: ನದಿಯ ಅಲೆಗಳ ಮೇಲೆ ಸಾಗುತ್ತಿದ್ದ ದೋಣಿಯೇ ಪ್ರಯಾಣಿಕರ ಪಾಲಿಗೆ ಯಮ ನಾಗಬಹುದು ಎನ್ನುವ ಊಹೆಯೂ ಯಾರಿಗೂ ಇರಿಲಲ್ಲ. ಈ ದುರ್ಘಟನೆಯಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿದ್ದು, 28 ಮಂದಿಯನ್ನು ರಕ್ಷಿಸಲಾಗಿದೆ. ಇನ್ನೂ 6 ಮಂದಿ ನಾಪತ್ತೆಯಾಗಿದ್ದಾರೆ. ಈ ಘಟನೆಗೂ ಮೊದಲು ಚಿತ್ರೀಕರಿಸಿದ ವಿಡಿಯೊವೊಂದು ವೈರಲ್ ಆಗಿದ್ದು ಅಲ್ಲಿನ ಸಿಬ್ಬಂದಿಗಳು ಯಾವುದೇ ಸುರಕ್ಷತೆ ಮಾನದಂಡಗಳನ್ನು ಪಾಲಿಸಿಲ್ಲ. ಸದ್ಯ ಪ್ರವಾಸಿಗರ ಜೀವದ ಜೊತೆ ಬೇಜವ್ದಾರಿ ವಹಿಸಿದ ಅಲ್ಲಿನ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಜಬಲ್ಪುರ ಕ್ರೂಸ್ ದುರಂತಕ್ಕೆ ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣ?

ಜಬಲ್ಪುರ ಕ್ರೂಸ್ ದುರಂತ -

Profile
Pushpa Kumari May 2, 2026 3:10 PM

ಜಬಲ್ಪುರ,ಮೇ.2: ಮಧ್ಯಪ್ರದೇಶದ ಜಬಲ್‌ಪುರ್‌ನ (Jabalpur) ಬಾರ್ಗಿಯಲ್ಲಿ (Bargi Dam) ದೋಣಿ ದುರಂತ (Cruise Tragedy) ಸಂಭವಿಸಿದ್ದು ಇಡೀ ದೇಶವೇ ಬೆಚ್ಚಿ ಬಿದ್ದಿದೆ. ಈ ದುರಂತದಲ್ಲಿ, ಕನಿಷ್ಠ 9 ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದು ಕಾರ್ಯಾಚರಣೆ ವೇಳೆ ಪರಸ್ಪರ ಬಿಗಿದಪ್ಪಿ ಕೊಂಡಿದ್ದ ತಾಯಿ-ಮಗುವಿನ ಮೃತದೇಹವು ಪತ್ತೆಯಾಗಿತ್ತು..ಈ ದೃಶ್ಯ ಮಾತ್ರ ಎಲ್ಲರನ್ನು ಮರುಗಿಸುವಂತೆ ಮಾಡಿದ್ದು ಕರುಳು ಹಿಂಡುವಂತಿದೆ. ಸದ್ಯ ಈ ದುರಂತಕ್ಕೆ ಯಾವುದೇ ಮುನ್ನೆಚ್ಚರಿಕೆ ವಹಿಸದೇ ಇರುವುದೇ ಕಾರಣ ಎಂದು ತಿಳಿದು ಬಂದಿದೆ.‌ ಪ್ರಯಾಣಿಕರು ಲೈಫ್ ಜಾಕೆಟ್ ಹಾಕದೇ ಪ್ರಯಾಣ ಮಾಡಿದ್ದ ಕೊನೆ ಕ್ಷಣದ ವಿಡಿಯೊ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ.

ನದಿಯ ಅಲೆಗಳ ಮೇಲೆ ಸಾಗುತ್ತಿದ್ದ ದೋಣಿಯೇ ಪ್ರಯಾಣಿಕರ ಪಾಲಿಗೆ ಯಮನಾಗಬಹುದು ಎನ್ನುವ ಊಹೆಯೂ ಯಾರಿಗೂ ಇರಿಲಲ್ಲ. ಈ ದುರ್ಘಟನೆಯಲ್ಲಿ ಒಂಬತ್ತು ಮಂದಿ ಸಾವನ್ನ ಪ್ಪಿದ್ದು, 28 ಮಂದಿಯನ್ನು ರಕ್ಷಿಸಲಾಗಿದೆ. ಇನ್ನೂ 6 ಮಂದಿ ನಾಪತ್ತೆಯಾಗಿದ್ದಾರೆ. ಈ ಘಟನೆಗೂ ಮೊದಲು ಚಿತ್ರೀಕರಿಸಿದ ವಿಡಿಯೊ ವೊಂದು ವೈರಲ್ ಆಗಿದ್ದು ಅಲ್ಲಿನ ಸಿಬ್ಬಂದಿಗಳು ಯಾವುದೇ ಸುರಕ್ಷತೆ ಮಾನದಂಡಗಳನ್ನು ಪಾಲಿಸಿಲ್ಲ. ಸದ್ಯ ಪ್ರವಾಸಿಗರ ಜೀವದ ಜೊತೆ ಬೇಜವ್ದಾರಿ ವಹಿಸಿದ ಅಲ್ಲಿನ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ವಿಡಿಯೋ ನೋಡಿ:

ವೀಡಿಯೊದಲ್ಲಿ ಪ್ರವಾಸಿಗರು ದೋಣಿ ಸವಾರಿ, ಅಲ್ಲಿನ ರಮಣೀಯ ನೋಟವನ್ನು ಆನಂದಿ ಸುತ್ತಿರುವುದು ಕಂಡು ಬರುತ್ತದೆ‌. ಆದರೆ ಅವರಲ್ಲಿ ಕೆಲವರು ಲೈಫ್ ಜಾಕೆಟ್ ಧರಿಸಿರಲಿಲ್ಲ.. ಬಲವಾದ ಗಾಳಿ ಬೀಸುತ್ತಿದ್ದರೂ ಸಹ ಪ್ರಯಾಣ ಸ್ಥಗಿತಗೊಳಿಸದೆ ಮುಂದುವರಿಸಲಾಗಿತ್ತು. ಏಕಾಏಕಿ ಹವಾಮಾನ ವೈಪರೀತ್ಯದಿಂದ ಬಿರುಗಾಳಿ ಬೀಸಿದ್ದು ಈ ಅಘಾತಕ್ಕೂ ಕಾರಣವಾಯಿತು.

Viral Video: ರೀಲ್ಸ್‌ಗಾಗಿ ಮೊಸಳೆಯ ಬಾಲ ಹಿಡಿಯಲು ಯತ್ನಿಸಿದ ಯುವಕ: ಅಪಾಯಕಾರಿ ವಿಡಿಯೊ ವೈರಲ್

ಹವಾಮಾನ ವೈಪರೀತ್ಯದ ಮುನ್ಸೂಚನೆ ಇದ್ದರೂ ಸಹ ದೋಣೆ ಸವಾರಿ ಆರಂಭಿಸಿದ್ದು ಈ ದೊಡ್ಡ ದುರಂತಕ್ಕೆ ಕಾರಣವಾಗಿದೆ. ಈ ಪ್ರಕರಣವನ್ನು ವಿವರವಾಗಿ ತನಿಖೆ ಮಾಡಲು 3 ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿಲಾಗಿದೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ: ಪ್ರಸ್ತುತ ಎನ್ ಡಿ ಆರ್ ಎಫ್ ,ಎಸ್ ಡಿ ಅರ್ ಎಫ್ ಮತ್ತು ಸೇನಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ನಾಪತ್ತೆಯಾದವರನ್ನು ಹುಡುಕುವ ಶೋಧ ಮುಂದುವರಿದಿದೆ..