ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಕುಡುಕರೇ ಎಚ್ಚರ; ಅಮಲಿನಲ್ಲಿ ಮಲಗಿದ್ದ ವ್ಯಕ್ತಿಯ ಜನನಾಂಗಕ್ಕೆ ನಟ್ ಸಿಲುಕಿಸಿದ ಕಿಡಿಗೇಡಿಗಳು; ಕೊನೆಗೆ ತೆಗೆದಿದ್ದು ಹೇಗೆ?

46 ವರ್ಷದ ವ್ಯಕ್ತಿಯ ಜನನಾಂಗಕ್ಕೆ ಕಬ್ಬಿಣದ ನಟ್‌ವೊಂದು ಸಿಲುಕಿಕೊಂಡಿದ್ದು, ಇದನ್ನು ತೆಗೆಯಲು ವೈದ್ಯರಿಂದ ಸಾಧ್ಯವಾಗದ ಕಾರಣ ಕೊನೆಗೆ ಅಗ್ನಿಶಾಮಕದಳದವರ ಮೊರೆ ಹೋಗಬೇಕಾಯಿತು. ಈ ಘಟನೆ ಕೇರಳದ ಕಾಞಂಗಾಡ್‍ನಲ್ಲಿ ನಡೆದಿದ್ದು, ಸಿಕ್ಕಾಪಟ್ಟೆ ವೈರಲ್‌ (Viral News) ಆಗಿದೆ.

ಮಲಗಿದ್ದ ವ್ಯಕ್ತಿಯ ಜನನಾಂಗಕ್ಕೆ ನಟ್‌ ಸಿಕ್ಕಿಸಿದ ಕಿಡಿಗೇಡಿಗಳು

ಸಾಂದರ್ಭಿಕ ಚಿತ್ರ.

Profile pavithra Mar 29, 2025 7:03 PM

ತಿರುವನಂತಪುರಂ: ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಗಳಿಗೆ ಕೆಲವರು ತಮಾಷೆ ಮಾಡುತ್ತಾರೆ. ಅವರಿಗೆ ಕೀಟಲೆಗಳನ್ನು ಮಾಡುತ್ತಿರುತ್ತಾರೆ. ಆದರೆ ಇಲ್ಲೊಬ್ಬ 46 ವರ್ಷದ ವ್ಯಕ್ತಿ ಕುಡಿದ ಮತ್ತಿನಲ್ಲಿ ಮಲಗಿದ್ದಾಗ ಯಾರೋ ಆತನ ಜನನಾಂಗಕ್ಕೆ ಕಬ್ಬಿಣದ ನಟ್‌ವೊಂದನ್ನು ಸಿಲುಕಿಸಿದ್ದಾರೆ. ಇದರಿಂದ ನೋವು ಸಹಿಸಲಾರದೆ ಆತ ವೈದ್ಯರ ಬಳಿ ಹೋಗಿದ್ದಾನೆ. ಆದರೆ ವೈದ್ಯರಿಗೆ ಅದನ್ನು ತೆಗೆಯಲು ಆಗದ ಕಾರಣ ಅಗ್ನಿಶಾಮಕದಳದವರ ಮೊರೆ ಹೋಗಬೇಕಾಯಿತು. ಈ ಘಟನೆ ಕೇರಳದ ಕಾಸರಗೋಡು ಜಿಲ್ಲೆಯ ಕಾಞಂಗಾಡ್‍ನಲ್ಲಿ ನಡೆದಿದೆ. ಇದು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌(Viral News) ಆಗಿದೆ.

ವ್ಯಕ್ತಿಯ ಶಿಶ್ನ ನಟ್‍ನೊಳಗೆ ಸಿಲುಕಿದ ಕಾರಣ ಮಾಂಸಖಂಡ ಊದಿಕೊಂಡು ಆತನಿಗೆ ಮೂತ್ರ ವಿಸರ್ಜನೆ ಮಾಡಲು ಆಗದೆ ಒದ್ದಾಡಿದ್ದಾನೆ. ಅಲ್ಲದೇ ಅದರ ನೋವನ್ನು ಸಹಿಸಲಾಗದೆ ಆತ ರಾತ್ರಿ 8 ಗಂಟೆ ಸುಮಾರಿಗೆ ಕಾಞಂಗಾಡ್ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾನೆ. ಅಲ್ಲಿ ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ನಟ್ ಅನ್ನು ತೆಗೆದುಹಾಕಲು ಪ್ರಯತ್ನಿಸಿದ್ದಾರೆ. ಆದರೆ ಅದು ಯಶಸ್ವಿಯಾಗಲಿಲ್ಲ. ಕೊನೆಗೆ ಆಸ್ಪತ್ರೆಯ ಅಧಿಕಾರಿಗಳು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

ಹಲವು ಗಂಟೆಗಳ ಪ್ರಯತ್ನದ ನಂತರ, ಆತನಿಗೆ ಅರಿವಳಿಕೆ ನೀಡಿ ಪ್ರಜ್ಞೆ ತಪ್ಪಿದ ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ರಿಂಗ್‍ ಕಟ್ಟರ್‌ ಬಳಸಿ ನಟ್‍ ಅನ್ನು ಕತ್ತರಿಸುವ ಮೂಲಕ ಆತನ ನೋವಿಗೆ ಮುಕ್ತಿ ನೀಡಿದ್ದಾರೆ. ಹಾಗೇ ಕಟ್ಟರ್‌ನಿಂದ ಕತ್ತರಿಸುವಾಗ ನಟ್ ಬಿಸಿಯಾಗುವುದರಿಂದ, ಶಿಶ್ನಕ್ಕೆ ಹಾನಿಯಾಗುವ ಹೆಚ್ಚಿನ ಅಪಾಯವಿದೆ. ಆದ್ದರಿಂದ ನೀರನ್ನು ಸುರಿಯುವ ಮೂಲಕ ಮತ್ತು ತಂಪಾಗಿಸುವ ಮೂಲಕ ನಟ್‍ನ ಎರಡೂ ಭಾಗಗಳನ್ನು ಕತ್ತರಿಸಿ ತೆಗೆದುಹಾಕಲು ಬಹಳ ಸಮಯ ತೆಗೆದುಕೊಂಡಿತು. ನಟ್‍ ಅವನ ಜನನಾಂಗದಲ್ಲಿ ಸಿಲುಕಿ ಎರಡು ದಿನಗಳಾಗಿರಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ ತಾನು ಕುಡಿದ ಮಲಗಿದ್ದಾಗ ಕೆಲವು ಅಪರಿಚಿತ ಜನರು ನಟ್‍ ಅನ್ನು ತನ್ನ ಶಿಶ್ನಕ್ಕೆ ಸಿಲುಕಿಸಿದ್ದಾರೆ ಎಂದು ಆ ವ್ಯಕ್ತಿ ಹೇಳಿದ್ದಾನೆ. ಇದರಿಂದ ಅವನಿಗೆ ಮೂತ್ರ ವಿಸರ್ಜನೆ ಮಾಡಲು ತೊಂದರೆಯಾಗಿತ್ತಂತೆ. ಎರಡು ದಿನಗಳ ಕಾಲ ಅದನ್ನು ತೆಗೆಯಲು ಪ್ರಯತ್ನಿಸಿದರೂ ಯಾವುದೇ ಫಲಿತಾಂಶ ಸಿಗದ ಕಾರಣ ನಂತರ ತಾನು ಆಸ್ಪತ್ರೆಗೆ ಹೋದೆ ಎಂದು ಆ ವ್ಯಕ್ತಿ ಹೇಳಿದ್ದಾನೆ.

ಈ ಸುದ್ದಿಯನ್ನೂ ಓದಿ:Viral Video: ಮೈಕಲ್ ಜಾಕ್ಸನ್‌ನಂತೆ ಸೊಂಟ ಬಳುಕಿಸಿದ ಪ್ರೊಫೆಸರ್; ಶಾಕ್‌ ಆದ ವಿದ್ಯಾರ್ಥಿಗಳು! ವಿಡಿಯೊ ವೈರಲ್

ಈ ರೀತಿಯ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ರೋಹಿಗ್ನ್ಯಾ ವ್ಯಕ್ತಿಯೊಬ್ಬನ ಶಿಶ್ನದಲ್ಲಿ ಉಂಗುರ ಸಿಕ್ಕಿಹಾಕಿಕೊಂಡಿದ್ದು, ನಂತರ ಅದನ್ನು ತೆಗೆಯಲು ಆಸ್ಪತ್ರೆಯವರು ಅಗ್ನಿಶಾಮಕ ಮತ್ತು ರೆಸ್ಕ್ಯು ಇಲಾಖೆಯ ಸಹಾಯವನ್ನು ಪಡೆದುಕೊಂಡಿದ್ದರು. ವ್ಯಕ್ತಿಯ ಜನನಾಂಗದಿಂದ ಉಂಗುರವನ್ನು ತೆಗೆದುಹಾಕಲು ಸಹಾಯವನ್ನು ಕೋರಿ ಅಂಪಾಂಗ್ ಆಸ್ಪತ್ರೆಯಿಂದ ಪಂಡನ್ ಇಂಡಾ ನಿಲ್ದಾಣದ ಸಿಬ್ಬಂದಿಗೆ ಕರೆ ಮಾಡಿದ್ದರು. ಘಟನಾ ಸ್ಥಳಕ್ಕೆ ಬಂದ ಸಿಬ್ಬಂದಿ ಉಂಗುರವನ್ನು ಕತ್ತರಿಸಿ ಅದನ್ನು ತೆಗೆದುಹಾಕುವಲ್ಲಿ ಯಶಸ್ವಿಯಾಗಿದ್ದಾರೆ.