ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ವಿದೇಶದ ಬೀದಿಯಲ್ಲಿ ಲಂಗು ಲಗಾಮಿಲ್ಲದೇ ಕುಣಿದ ಭೂಪ! ನೆಟ್ಟಿಗರು ಹೇಳಿದ್ದೇನು?

ವಿದೇಶದ ಜನನಿಬಿಡ ರಸ್ತೆಯ ಫುಟ್‍ಪಾತ್‍ನಲ್ಲಿ ಭಾರತೀಯ ವ್ಯಕ್ತಿಯೊಬ್ಬ ವಿಚಿತ್ರವಾಗಿ ಡ್ಯಾನ್ಸ್ ಮಾಡಿ ದಾರಿಹೋಕರಿಗೆ ತೊಂದರೆಯನ್ನುಂಟುಮಾಡಿದ್ದಾನೆ. ಹಾಗೂ ಅದಕ್ಕೆ ಆತ ಕ್ಷಮೆ ಕೇಳಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿ ಅನೇಕರು ಭಾರತೀಯರ ವರ್ತನೆಯನ್ನು ಟೀಕಿಸಿದ್ದಾರೆ.

ವಿದೇಶದ ನಡುರಸ್ತೆಯಲ್ಲಿ ಕುಣಿದು ಕುಪ್ಪಳಿದ ಯುವಕ;ಕೊನೆಗೆ ಆಗಿದ್ದೇನು?

Profile pavithra Jul 16, 2025 1:04 PM

ವಿದೇಶದ ಜನನಿಬಿಡ ರಸ್ತೆಯಲ್ಲಿ ಭಾರತೀಯ ವ್ಯಕ್ತಿಯೊಬ್ಬ ಡ್ಯಾನ್ಸ್ ಮಾಡಿದ ವಿಡಿಯೊವೊಂದು ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.ನೆಟ್ಟಿಗರು ಆತನ ವಿರುದ್ಧ ಕಿಡಿಕಾರಿದ್ದಾರೆ.ವೈರಲ್ ಆಗಿರುವ ವಿಡಿಯೊದಲ್ಲಿ ಆ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಹಾಡೊಂದಕ್ಕೆ ಡ್ಯಾನ್ಸ್ ಮಾಡುವುದನ್ನು ಸೆರೆಹಿಡಿಯಲಾಗಿದೆ. ಫುಟ್‍ಪಾತ್‍ನ ಮಧ್ಯದಲ್ಲಿ ನಿಂತು ಅವನು ದಾರಿಹೋಕರ ದಾರಿಗೆ ಅಡ್ಡಬರುತ್ತಾ ಡ್ಯಾನ್ಸ್ ಮಾಡಿದ್ದಾನೆ. ಈ ಸುದ್ದಿ ಈಗ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದ್ದು, ಈಗಾಗಲೇ 6 ಲಕ್ಷ ವ್ಯೂವ್ಸ್ ಮತ್ತು ಸಾವಿರಾರು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ. ಕಾಮೆಂಟ್‌ಗಳ ವಿಭಾಗದಲ್ಲಿ ನೆಟ್ಟಿಗರು ರೀಲ್‌ಮೇಕರ್‌ನನ್ನು ಟೀಕಿಸಿದ್ದಾರೆ. ಒಬ್ಬರು "ಅವರ ವೀಸಾ ರದ್ದುಗೊಳಿಸಿ" ಎಂದು ಒತ್ತಾಯಿಸಿದ್ದಾರೆ. ಮತ್ತೊಬ್ಬರು ಆತನಿಗೆ ನಾಗರೀಕತೆಯ ಜ್ಞಾನವಿಲ್ಲ ಎಂದು ಟೀಕಿಸಿದ್ದಾರೆ. ಇನ್ನೊಬ್ಬರು, "ಇಂಥವರು ವೀಸಾಗಳನ್ನು ಹೇಗೆ ಪಡೆಯುತ್ತಿದ್ದಾರೆ?" ಎಂದು ಕಾಮೆಂಟ್ ಮಾಡಿದ್ದಾರೆ.

ಒಬ್ಬರು, "ಅರಿವಿಲ್ಲದ ಜನರು ವಿದೇಶಗಳಿಗೆ ಏಕೆ ಹೋಗುತ್ತಾರೆ ಎಂದು ನನಗೆ ಅರ್ಥವಾಗುತ್ತಿಲ್ಲ" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, "ಭಾರತ ಆಧುನೀಕರಣದತ್ತ ಬಹಳ ದೂರ ಸಾಗಬೇಕಾಗಿದೆ. ನಾಗರಿಕ ಜವಾಬ್ದಾರಿ ಮತ್ತು ನೈತಿಕತೆ ಪ್ರಾಥಮಿಕ ಶಾಲೆಯಿಂದ ಶುರುವಾಗಬೇಕು" ಎಂದು ಬರೆದಿದ್ದಾರೆ.

ಇತ್ತೀಚೆಗೆ, ವಿದೇಶಗಳಲ್ಲಿನ ಸಾರ್ವಜನಿಕ ಪ್ರವಾಸಿ ಸ್ಥಳಗಳಲ್ಲಿ ಭಾರತೀಯ ಪ್ರವಾಸಿಗರು ಅನುಚಿತವಾಗಿ ವರ್ತಿಸುವ ಇಂತಹ ಅನೇಕ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ನೆಟ್ಟಿಗರು ಭಾರತೀಯರ ಇಂತಹ ಎಲ್ಲಾ ಕೃತ್ಯಗಳನ್ನು ಖಂಡಿಸಿದ್ದಾರೆ ಮತ್ತು ಅವರ ನಾಗರಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಪ್ಯಾರಾಗ್ಲೈಡಿಂಗ್‌ ವೇಳೆ ಭಾರೀ ಅವಘಡ; ಮೋಜಿನ ಆಟ ಪ್ರಾಣಕ್ಕೆ ಕುತ್ತಾಯ್ತು! ಶಾಕಿಂಗ್‌ ವಿಡಿಯೊ ಇಲ್ಲಿದೆ

ಇತ್ತೀಚೆಗಷ್ಟೇ ಕೆನಡಾದಲ್ಲಿ ಕಾರಿನಲ್ಲಿ ಬಂದ ದಂಪತಿ ಕಾಡಿನ ರಸ್ತೆಬದಿಯಲ್ಲಿ ಕಸಗಳನ್ನು ಎಸೆದಿದ್ದರು ಈ ದೃಶ್ಯವನ್ನು ದಾರಿಹೋಕರೊಬ್ಬರು ರೆಕಾರ್ಡ್ ಮಾಡಿ ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು ಕಸ ಎಸೆದ ದಂಪತಿ ಭಾರತೀಯ ಮೂಲದವರು ಎಂದ ನೆಟ್ಟಿಗರು ಅವರ ವಿರುದ್ಧ ಕಿಡಿಕಾರಿದ್ದಾರೆ. ಕೆನಡಾವನ್ನು ಕಲುಷಿತಗೊಳಿಸಿದ್ದಕ್ಕಾಗಿ ಅನೇಕರು ಭಾರತೀಯರನ್ನು ಟೀಕಿಸಿದ್ದಾರೆ. ಮತ್ತು ಇನ್ನೂ ಹಲವರು ದಂಪತಿಯನ್ನು ಸಮರ್ಥಿಸಿಕೊಂಡಿದ್ದಾರೆ.