ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕೈಯಿಂದಲ್ಲ, ಬಾಯಿಯಿಂದ ನಾಗರಹಾವನ್ನು ಹಿಡಿದ ವ್ಯಕ್ತಿ; ಮೈಜುಮ್ಮೆನ್ನಿಸುವ ವಿಡಿಯೊ ವೈರಲ್

Cobra caught with mouth: ಕೈಯಿಂದಲ್ಲ, ಬಾಯಿಯಿಂದಲೇ ನಾಗರಹಾವನ್ನು ಹಿಡಿದ ವ್ಯಕ್ತಿಯೊಬ್ಬನ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಈ ಅಪಾಯಕಾರಿ ಕೃತ್ಯವು ಬೆಚ್ಚಿ ಬೀಳಿಸುವಂತಿದ್ದು, ವ್ಯಕ್ತಿಯ ಧೈರ್ಯ ಮತ್ತು ಅಜಾಗರೂಕತೆಯ ಬಗ್ಗೆ ಚರ್ಚೆ ಹುಟ್ಟು ಹಾಕಿದೆ. ಒಡಿಶಾದ ಬಾಲಸೋರ್‌ನಲ್ಲಿ ಈ ಘಟನೆ ನಡೆದಿದೆ.

ಕೈಯಿಂದಲ್ಲ, ಬಾಯಿಯಿಂದ ನಾಗರಹಾವನ್ನು ಹಿಡಿದ ವ್ಯಕ್ತಿ

ಬಾಯಿಯಿಂದ ನಾಗರಹಾವನ್ನು ಹಿಡಿದ ವ್ಯಕ್ತಿ -

Priyanka P
Priyanka P Feb 3, 2026 6:59 PM

ಭುವನೇಶ್ವರ, ಫೆ. 3: ವ್ಯಕ್ತಿಯೊಬ್ಬ ತನ್ನ ಕೈಗಳಿಂದ ಮಾತ್ರವಲ್ಲದೆ, ಬಾಯಿಯಿಂದಲೂ ನಾಗರಹಾವನ್ನು ನಿಭಾಯಿಸುವ ಮೈಜುಮ್ಮೆನ್ನಿಸುವ ವಿಡಿಯೊವೊಂದು ಬೆಳಕಿಗೆ ಬಂದಿದೆ. ಒಡಿಶಾದ (Odisha) ಬಾಲಸೋರ್‌ನಲ್ಲಿ ಈ ಘಟನೆ ನಡೆದಿದೆ. ರೆಮುನಾದ ಖಗಾ ಭಾಯ್ ಎಂಬ ವ್ಯಕ್ತಿಯು ಹಾವನ್ನು ಹಿಡಿದು ತನ್ನ ಬಾಯಿಗೆ ಹಾಕಿಕೊಂಡಿದ್ದಾನೆ. ಅವನು ಅದನ್ನು ಬಹಳ ವೇಗವಾಗಿ ಮಾಡಿದ್ದಾನೆ. ಹಾವಿಗೆ ಪ್ರತಿಕ್ರಿಯಿಸಲು ಅವಕಾಶ ನೀಡಲಿಲ್ಲ. ಇದರ ವಿಡಿಯೊ ಸೋಶಿಯಲ್‌ ಮೀಡಿ ವೈರಲ್ (viral video) ಆಗಿದೆ.

ನಂತರ ಅವನು ಸರ್ಪವನ್ನು ಬಾಯಿಯಲ್ಲಿ ಹಿಡಿದುಕೊಂಡು ತಿರುಗಾಡಿದ್ದಾನೆ. ಅದನ್ನು ನೆಲದ ಮೇಲೆ ಇಟ್ಟು ತನ್ನ ಬರಿ ಕೈಗಳಿಂದ ಹಿಡಿದುಕೊಂಡಿದ್ದಾನೆ. ಒಂದು ಹಂತದಲ್ಲಿ, ಯಾರೋ ಅವನಿಂದ ಹಾವನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಅವನು ಅವರನ್ನು ದೂರ ತಳ್ಳಿ, ಹಿಂದೆ ನಿಲ್ಲುವಂತೆ ಹೇಳಿದ್ದಾನೆ. ಜನಸಮೂಹವು ಈ ಧೈರ್ಯಶಾಲಿ ಕೃತ್ಯಕ್ಕೆ ಸಾಕ್ಷಿ.

ವಿಡಿಯೊ ವೀಕ್ಷಿಸಿ:



ಕೆಲವು ಸೆಕೆಂಡ್‌ನ ನಂತರ, ಅವನು ಹಾವನ್ನು ನಿಧಾನವಾಗಿ ನೆಲದ ಮೇಲೆ ಇಟ್ಟು, ಅದರೊಂದಿಗೆ ಆಟವಾಡಿದ್ದಾನೆ. ನಂತರ ಯಾವುದೇ ಉಪಕರಣಗಳಿಲ್ಲದೆ ಹಾವನ್ನು ಚೀಲದಲ್ಲಿ ಇಟ್ಟಿದ್ದಾನೆ. ವಿಡಿಯೊದ ಕೊನೆಯಲ್ಲಿ ಅವನು ಮತ್ತೊಂದು ಹಾವನ್ನು ಎತ್ತಿಕೊಳ್ಳುವುದನ್ನು ಸಹ ಕಾಣಬಹುದು.

ಪ್ರತ್ಯೇಕ ಘಟನೆಯೊಂದರಲ್ಲಿ, ಮದ್ಯದ ಅಮಲಿನಲ್ಲಿದ್ದ ಆಂಧ್ರಪ್ರದೇಶದ ವ್ಯಕ್ತಿಯೊಬ್ಬ ಮನೆಗೆ ಹೋಗುತ್ತಿದ್ದಾಗ ವಿಷಪೂರಿತ ಕಟ್ಟು ಹಾವು ಕಚ್ಚಿದೆ. ಸಹಾಯಕ್ಕಾಗಿ ಓಡುವ ಬದಲು, ಆ ವ್ಯಕ್ತಿ ಹಾವನ್ನು ಹಿಡಿದು ಅದರ ತಲೆಯನ್ನು ಕಚ್ಚಿದ್ದಾನೆ.

ನಿವೃತ್ತ ಸೇನಾ ಅಧಿಕಾರಿಯನ್ನು ಕಾರ್‌ನ ಬಾನೆಟ್ ಮೇಲೆ 1 ಕಿ.ಮೀ. ಎಳೆದೊಯ್ದ ಕಿಡಿಗೇಡಿಗಳು

ನಂತರ ಅವನು ಸತ್ತ ಹಾವನ್ನು ಮನೆಗೆ ಹೊತ್ತುಕೊಂಡು ಹೋಗಿ, ತನ್ನ ಪಕ್ಕದಲ್ಲಿ ಇಟ್ಟುಕೊಂಡು, ಅದರೊಂದಿಗೆ ಮಲಗಿದ್ದನು ಎಂದು ಸ್ಥಳೀಯರು ಹೇಳಿದ್ದಾರೆ. ಮಧ್ಯರಾತ್ರಿಯ ಹೊತ್ತಿಗೆ ವಿಷವು ಅವನ ದೇಹದಾದ್ಯಂತ ಹರಡಿತು. ಇದರಿಂದ ಅವನ ಸ್ಥಿತಿ ಹದಗೆಟ್ಟಿತು. ತಕ್ಷಣ ಅವನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಮದುವೆಯಂದು ಕುದುರೆ ಸವಾರಿ ಮಾಡಿದ್ದಕ್ಕಾಗಿ ದಲಿತ ವರನ ಮೇಲೆ ಹಲ್ಲೆ

ಮದುವೆ ದಿನ ಕುದುರೆ ಸವಾರಿ ಮಾಡಿದ್ದಕ್ಕಾಗಿ ದಲಿತ ವರನ ಮೇಲೆ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಗುಜರಾತ್‌ನಲ್ಲಿ ನಡೆದಿದೆ. ದಲಿತ ಸಮುದಾಯದ ಯುವಕ ವಿಶಾಲ್ ಚಾವ್ಡಾ ಸೋಮವಾರ (ಫೆಬ್ರವರಿ 2) ವಿಶಾಲ್ ಚಂದ್ರುಮಣ ಗ್ರಾಮದ ಬೀದಿಗಳಲ್ಲಿ ತನ್ನ ಮದುವೆ ಮೆರವಣಿಗೆಗಾಗಿ ಕುದುರೆ ಏರಿದ್ದರು. ಪ್ರಬಲ ಸಮುದಾಯದ ಪುರುಷರ ಗುಂಪೊಂದು ಮೆರವಣಿಗೆಯನ್ನು ತಡೆದರು. ಕೆಳಜಾತಿಯ ವರನೊಬ್ಬ ತಮ್ಮ ವಿಶೇಷ ಸವಲತ್ತು ಎಂದು ಪರಿಗಣಿಸುವ ಕುದುರೆ ಸವಾರಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ಧೈರ್ಯ ಮಾಡಿದ್ದರಿಂದ ದುಷ್ಕರ್ಮಿಗಳು ಆಕ್ರೋಶಗೊಂಡರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಈ ಗ್ರಾಮದಲ್ಲಿ ಒಬ್ಬ ದಲಿತನಿಗೆ ಕುದುರೆ ಸವಾರಿ ಮಾಡಲು ಎಷ್ಟು ಧೈರ್ಯ? ಎಂದು ಪರಿಸ್ಥಿತಿ ಹಿಂಸಾತ್ಮಕವಾಗುವ ಮೊದಲು ದಾಳಿಕೋರರು ಕೂಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಕತ್ತಿಗಳನ್ನು ಹಿಡಿದುಕೊಂಡು ಬಂದ ಗುಂಪು ಗೂಂಡಾಗಿರಿ ಮಾಡಿದೆ. ವರನಿಗೆ ಹಾಗೂ ಆತನ ಸಂಬಂಧಿಕರಿಗೆ ಬೆದರಿಕೆ ಹಾಕಿದೆ. ಅಷ್ಟೇ ಅಲ್ಲದೆ ದೈಹಿಕವಾಗಿಯೂ ಹಲ್ಲೆ ಮಾಡಿದೆ ಎಂದು ಆರೋಪಿಸಲಾಗಿದೆ.