ಮೆಣಸಿನಕಾಯಿ ನೆನೆಸಿಟ್ಟ ನೀರಿನಲ್ಲಿ ಸ್ನಾನ ಮಾಡಲು ನೀವು ಸಿದ್ಧರಿದ್ದೀರಾ? ಚೀನಾಕ್ಕೆ ಭೇಟಿ ನೀಡಿ
Viral Video: ಚೀನಾದ ಹಾರ್ಬಿನ್‌ನಲ್ಲಿರುವ ಈ ಒಂದು ಈಜುಕೊಳ ಜಗತ್ತಿನ ಗಮನ ಸೆಳೆದಿದೆ. ಚೀನಾದ ರೆಸಾರ್ಟ್ ಒಂದರಲ್ಲಿ 'ಹಾಟ್ ಪಾಟ್ ಸ್ಪಾ' ಎಂದು ಕರೆಯಲಾಗುವ ಸ್ಪಾಟ್ ಇದ್ದು, ನೀರಿನ ಒಳಗೆ ತರಕಾರಿ ಮತ್ತು ಮೆಣಸಿನಕಾಯಿ ಹಾಕಲಾಗುತ್ತದೆ. ಮೆಣಸಿನಕಾಯಿ ತುಂಬಿದ ನೀರು ಒಂದು ಬದಿಯಲ್ಲಿ ಕೆಂಪು ಬಣ್ಣದಿಂದ ಕೂಡಿದ್ದು, ಇನ್ನೊಂದು ಬದಿಯಲ್ಲಿ ಹಾಲು ಮತ್ತು ಇತರ ತರಕಾರಿಗಳಿಂದ ಕೂಡಿದೆ.
ಚೀನಾದ ವಿಚಿತ್ರ ಈಜುಕೊಳ -
ಬೀಜಿಂಗ್, ಫೆ. 3: ಸಾಮಾನ್ಯವಾಗಿ ರಜಾ ದಿನದಲ್ಲಿ ರೆಸಾರ್ಟ್‌ಗೆ ಟ್ರಿಪ್ ಹೋಗುವವರು ಅನೇಕರಿದ್ದಾರೆ. ಈಜು ಕೊಳ, ಸ್ಪಾ, ಜಿಮ್ಮ ತ್ತು ಸಮುದ್ರ ವಿಹಾರದಂತ ಆಧುನಿಕ ಸೌಕರ್ಯಗಳು ಇಲ್ಲಿರುತ್ತದೆ. ಆದರೆ ಚೀನಾದ ಹಾರ್ಬಿನ್‌ನಲ್ಲಿರುವ ಈ ಒಂದು ಈಜುಕೊಳ ಇಡೀ ಜಗತ್ತಿನ ಜನರ ಗಮನ ಸೆಳೆದಿದೆ. ಚೀನಾದ ರೆಸಾರ್ಟ್ ಒಂದರಲ್ಲಿ 'ಹಾಟ್ ಪಾಟ್ ಸ್ಪ' ಎಂದು ಕರೆಯಲಾಗುವ ಸ್ಪಾಟ್ ಇಲ್ಲಿದ್ದು ನೀರಿನ ಒಳಗೆ ತರಕಾರಿ ಮತ್ತು ಮೆಣಸಿನಕಾಯಿ ಜತೆ ಸ್ನಾನ ಮಾಡಬಹುದು. ಇಲ್ಲಿ ಒಂದು ಬದಿಯ ನೀರು ಮೆಣಸಿನಕಾಯಿಯಿಂದ ಕೂಡಿರುವ ಕೆಂಪು ಬಣ್ಣದ್ದಾಗಿದ್ದು ಇನ್ನೊಂದು ಬದಿ ಹಾಲು ಮತ್ತು ಇತರ ತರಕಾರಿಗಳಿಂದ ತುಂಬಿದೆ. ಸದ್ಯ ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ಹಾಟ್‌ಪಾಟ್ ಸ್ಪಾ ಏನಿದು?
ಹಾರ್ಬಿನ್‌ನ ಮೇಪಲ್ ಲೀಫ್ ವಿಲೇಜ್ ಹಾಟ್ ಸ್ಪ್ರಿಂಗ್ ರೆಸಾರ್ಟ್ ಹೊಸ ಪ್ರಯೋಗವನ್ನು ಪರಿಚಯಿಸಿದೆ. ಇಲ್ಲಿನ ಈಜುಕೊಳವನ್ನು ನೋಡಿದರೆ ನೀವು ನಿಜಕ್ಕೂ ಶಾಕ್ ಆಗುತ್ತೀರಿ. ಈ ಕೊಳವನ್ನು ಚೀನಾದ ಸಾಂಪ್ರದಾಯಿಕ 'ಯಿನ್-ಯಾಂಗ್' ಹಾಟ್‌ಪಾಟ್ ಶೈಲಿಯಲ್ಲಿ ರಚನೆ ಮಾಡಲಾಗಿದೆ. ಒಂದು ಬದಿಯಲ್ಲಿ ಕೆಂಪು ಬಣ್ಣದ ನೀರು ಮತ್ತು ನೂರಾರು ಮೆಣಸಿನ ಕಾಯಿಗಳನ್ನು ಬೆರೆಸಿದ್ದರೆ ಇನ್ನೊಂದು ಬದಿಯಲ್ಲಿ ಬಿಳಿ ಬಣ್ಣದ ನೀರು ಮತ್ತು ವಿವಿಧ ತರಕಾರಿಗಳು ಇವೆ. ಆದರೆ ಈ ಮೆಣಸಿನಕಾಯಿಗಳು ಅತಿಯಾದ ಖಾರವನ್ನು ಹೊಂದಿರುವುದಿಲ್ಲ, ಆದ್ದರಿಂದ ಚರ್ಮಕ್ಕೆ ಯಾವುದೇ ತೊಂದರೆಯಿಲ್ಲ ಎಂದು ರೆಸಾರ್ಟ್ ತಿಳಿಸಿದೆ.
ವಿಡಿಯೊ ನೋಡಿ:
ಈ ರೆಸಾರ್ಟ್ ಕೇವಲ ಖಾರದ ಸ್ನಾನಕ್ಕೆ ಮಾತ್ರ ಸೀಮಿತವಾಗಿಲ್ಲ. ಇಲ್ಲಿ ಪ್ರವಾಸಿಗರಿಗಾಗಿ ಇನ್ನೂ ಹಲವು ವಿಶೇಷತೆಗಳಿವೆ ದಾಸವಾಳದಿಂದ ಗಿಡಮೂಲಿಕೆ ನೀರು, ಎಲೆಗಳು ಮತ್ತು ಗುಲಾಬಿಗಳವರೆಗೆ ನಿಮ್ಮ ಚರ್ಮವನ್ನು ಗುಣಪಡಿಸುವ ಮತ್ತು ರಕ್ಷಿಸುವ ವಿವಿಧ ಗಿಡಮೂಲಿಕೆಗಳು ಮತ್ತು ಹೂವು ಗಳಿಂದ ತುಂಬಿದ ಪೂಲ್‌ಗಳನ್ನು ಹೊಂದಲಾಗಿದೆ.
ಅಭ್ಯಾಸದ ವೇಳೆ ಬಾಸ್ಕೆಟ್‌ಬಾಲ್ ಪೋಲ್ ಕುಸಿದು ರಾಷ್ಟ್ರೀಯ ಆಟಗಾರ ಸಾವು
ಇತ್ತೀಚೆಗೆ ಒಬ್ಬ ವ್ಯಕ್ತಿ ಮೇಪಲ್ ಲೀಫ್ ವಿಲೇಜ್ ಹಾಟ್ ಸ್ಪ್ರಿಂಗ್ ರೆಸಾರ್ಟ್‌ನಿಂದ ತನ್ನ ಅನುಭವವನ್ನು ಹಂಚಿಕೊಂಡಿದ್ದಾರೆ. ಒಬ್ಬ ವ್ಯಕ್ತಿಗೆ ತಗಲುವ ವೆಚ್ಚ ಸುಮಾರು 28 ಡಾಲರ್ (ಅಂದರೆ ಅಂದಾಜು 2,500 ರುಪಾಯಿ) ಎಂದು ಅವರು ತಿಳಿಸಿದ್ದಾರೆ.