ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಒಂದು ನಿಮಿಷ... ಒಂದೇ ಕೈ... 122 ತೆಂಗಿನಕಾಯಿಗಳು ಪುಡಿ-ಪುಡಿ! ವಿಡಿಯೊ ನೋಡಿ

ಕೇರಳದ ಅಭಿಷ್ ಪಿ. ಡೊಮಿನಿಕ್ ಒಂದು ನಿಮಿಷದಲ್ಲಿ ಒಂದೇ ಕೈಯಿಂದ 122 ತೆಂಗಿನಕಾಯಿಗಳನ್ನು ಒಡೆಯುವ ಮೂಲಕ ಸಾಧನೆ ಮಾಡಿದ್ದಾನೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಸೋಶಿಯಲ್ ಮೀಡಿಯಾದಲ್ಲಿ ಇದಕ್ಕೆ ಸಂಬಂಧಪಟ್ಟ ವಿಡಿಯೊವನ್ನು ಪೋಸ್ಟ್ ಮಾಡಿದ್ದು, ಇದು ಈಗ ವೈರಲ್(Viral Video) ಆಗಿದೆ.

122 ತೆಂಗಿನಕಾಯಿಗಳನ್ನು ಒಡೆದು ಗಿನ್ನೆಸ್‌ ದಾಖಲೆ! ವಿಡಿಯೊ ನೋಡಿ

Profile pavithra Jul 21, 2025 9:09 AM

ತಿರುವನಂತಪುರಂ: ಕೇರಳದ ಅಭಿಷ್ ಪಿ. ಡೊಮಿನಿಕ್ ಒಂದು ನಿಮಿಷದಲ್ಲಿ ಒಂದೇ ಕೈಯಿಂದ ಅತಿ ಹೆಚ್ಚು ತೆಂಗಿನಕಾಯಿಗಳನ್ನು ಒಡೆಯುವ ಮೂಲಕ ಗಿನ್ನೆಸ್(Guinness World Record) ಪುಸ್ತಕದ ಸುವರ್ಣ ಪುಟಗಳಲ್ಲಿ ತನ್ನ ಹೆಸರನ್ನು ಬರೆದಿದ್ದಾನೆ. ಅಭಿಷ್ ಪಿ. ಡೊಮಿನಿಕ್ 122 ಅಂಕಗಳನ್ನು ಗಳಿಸುವ ಮೂಲಕ 14 ವರ್ಷಗಳ ಹಿಂದಿನ 118 ಅಂಕಗಳ ದಾಖಲೆಯನ್ನು ಮುರಿದಿದ್ದಾನೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಸೋಶಿಯಲ್ ಮೀಡಿಯಾದಲ್ಲಿ ಇದಕ್ಕೆ ಸಂಬಂಧಪಟ್ಟ ವಿಡಿಯೊವನ್ನು ಪೋಸ್ಟ್ ಮಾಡಿದ್ದು, ಇದು ಈಗ ವೈರಲ್(Viral Video) ಆಗಿದೆ.

ವೈರಲ್ ಆಗಿರುವ ವಿಡಿಯೊದಲ್ಲಿ, ಕೇರಳದ ಕೊಟ್ಟಾಯಂ ನಗರದಲ್ಲಿ ಗೋಡೆಯ ಮೇಲೆ ಸಾಲಾಗಿ ಇರಿಸಲಾದ ತೆಂಗಿನಕಾಯಿಗಳನ್ನು ಅಭಿಷ್ ಒಡೆಯುವುದನ್ನು ಸೆರೆಹಿಡಿಯಲಾಗಿದೆ. 60 ಸೆಕೆಂಡುಗಳ ಅವಧಿಯಲ್ಲಿ, ಅವನು ತನ್ನ ಒಂದು ಕೈಯನ್ನು ಮಾತ್ರ ಬಳಸಿ ಒಟ್ಟು 122 ತೆಂಗಿನಕಾಯಿಗಳನ್ನು ಒಡೆದಿದ್ದಾನೆ. ಹಿನ್ನೆಲೆಯಲ್ಲಿ ಅವನ ಕುಟುಂಬ ಮತ್ತು ಸ್ನೇಹಿತರು ಹರ್ಷೋದ್ಗಾರ ಮಾಡುತ್ತಾ ಚಪ್ಪಾಳೆ ತಟ್ಟುತ್ತಾ ಆತನನ್ನು ಪ್ರೇರೆಪಿಸಿದ್ದಾರೆ. ಒಂದು ಸೆಕೆಂಡಿನಲ್ಲಿ 2 ತೆಂಗಿನಕಾಯಿಗಳನ್ನು ಒಡೆಯುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾನೆ.

ವಿಡಿಯೊ ಇಲ್ಲಿದೆ ನೋಡಿ...

ಅಭಿಷ್ ಒಂದು ನಿಮಿಷದಲ್ಲಿ 122 ತೆಂಗಿನಕಾಯಿಗಳನ್ನು ಒಡೆಯುವ ದಾಖಲೆ ಮಾಡುವ ಮುನ್ನ 2011 ರಲ್ಲಿ ತನ್ನ ಕೈಗಳಿಂದ 1 ನಿಮಿಷದಲ್ಲಿ 118 ತೆಂಗಿನಕಾಯಿಗಳನ್ನು ಒಡೆದು ಜರ್ಮನ್ ಮುಹಮ್ಮದ್ ಕಹ್ರಿಮಾನೋವಿಕ್ ಅವನ ವರ್ಷಗಳ ದಾಖಲೆಯನ್ನು ಬರೆದಿದ್ದನು. ಅಭಿಷ್ ಈ ದಾಖಲೆಯನ್ನು ಮುರಿಯುವ ತನಕ 14 ವರ್ಷಗಳ ಕಾಲ ಜರ್ಮನ್ ಮುಹಮ್ಮದ್ ಕಹ್ರಿಮಾನೋವಿಕ್ ಅವನ ಈ ದಾಖಲೆಯನ್ನು ಮುರಿಯಲು ಯಾರಿಂದಲೂ ಸಾಧ್ಯವಾಗಿರಲಿಲ್ಲ.

ಈ ನಿರ್ದಿಷ್ಟ ವಿಭಾಗದಲ್ಲಿ ಮುಹಮ್ಮದ್ ಕಹ್ರಿಮಾನೋವಿಕ್ 2005 ರಿಂದ 2011 ರ ಅವಧಿಯಲ್ಲಿ ಐದು ಬಾರಿ ದಾಖಲೆಯನ್ನು ಮುರಿಯುವ ಮೂಲಕ ಪ್ರಾಬಲ್ಯ ಸಾಧಿಸಿದನು. ಅವನು ತೆಂಗಿನಕಾಯಿ ಒಡೆಯುವ ದಾಖಲೆಯ ಸಂಖ್ಯೆಯನ್ನು 65 ರಿಂದ 118 ಕ್ಕೆ ಏರಿಸಿದನು ಮತ್ತು ಇಂದು ಅಭಿಷ್ ಅದನ್ನು 122 ಕ್ಕೆ ಏರಿಸಿದ್ದಾನೆ.

ಈ ಸುದ್ದಿಯನ್ನೂ ಓದಿ:Viral Video: ಯೋಧನ ಮೇಲೆ ಕನ್ವಾರ್‌ ಯಾತ್ರಿಕರಿಂದ ಹಲ್ಲೆ- ಶಾಕಿಂಗ್‌ ವಿಡಿಯೊ ಇಲ್ಲಿದೆ

ಗಿನ್ನಿಸ್ ವರ್ಲ್ಡ್‌ ರೆಕಾರ್ಡ್‍ಗೆ ಸಂಬಂಧಿಸಿದಂತೆ ಈ ಹಿಂದೆ ಕೋಲ್ಕತ್ತಾದ 15 ವರ್ಷದ ಹುಡುಗ ಅರ್ನವ್ ಡಾಗಾ ಇತ್ತೀಚೆಗೆ ಕಾರ್ಡ್‍ಗಳಿಂದ ಅತಿ ಎತ್ತರದ ಮನೆ ನಿರ್ಮಿಸುವ ಮೂಲಕ ಸಾಧನೆಯನ್ನು ಮಾಡಿದ್ದಾನೆ. ಈ ವಿಚಾರವನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ವೈರಲ್ ಆಗಿತ್ತು. ಡಾಗಾ ರೆಕಾರ್ಡ್‌ ಮಾಡುವ ಮುನ್ನ, ಎಂಟು ಮತ್ತು 12 ಗಂಟೆಗಳಲ್ಲಿ ಕಾರ್ಡ್‍ಗಳಿಂದ ಅತಿ ಎತ್ತರದ ಮನೆ ರಚಿಸಿದ ದಾಖಲೆ ಚೀನಾದ ಟಿಯಾನ್ ರುಯಿ ಅವನದ್ದಾಗಿತ್ತು.