ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಇಂಡಿಗೋ ಬಿಕ್ಕಟ್ಟಿನ ನಡುವೆ ಫ್ಲೈಟ್ ಒಳಗೆ ಪಾರಿವಾಳ ನುಗ್ಗಿ ಅವಾಂತರ: ವಿಡಿಯೊ ವೈರಲ್

ಇಂಡಿಗೋ ಏರ್‌ಲೈನ್ಸ್ ವಿವಾದದ ಸುಳಿಯಲ್ಲಿರುವಾಗಲೇ ವಿಮಾನವೊಂದರಲ್ಲಿ ಅಚ್ಚರಿಯ ಘಟನೆ ನಡೆದಿದೆ. ಫ್ಲೈಟ್ ಟೇಕ್‌ ಆಫ್‌ಗೆ ಮೊದಲು ಪಾರಿವಾಳವೊಂದು ಇಂಡಿಗೋ ವಿಮಾನದೊಳಗೆ ಪ್ರವೇಶಿಸಿ ಅವಾಂತರ ಸೃಷ್ಟಿಸಿದೆ. ಸದ್ಯ ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಇಂಡಿಗೋ ಫ್ಲೈಟ್‌ನಲ್ಲಿ ಮತ್ತೊಂದು ಅವಾಂತರ;  ಪಾರಿವಾಳ ಎಂಟ್ರಿ

ಫ್ಲೈಟ್ ಒಳಗೆ ಎಂಟ್ರಿ ಕೊಟ್ಟ ಪಾರಿವಾಳ -

Profile
Pushpa Kumari Dec 9, 2025 5:20 PM

ಬೆಂಗಳೂರು, ಡಿ. 9: ಇಂಡಿಗೋ ವಿಮಾನ ಸಂಸ್ಥೆ ತನ್ನ ಅವ್ಯವಸ್ಥೆಯಿಂದ ಕಳೆದ ಒಂದು ವಾರದಿಂದ ದೇಶಾದ್ಯಂತ ಪ್ರಯಾಣಿಕರನ್ನು ಹೈರಾಣಾಗಿಸಿದೆ‌. ವಿಮಾನ ಪ್ರಯಾಣದ ಸಂಖ್ಯೆಯನ್ನು ರದ್ದುಗೊಳಿಸಿರುವುದರಿಂದ, ಲಕ್ಷಾಂತರ ಪ್ರಯಾಣಿಕರು ತೊಂದರೆಗೆ ಸಿಲುಕಿದ್ದಾರೆ. ಈ ಮಧ್ಯೆ ಇಂಡಿಗೋ ವಿಮಾನವೊಂದರಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಫ್ಲೈಟ್ ಟೇಕ್‌ ಆಫ್‌ಗೆ ಮೊದಲು ಪಾರಿವಾಳವೊಂದು ಇಂಡಿಗೋ ವಿಮಾನದೊಳಗೆ ಪ್ರವೇಶಿಸಿ ಅವ್ಯವಸ್ಥೆ ಸೃಷ್ಟಿಸಿದೆ. ಸದ್ಯ ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral Video) ಆಗಿದೆ.

ಈ ಘಟನೆ ಬೆಂಗಳೂರಿನಿಂದ ವಡೋದರಾಗೆ ಹೋಗಲು ಸಿದ್ಧವಾಗಿದ್ದ ಇಂಡಿಗೋ ವಿಮಾನದಲ್ಲಿ ನಡೆದಿದೆ. ಪಾರಿವಾಳ ಸೀದಾ ವಿಮಾನದ ಒಳ ನುಗ್ಗಿ ಆತಂಕದ . ಇಂಡಿಗೊ‌ ಬಿಕ್ಕಟ್ಟಿನ ನಡುವೆಯೂವಾತಾವರಣ ಸೃಷ್ಟಿಸಿದೆ. ಕರ್ಣ್ ಪರೇಖ್ ಎನ್ನುವ ಪ್ರಯಾಣಿಕರೊಬ್ಬರು ಈ ಕ್ಷಣವನ್ನು ವಿಡಿಯೊದಲ್ಲಿ ಸೆರೆಹಿಡಿದಿದ್ದಾರೆ. ಫ್ಲೈಟ್ ಟೇಕ್ ಆಫ್‌ಗೆ ಮೊದಲು ಪಾರಿವಾಳವು ವಿಮಾನದ ಪ್ರಯಾಣಿಕರ ಸಾಲಿನ ಮಧ್ಯದ ದಾರಿಯಲ್ಲಿ ಹಾರಾಡುತ್ತಾ ಗೊಂದಲ ಸೃಷ್ಟಿಸಿದೆ. ವಿಮಾನದ ಒಳಗೆ ಕೂತಿದ್ದ ಸಹ ಪ್ರಯಾಣಿಕರು ಈ ಅನಿರೀಕ್ಷಿತ ಅತಿಥಿಯನ್ನು ನೋಡಿ ನಗೆ ಬೀರಿದ್ದಾರೆ. ಬಳಿಕ ಸಿಬ್ಬಂದಿ ವಿಮಾನದ ಬಾಗಿಲಿನತ್ತ ಕಳುಹಿಸಲು ಪ್ರಯತ್ನಿಸಿದರು.

ವಿಡಿಯೊ ಇಲ್ಲಿದೆ:

ಈ ದೃಶ್ಯ ಸದ್ಯ ವೈರಲ್ ಆಗಿದ್ದು, 30,738 ಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ .ನೆಟ್ಟಿಗರು ಕೂಡ ಈ ಬಗ್ಗೆ ತಮಾಷೆಯ ಕಮೆಂಟ್‌ ಮಾಡಿದ್ದಾರೆ. ಬಳಕೆದಾರರೊಬ್ಬರು ಪಾರಿವಾಳದ ಬಳಿಯೂ ವಿಮಾನ ಹಾರಾಟದ ಪಾಸ್ ಇರಲೇಬೇಕು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು ಪರಿವಾಳಗೂ ಇಂಡಿಗೋ ಸಮಸ್ಯೆ ತಿಳಿದಿರಬೇಕು ಎಂದು ಬರೆದುಕೊಂಡಿದ್ದಾರೆ.

ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕ ಮೆದುಳಿನ ರಕ್ತಸ್ರಾವದಿಂದ ಸಾವು

ಕಳೆದ ಕೆಲವು ದಿನಗಳಿಂದ ಹಲವಾರು ದೇಶೀಯ ಇಂಡಿಗೊ ಏರ್‌ಲೈನ್ಸ್‌ ವಿಮಾನಗು ರದ್ದಾಗಿದ್ದು ಪ್ರಯಾಣಿಕರು ತೊಂದರೆಗಳನ್ನು ಎದುರಿಸಿದ್ದಾರೆ. ಈ ಎಲ್ಲ ಬಿಕ್ಕಟ್ಟುಗಳು ಡಿಸೆಂಬರ್ ಹತ್ತರ ಒಳಗೆ ಸರಿದಾರಿಗೆ ಬರುವ ವಿಶ್ವಾಸವನ್ನು ಇಂಡಿಗೋ ಆಡಳಿತ ಮಂಡಳಿ ನೀಡಿದೆ. ಸಂಸ್ಥೆಯ ಸಿಇಒ ಪ್ರಯಾಣಿಕರ ಬಳಿ ಕ್ಷಮೆಯಾಚಿಸಿದ್ದಾರೆ.