ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಇದೇನಿದು ವಿಸ್ಮಯ ಬಾವಿ? ಗಾಳಿಯಿಲ್ಲದಿದ್ದರೂ ಅಲೆಗಳಂತೆ ತೂಗಾಡುತ್ತಿದೆ ನೀರು! ಕಾರಣವೇನು?

Viral Video: ಬಾವಿಯಲ್ಲಿರುವ ನೀರು ತಾನಾಗಿಯೇ ಅಲೆಗಳಂತೆ ತೂಗಾಡುವುದನ್ನು ನೀವು ಕಂಡಿದ್ದೀರಾ? ನಿಮಗೂ ಅಚ್ಚರಿ ಎನಿಸಬಹುದು. ಹೌದು ಗುಜರಾತ್ ನ ಮೊರ್ಬಿ ಜಿಲ್ಲೆಯ ವೀರಪರ್ದಾ ಗ್ರಾಮದಲ್ಲಿ ಶಾಕಿಂಗ್ ದೃಶ್ಯವೊಂದು ಕಂಡು ಬಂದಿದ್ದು ಬಾವಿಯ ನೀರು ಅಲೆಯಂತೆ ಅಪ್ಪಳಿಸುತ್ತಿದೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮಾಷೆಯ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

ಗುಜರಾತ್‌ನಲ್ಲಿದೆ ಅಲೆಗಳಂತೆ ತೂಗಾಡುತ್ತಿರುವ ಬಾವಿಯ ನೀರು? ಏನಿದರ ವಿಶೇಷತೆ?

ಗುಜರಾತ್‌ನಲ್ಲಿದೆ ಅಲೆಗಳಂತೆ ತೂಗಾಡುತ್ತಿರುವ ಬಾವಿಯ ನೀರು -

Profile
Pushpa Kumari Aug 7, 2026 8:18 PM

ಗುಜರಾತ್, ಆ.7: ಸಾಮಾನ್ಯವಾಗಿ ಸಮುದ್ರದಲ್ಲಿ ನೀರಿನ ಅಲೆಗಳು ಅಪ್ಪಳಿಸುವುದನ್ನು ನೀವು ನೋಡಿರಬಹುದು.ಆದರೆ ಬಾವಿಯಲ್ಲಿರಯವ ನೀರು ತಾನಾಗಿಯೇ ಅಲೆಗಳಂತೆ ತೂಗಾಡು ವುದನ್ನು ನೀವು ಕಂಡಿದ್ದೀರಾ? ನಿಮಗೂ ಅಚ್ಚರಿ ಎನಿಸಬಹುದು. ಹೌದು ಗುಜರಾತ್ ನ ಮೊರ್ಬಿ ಜಿಲ್ಲೆಯ ವೀರಪರ್ದಾ ಗ್ರಾಮದಲ್ಲಿ ಶಾಕಿಂಗ್ ದೃಶ್ಯವೊಂದು ಕಂಡು ಬಂದಿದ್ದು ಬಾವಿಯ ನೀರು ಅಲೆಯಂತೆ ಅಪ್ಪಳಿಸುತ್ತಿದೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ತಮಾಷೆಯ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

ಗುಜರಾತ್‌ನ ಮೋರ್ಬಿ ಜಿಲ್ಲೆಯ ಕೃಷಿ ಬಾವಿಯ ನೀರು ಯಾವುದೇ ಅಡಚಣೆಯಿಲ್ಲದೆ ನಿರಂತರ ವಾಗಿ ಅಲೆಗಳಂತೆ ಹರಿಯುತ್ತಿರುವ ದೃಶ್ಯ ಕಂಡು ಬಂದಿದೆ. ಈ ಘಟನೆ ಅನೇಕರಿಗೆ ಕುತೂಹಲ ಉಂಟು ಮಾಡಿದೆ. ಈ ಬಾವಿಯು ವಿರ್ಪರ್ದಾ ಗ್ರಾಮದ ರೈತ ಪ್ರಾಂಜ್ಜೀವನ್‌ ಭಾಯ್ ಸದಾರಿ ಯವರಿಗೆ ಸೇರಿದ್ದು, ಇದು ಸುಮಾರು 18 ಅಡಿ ಆಳವನ್ನು ಹೊಂದಿದೆ. ಇದರಲ್ಲಿರುವ ನೀರು ಮಾತ್ರ ಯಾವುದೇ ಗಾಳಿ ಇಲ್ಲದೆ ತಾನಾಗಿಯೇ ಅಪ್ಪಳಿಸುತ್ತಿದೆ.

ವಿಡಿಯೋ ನೋಡಿ:



ಈ ದೃಶ್ಯ ನೋಡಿದ ಅನೇಕರು ಇಲ್ಲಿ ದೆವ್ವದ ಹಾವಳಿ ಇರಬೇಕು, ಬಾವಿಯಲ್ಲಿ ಯಾವುದೇ ದೆವ್ವ ಕುಳಿತಿದೆ ಎಂದೆಲ್ಲಾ ಪ್ರತಿಕ್ರಿಯೆ ಗಳನ್ನು ನೀಡುತ್ತಿದ್ದಾರೆ. ಕೆಲವರು ಇಲ್ಲಿನ ಜನರು ಸದ್ಯದಲ್ಲೇ ಬಾವಿಯೊಳಗೆ ಬಿದ್ದಾದರೂ ಪೂಜೆ ಮಾಡುತ್ತಾರೆ ನೋಡಿ! ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ ಸ್ಥಳೀಯರ ಪ್ರಕಾರ, ಆಗಸ್ಟ್ ಆರಂಭದಲ್ಲಿ ಭಾರೀ ಮಳೆಯಾದ ನಂತರ ಬಾವಿ ತುಂಬಿದ ವಿಚಿತ್ರ ಚಲನೆ ಪ್ರಾರಂಭವಾಯಿತು. ಮಳೆಯ ನಂತರ, ಶಾಂತ ಹವಾಮಾನದ ಹೊರತಾಗಿಯೂ ನಿರಂತರ ಅಲೆಯಂತಾಗಿ ನೀರು ಕೆಸರುಮಯವಾಗಿದೆ ಎಂದಿದ್ದಾರೆ.

Viral Video: ಬ್ಲಿಂಕ್‌ಇಟ್‌ನಿಂದ ಕೇವಲ 6 ನಿಮಿಷಗಳಲ್ಲಿ ಆರ್ಡರ್ ಪಡೆದ ಅಮೆರಿಕದ ವ್ಯಕ್ತಿಗೆ ಅಚ್ಚರಿ

ಕುತೂಹಲಕಾರಿ ಎಂದರೆ, ಅದೇ ಪ್ರದೇಶದಲ್ಲಿ ಹತ್ತಿರದ ಬಾವಿಗಳು ಸಂಪೂರ್ಣವಾಗಿ ನಿಶ್ಚಲವಾಗಿವೆ ಎಂದು ವರದಿಯಾಗಿದೆ. ಈ ಘಟನೆ ವೈರಲ್ ಆಗುತ್ತಿದ್ದಂತೆ ಮೊರ್ಬಿ ಜಿಲ್ಲಾಧಿಕಾರಿ ಸ್ವಪ್ನಿಲ್ ಖಾರೇ ಹಾಗೂ ಭೂವಿಜ್ಞಾನಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿದೆ. ನೀರಿನ ಚಲನೆಯು ಅಡಿಯಲ್ಲಿ ಸಿಕ್ಕಿಬಿದ್ದ ಗಾಳಿಯಿಂದ ಉಂಟಾಗಿರಬಹುದು ಎಂದು ಅವರು ತಿಳಿಸಿದ್ದಾರೆ.

ಪ್ರಾಥಮಿಕ ಅಂದಾಜಿನ ಪ್ರಕಾರ. ಭೂಮಿಯ ಆಳದ ಬಂಡೆಗಳ ನಡುವೆ ಸಿಲುಕಿಕೊಂಡಿದ್ದ ಗಾಳಿಯು ಮೇಲಕ್ಕೆ ಬರಲು ಪ್ರಯತ್ನಿಸುತ್ತಿದೆ. ಹೀಗಾಗಿ ಬಾವಿಯ ನೀರು ಅಲೆಯಂತೆ ತೂಗಾಡುತ್ತಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಭೂಕಂಪನ ಸಂಶೋಧನಾ ಸಂಸ್ಥೆ ಇದನ್ನು ಪರಿಶೀಲಿಸಿದ್ದು, ಯಾವುದೇ ಭೂಕಂಪ ಅಥವಾ ಭೂಗರ್ಭದ ಬಿರುಕುಗಳು ಅಲ್ಲ ಎಂದು ಸ್ಪಷ್ಟಪಡಿಸಿದೆ.