Viral Video: ಜಾಲಿರೈಡ್‌ನಲ್ಲಿದ್ದ ಬೈಕ್ ಸವಾರರಿಗೆ ಏಕಾಏಕಿ ಎದುರಾದ ಸಿಂಹಗಳು; ಆಮೇಲೆ ಆಗಿದ್ದೇನು ನೋಡಿ-ಶಾಕಿಂಗ್ ವಿಡಿಯೊ ವೈರಲ್
ಗುಜರಾತ್‍ನ ಗಿರ್ ಅರಣ್ಯದೊಳಗಿನ ರಸ್ತೆಯಲ್ಲಿ ಮೂವರು ಯುವಕರು ಬೈಕ್‍ನಲ್ಲಿ ಹೋಗುತ್ತಿದ್ದಾಗ ಎರಡು ದೊಡ್ಡ ಸಿಂಹಗಳು ಆಕಸ್ಮಿಕವಾಗಿ ಅಡ್ಡ ಬಂದಿದ್ದು, ಯುವಕರು ಹೆದರಿ ಪೊದೆಗಳಲ್ಲಿ ಅಡಗಿಕೊಂಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video)ಆಗಿದೆ.


ಗಾಂಧಿನಗರ: ಗುಜರಾತ್‍ನ ಗಿರ್ ಅರಣ್ಯದೊಳಗಿನ ರಸ್ತೆಯಲ್ಲಿ ಮೂವರು ಯುವಕರು ಬೈಕ್‍ನಲ್ಲಿ ಹೋಗುತ್ತಿದ್ದಾಗ ಎರಡು ಸಿಂಹಗಳು ಆಕಸ್ಮಿಕವಾಗಿ ಅವರ ದಾರಿಗೆ ಅಡ್ಡ ಬಂದ ಘಟನೆಯೊಂದು ನಡೆದಿದೆ. ನಡುರಸ್ತೆಯಲ್ಲಿ ಸಿಂಹವನ್ನು ಕಂಡು ಹೆದರಿದ ಬೈಕ್ ಸವಾರ ಮತ್ತು ಇಬ್ಬರು ಯುವಕರು ತಮ್ಮನ್ನು ರಕ್ಷಿಸಿಕೊಳ್ಳಲು ಬೈಕ್ ಬಿಟ್ಟು ಓಡಿ ಹೋಗಿದ್ದಾರೆ. ಆದರೆ ಆ ಸಿಂಹಗಳು ಇವರತ್ತ ತಿರುಗಿ ಕೂಡ ನೋಡದೆ ಹೋಗಿವೆಯಂತೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video)ಆಗಿದೆ.
ವೈರಲ್ ವಿಡಿಯೊದಲ್ಲಿ ಬೈಕಿನಲ್ಲಿ ಮೂವರು ಯುವಕರು ಬರುವಾಗ ಪೊದೆಯಿಂದ ಹೊರಬಂದ ಎರಡು ಸಿಂಹಗಳು ಕಾಡಿನ ರಸ್ತೆಯಲ್ಲಿ ನಡೆದುಕೊಂಡು ಬೈಕ್ ಸವಾರರ ಕಡೆಗೆ ಬಂದಿವೆ. ಆ ಸಿಂಹಗಳನ್ನು ನೋಡಿ ಭಯಗೊಡ ಒಬ್ಬ ರಸ್ತೆಯಲ್ಲಿ ಎದ್ದೋ ಬಿದ್ದೋ ಅನ್ನುವ ಹಾಗೇ ಓಡಿದ್ದಾನೆ. ಇನ್ನೊಬ್ಬ ಪಕ್ಕದಲ್ಲಿದ್ದ ಪೊದೆಯೊಳಗೆ ಹೋಗಿದ್ದಾನೆ. ಆದರೆ ಬೈಕ್ ಓಡಿಸುತ್ತಿದ್ದ ವ್ಯಕ್ತಿ ಸ್ವಲ್ಪ ಹೊತ್ತು ಅವುಗಳನ್ನೆ ನೋಡುತ್ತಾ ನಿಂತಿದ್ದಾನೆ. ಅವು ಮತ್ತಷ್ಟು ಹತ್ತಿರ ಬಂದಾಗ ಆತ ಕೂಡ ಹೆದರಿ ಪೊದೆಯ ಕಡೆಗೆ ಓಡಿದ್ದಾನೆ. ಆದರೆ ಈ ಎರಡು ಸಿಂಹಗಳು ಇವರಿಗೆ ಏನು ಕೂಡ ಮಾಡದೇ ಸುಮ್ಮನೇ ಹೋಗಿದ್ದಾವೆ.
ಸಿಂಹದ ವಿಡಿಯೊ ಇಲ್ಲಿದೆ ನೋಡಿ...
Another day in Gujurat😃
— Susanta Nanda (@susantananda3) March 16, 2025
The lion pair is just not interested in human as its prey. Otherwise, it could have easily outpaced the running bikers. pic.twitter.com/Rogc1ydJGx
ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ಅವರು ಈ ವಿಡಿಯೊವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಿಂಹಗಳಿಗೆ ಆ ಮನುಷ್ಯರನ್ನು ಬೇಟೆಯಾಡುವ ಆಸಕ್ತಿ ಇರಲಿಲ್ಲ. ಹಾಗಾಗಿ ಅವು ಸುಮ್ಮನೆ ಹೋಗಿವೆ ಎಂದು ಇದರಲ್ಲಿ ಬರೆದಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, 13,000 ಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿದೆ.
ಬೈಕಿನಲ್ಲಿದ್ದ ವ್ಯಕ್ತಿಯ ಬಳಿ ಬಂದ ಸಿಂಹ ಮಾಡಿದ್ದೇನು?
ಗುಜರಾತ್‍ನಲ್ಲಿ ನಡು ರಸ್ತೆಯಲ್ಲಿ ಸಿಂಹಗಳು ಎದುರಾಗುವಂತಹ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಗುಜರಾತ್‍ನಲ್ಲಿ ರಸ್ತೆಯ ಮಧ್ಯದಲ್ಲಿ ಸಿಂಹವೊಂದು ಬೈಕಿನಲ್ಲಿದ್ದ ಇಬ್ಬರು ವ್ಯಕ್ತಿಗಳ ಬಳಿ ಬಂದ ಘಟನೆ ನಡೆದಿತ್ತು. ಇದರಿಂದ ಅವರಿಬ್ಬರು ಭಯಭೀತರಾಗಿದ್ದರಂತೆ.ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದರಲ್ಲಿ ಸಿಂಹ ಬೈಕ್‍ನಲ್ಲಿ ಬರುತ್ತಿದ್ದ ಇಬ್ಬರು ವ್ಯಕ್ತಿಗಳ ಕಡೆಗೆ ಬಂದಿರುವುದು ಸೆರೆಯಾಗಿತ್ತು. ಸಿಂಹ ಹತ್ತಿರ ಬಂದಾಗ ಅವರಲ್ಲಿ ಒಬ್ಬ ಭಯಭೀತನಾಗಿ ಧಾರ್ಮಿಕ ಗ್ರಂಥಗಳನ್ನು ಪಠಿಸಿದ್ದಾನೆ. ಆದರೆ ಅದೃಷ್ಟವಶಾತ್, ಸಿಂಹ ಅವರ ಮೇಲೆ ದಾಳಿ ಮಾಡದೇ ಪಕ್ಕದ ಹೊಲಕ್ಕೆ ಹಾರಿ ಕಾಡಿನಲ್ಲಿ ಕಣ್ಮರೆಯಾಗಿದೆಯಂತೆ. ಈ ವಿಡಿಯೊಗೆ 2,000 ಕ್ಕೂ ಹೆಚ್ಚು ಲೈಕ್‍ಗಳು ಮತ್ತು ಹಲವಾರು ರಿಟ್ವೀಟ್‍ಗಳನ್ನು ಮಾಡಲಾಗಿತ್ತು.