ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

9 ಲಕ್ಷ ಗೋವುಗಳ ಪಾಲನೆ, 100 ಆಂಬ್ಯುಲೆನ್ಸ್: ಅನಂತ್ ಅಂಬಾನಿ ಗೋ ಸೇವಾ ಕಾರ್ಯಕ್ಕೆ ವಿಶ್ವದೆಲ್ಲೆಡೆ ಮೆಚ್ಚುಗೆ!

Viral Video: ರಿಲಯನ್ಸ್ ಇಂಡಸ್ಟ್ರೀಸ್‌ನ ಕಾರ್ಯನಿರ್ವಾಹಕರಾದ ಅನಂತ್ ಅಂಬಾನಿ ಅವರು, ಒಂಬತ್ತು ಲಕ್ಷ ಹಸುಗಳ ರಕ್ಷಣೆಗಾಗಿ ನಿಂತಿದ್ದಾರೆ.ಇದರಲ್ಲಿ ಹಾಲು ನೀಡದ ಏಳು ಲಕ್ಷ ಹಸುಗಳೂ ಸೇರಿವೆ. ಎಂಟು ರಾಜ್ಯಗಳಲ್ಲಿ 100 ಆಂಬ್ಯುಲೆನ್ಸ್‌ಗಳನ್ನು ಬಳಸಿಕೊಂಡು ತಮ್ಮ ತಂಡಗಳು ಸುಮಾರು 50,000 ಹಸುಗಳನ್ನು ರಕ್ಷಿಸಿವೆ ಎಂದಿದ್ದಾರೆ.

9 ಲಕ್ಷ ಗೋವುಗಳನ್ನು ಆರೈಕೆ ಮಾಡುತ್ತಿರುವ ಅನಂತ್ ಅಂಬಾನಿ

9 ಲಕ್ಷ ಗೋವುಗಳನ್ನು ಆರೈಕೆ ಮಾಡುತ್ತಿರುವ ಅನಂತ್ ಅಂಬಾನಿ -

Profile
Pushpa Kumari Oct 23, 2026 9:21 PM

ನವದೆಹಲಿ,ಅ.23: ವಿಶ್ವದ ಅತಿ ದೊಡ್ಡ ಶ್ರೀಮಂತ ಕುಟುಂಬ ದಲ್ಲಿ ಜನಿಸಿದ್ದ ಉದ್ಯಮಿ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಕೇವಲ ಹಣದಲ್ಲಿ ಮಾತ್ರವಲ್ಲ, ಮಾನವೀಯ ಕೆಲಸದಲ್ಲೂ ಮೆಚ್ಚುಗೆ ಗಳಿಸುತ್ತಾರೆ. ಇದೀಗ ರಿಲಯನ್ಸ್ ಇಂಡಸ್ಟ್ರೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿಯ ಗೋವು ಸೇವೆಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗಿದೆ

ರಿಲಯನ್ಸ್ ಇಂಡಸ್ಟ್ರೀಸ್‌ನ ಕಾರ್ಯನಿರ್ವಾಹಕರಾದ ಅವರು, ಒಂಬತ್ತು ಲಕ್ಷ ಹಸುಗಳ ರಕ್ಷಣೆಗಾಗಿ ನಿಂತಿದ್ದಾರೆ.ಇದರಲ್ಲಿ ಹಾಲು ನೀಡದ ಏಳು ಲಕ್ಷ ಹಸುಗಳೂ ಸೇರಿವೆ. ಎಂಟು ರಾಜ್ಯಗಳಲ್ಲಿ 100 ಆಂಬ್ಯುಲೆನ್ಸ್‌ಗಳನ್ನು ಬಳಸಿಕೊಂಡು ತಮ್ಮ ತಂಡಗಳು ಸುಮಾರು 50,000 ಹಸುಗಳನ್ನು ರಕ್ಷಿಸಿವೆ ಎಂದಿದ್ದಾರೆ. ಅಲ್ಲದೆ, ತಾವು ಪ್ರತಿದಿನ ಮನೆಯಲ್ಲಿ ಆರು ಹಸುಗಳಿಗೆ ಮಸಾಜ್ ಆರೈಕೆ ಮಾಡುವುದಾಗಿಯೂ ಅಂಬಾನಿ ತಿಳಿಸಿದ್ದಾರೆ.

ವಿಡಿಯೋ ನೋಡಿ:



ಗೋಹತ್ಯೆಗೆ ಕಾನೂನುಬದ್ಧ ಅವಕಾಶವಿರುವ 2-3 ರಾಜ್ಯ ಗಳಿಂದ ತಮ್ಮ ಸಿಬ್ಬಂದಿ ಗೋವುಗಳನ್ನು ರಕ್ಷಣೆ ಮಾಡುತ್ತಾರೆ. ತಮ್ ದಿನಚರಿಯ ಬಗ್ಗೆ ಮಾಹಿತಿ ನೀಡಿದ ಅಂಬಾನಿ, ತಮ್ಮ ಮನೆಯಲ್ಲಿ ಆರು ಹಸುಗಳಿದ್ದು  ಕೆಲಸಕ್ಕೆ ಹೋಗುವ ಮೊದಲು ಪ್ರತಿದಿನ ಅವುಗಳಿಗೆ ಮಸಾಜ್ ಮಾಡುವುದಾಗಿ ತಿಳಿಸಿದ್ದಾರೆ.

Viral Video: ಬ್ಲಿಂಕ್‌ಇಟ್‌ ಉಚಿತ ಆಂಬ್ಯುಲೆನ್ಸ್‌ ಸೇವೆಯಿಂದ ಉಳಿಯಿತು ವೃದ್ಧೆಯ ಪ್ರಾಣ

ಗೋ ಸಂರಕ್ಷಣೆಯ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿರುವ ಕಾರ್ಯಗಳು ತಮಗೆ ಸ್ಫೂರ್ತಿಯ ಮೂಲ..ಹೀಗಾಗಿ ಗೋವು ರಕ್ಷಣೆಗೆ ಹೆಚ್ಚಿನ ಒತ್ತು ನೀಡುವುದಾಗಿ ಹೇಳಿದ್ದಾರೆ.ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಶ್ಲಾಘನೆ ವ್ಯಕ್ತ ಪಡಿಸುತ್ತಿದ್ದಾರೆ. ಬಳಕೆದಾರರೊಬ್ಬರು ನಿಮ್ಮ ಈ ಮಾನವೀಯ ಕಾರ್ಯಕ್ಕೆ ಮೆಚ್ಚಲೇಬೇಕು ಅಂದಿದ್ದಾರೆ.