ಪ್ರಾಣದ ಹಂಗು ತೊರೆದು ವಿದ್ಯುತ್ ತಂತಿಯಲ್ಲಿ ಸಿಲುಕಿದ ಪಕ್ಷಿಯನ್ನು ರಕ್ಷಿಸಿದ ಯುವಕ: ಮನ ಗೆದ್ದ ವಿಡಿಯೊ ಇಲ್ಲಿದೆ
Viral Video: ಯುವಕನೊಬ್ಬ ತನ್ನ ಜೀವದ ಹಂಗನ್ನೇ ತೊರೆದು ಮಾನವೀಯತೆ ಮೆರೆದ ಘಟನೆಯೊಂದು ನಡೆದಿದೆ. ಯುವಕನ ಈ ಮಾನವೀಯ ಸಾಹಸಕ್ಕೆ ಇಡೀ ದೇಶವೇ ಮೆಚ್ಚುಗೆ ಸೂಚಿಸಿದೆ. ಹೌದು, ವಿದ್ಯುತ್ ತಂತಿಯಲ್ಲಿ ಸಾವು ಬದುಕಿನ ನಡುವೆ ಹೊರಾಡುತ್ತಿದ್ದ ಪಕ್ಷಿಯನ್ನು ಯುವಕನೊಬ್ಬ ಜೀವದ ಹಂಗು ತೊರೆದು ರಕ್ಷಿಸಲು ಮುಂದಾಗಿರುವ ಈ ಘಟನೆ ಪಂಜಾಬ್‌ನಲ್ಲಿ ವರದಿಯಾಗಿದೆ.
ಜೀವವನ್ನೇ ಪಣಕ್ಕಿಟ್ಟು ಹಕ್ಕಿಯನ್ನು ರಕ್ಷಿಸಿದ ಯುವಕ -
ಚಂಡೀಗಢ, ಜ. 7: ಯಾರಾದರೂ ಅಪಾಯದಲ್ಲಿ ಸಿಲುಕಿದ್ದಾರೆ ಎನ್ನುವಾಗ ಸಹಾಯ ಮಾಡಲು ಮುಂದಾಗುವುದು ಇತ್ತೀಚೆಗೆ ಕಡಿಮೆಯೇ. ಆದರೆ ಇದಕ್ಕೆ ತದ್ವಿರುದ್ಧ ಘಟನೆಯೊಂದು ನಡೆದಿದೆ. ಯುವಕನೊಬ್ಬ ತನ್ನ ಜೀವದ ಹಂಗನ್ನೇ ತೊರೆದು ಮಾನವೀಯತೆ ಮೆರೆದಿದ್ದಾನೆ. ಈ ಯುವಕನ ಈ ಮಾನವೀಯ ಸಾಹಸವನ್ನು ಇಡೀ ದೇಶವೇ ಮೆಚ್ಚಿಕೊಂಡಿದೆ. ಹೌದು, ವಿದ್ಯುತ್ ತಂತಿಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಪಕ್ಷಿಯನ್ನು ಯುವಕನೊಬ್ಬ ತನ್ನ ಜೀವವನ್ನೆ ಮರೆತು ರಕ್ಷಿಸಲು ಮುಂದಾಗಿರುವ ಘಟನೆ ಪಂಜಾಬ್‌ನಲ್ಲಿ ನಡೆದಿದೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ಪಂಜಾಬ್‌ನ ಗುರುದ್ವಾರವೊಂದರ ಬಳಿ ಈ ಘಟನೆ ನಡೆದಿದೆ. ಎತ್ತರದ ವಿದ್ಯುತ್ ಕಂಬದ ತಂತಿಯಲ್ಲಿ ಪಕ್ಷಿಯೊಂದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿತ್ತು. ಇದನ್ನು ಗಮನಿಸಿದ ಕ್ರೇನ್ ಆಪರೇಟರ್ ಒಬ್ಬರು ಪಕ್ಷಿಯನ್ನು ರಕ್ಷಿಸಲು ಮುಂದಾಗಿದ್ದಾರೆ. ಈ ಪಕ್ಷಿಯನ್ನು ರಕ್ಷಿಸಲು ತಮ್ಮ ಜೀವವನ್ನೇ ಪಣಕ್ಕಿಟ್ಟ ಈ ಯುವಕನ ಸಾಹಸ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ವಿಡಿಯೊ ನೋಡಿ:
📍Punjab | Viral video shows man hanging from a crane to rescue bird entangled in wires. pic.twitter.com/bYXLSlpp3e
— The Tatva (@thetatvaindia) January 6, 2026
ಮೊದಲಿಗೆ ಆ ಯುವಕ ಯಾವುದೇ ಸುರಕ್ಷತಾ ಉಪಕರಣ ಇಲ್ಲದೆ ಕಬ್ಬಿಣದ ಸರಳಿಗೆ ಜೋತುಬಿದ್ದು ವಿದ್ಯುತ್ ತಂತಿ ಹತ್ತಿರ ತೆರಳಿದ್ದಾರೆ. ನಂತರ ವಿದ್ಯುತ್ ತಂತಿಗಳ ನಡುವೆ ಅತ್ಯಂತ ಜಾಗರೂಕತೆಯಿಂದ ಪಕ್ಷಿಯನ್ನು ಬಿಡಿಸಿದ್ದಾರೆ. ಆ ವ್ಯಕ್ತಿ ಪಕ್ಷಿಯನ್ನು ಮುಕ್ತಗೊಳಿಸುತ್ತಿದ್ದಂತೆಯೇ ಹಕ್ಕಿ ರೆಕ್ಕೆ ಬಿಚ್ಚಿ ಹಾರಡಿದ್ದು ಎಲ್ಲರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಸದ್ಯ ಈ ವಿಡಿಯೊ ಬಹಳಷ್ಟು ಶೇರ್ ಆಗಿದ್ದು , ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆ ಪಡೆದಿದೆ.
ವಾಕಿಂಗ್ ಹೋಗಿದ್ದವರ ಬೆನ್ನಟ್ಟಿದ ಕರಡಿ; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ!
ಈ ಹೃದಯಸ್ಪರ್ಶಿ ಕ್ಲಿಪ್‌ಗೆ ಹಲವರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಇಂದಿನ ಜಗತ್ತಿನಲ್ಲಿ ಇಂತಹ ವ್ಯಕ್ತಿಗಳನ್ನು ನೋಡುವುದೇ ಅಪರೂಪ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಯುವಕನ ಧೈರ್ಯಕ್ಕೆ ಯಾರು ಸರಿಸಾಟಿ ಇಲ್ಲ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಪ್ರಾಣಿ-ಪಕ್ಷಿಗಳ ಮೇಲಿನ ಈ ಪ್ರೀತಿ ಮೆಚ್ಚುವಂತದ್ದು. ಆದರೆ ವಿದ್ಯುತ್ ತಂತಿಗಳ ಬಳಿ ಇಂತಹ ಸಾಹಸ ಮಾಡುವುದು ಜೀವಕ್ಕೆ ಅಪಾಯಕಾರಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.