ಬೆಂಗಳೂರು ಜೀವನ ದುಬಾರಿ ಅಲ್ಲ: 18,000 ರುಪಾಯಿಯಲ್ಲಿ ಐಷಾರಾಮಿ ಬದುಕು ಸಾಗಿಸುವ ಯುವತಿ; ಈ ಟಿಪ್ಸ್ ನೀವೂ ಫಾಲೋ ಮಾಡಿ
Viral Video: ಬೆಂಗಳೂರಿನಲ್ಲಿ ಕಡಿಮೆ ಬಜೆಟ್‌ನಲ್ಲೂ ಜೀವನ ನಡೆಸಬಹುದು ಎಂದು ಯುವತಿಯೊಬ್ಬಳು ತೋರಿಸಿಕೊಟ್ಟಿದ್ದಾಳೆ. ಕೇವಲ 18,000 ರುಪಾಯಿಯಲ್ಲಿ ಅತ್ಯಂತ ಶಿಸ್ತು ಬದ್ಧವಾಗಿ ಹಣಕಾಸು ನಿರ್ವಹಣೆ ಮಾಡುತ್ತಿದ್ದಾಳೆ. ತನ್ನ ಮಾಸಿಕ ವೆಚ್ಚಗಳನ್ನು ನಿರ್ವಹಿಸುವ ರೀತಿಯನ್ನು ಆಕೆ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಬೆಂಗಳೂರು ನಿವಾಸಿ ಆಮಿ ಅರೋರಾ -
ಬೆಂಗಳೂರು, ಮಾ. 30: ಸಿಲಿಕಾನ್ ಸಿಟಿ ಬೆಂಗಳೂರು ಐಷಾರಾಮಿ ಜೀವನಶೈಲಿಗೆ ಹೆಸರುವಾಸಿ. ಇಲ್ಲಿನ ಜೀವನ ಶೈಲಿಯೂ ದುಬಾರಿಯಾಗಿದ್ದು, ಪ್ರತಿ ತಿಂಗಳು ನೀರಿನಂತೆ ಹಣ ಖರ್ಚು ಮಾಡಬೇಕಾಗುತ್ತದೆ ಎನ್ನುವುದು ಬಹುತೇಕರ ಅನಿಸಿಕೆ. ಆದರೆ ಬೆಂಗಳೂರಿನಲ್ಲಿ(Bengaluru) ಕಡಿಮೆ ಬಜೆಟ್‌ನಲ್ಲೂ ಜೀವನ ನಡೆಸಬಹುದು ಎಂಬುದನ್ನು ಯುವತಿಯೊಬ್ಬಳು ತೋರಿಸಿ ಕೊಟ್ಟಿದ್ದಾಳೆ. ಆರ್ಥಿಕ ವಿಚಾರದಲ್ಲಿ ಶಿಸ್ತು ಅಳವಡಿಸಿಕೊಂಡರೆ ಕೇವಲ 18,000 ರುಪಾಯಿಯಲ್ಲಿ ಹೇಗೆ ಐಷಾರಾಮಿ ಜೀವನ ಸಾಗಿಸಬಹುದು ಎನ್ನುವುದನ್ನು ವಿವರಿಸಿದ್ದಾಳೆ.
ಬೆಂಗಳೂರಿನ ಯುವ ವೃತ್ತಿಪರರು ವಿಭಿನ್ನ ಕಾರಣಕ್ಕಾಗಿ ಗಮನ ಸೆಳೆಯುತ್ತಿದ್ದಾರೆ. ಅದೇ ರೀತಿ ಇದೀಗ 22 ವರ್ಷದ ಆಮಿ ಅರೋರಾ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾಳೆ. ಅವರು ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಇಂಟರ್ನ್ ಆಗಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸುಮಾರು 18,000 ರುಪಾಯಿಯಲ್ಲಿ ಮಾಸಿಕ ವೆಚ್ಚಗಳನ್ನು ಹೇಗೆ ಸರಿತೂಗಿಸಿಕೊಂಡು ಹೋಗಲಾಗುತ್ತದೆ ಎನ್ನುವುದನ್ನು ಆಕೆ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ವಿಡಿಯೊ ನೋಡಿ:
ಬಾಡಿಗೆಯು ತನ್ನ ವೆಚ್ಚದ ದೊಡ್ಡ ಪಾಲನ್ನು ತೆಗೆದುಕೊಳ್ಳುತ್ತದೆ ಎಂದು ಅರೋರಾ ವಿವರಿಸಿದ್ದಾಳೆ. ಆಕೆ ಪಿಜಿಯಲ್ಲಿ ಉಳಿದುಕೊಂಡಿದ್ದು ತಿಂಗಳಿಗೆ 7,200 ರುಪಾಯಿ ಬಾಡಿಗೆ ಪಾವತಿಸುವುದಾಗಿ ತಿಳಿಸಿದ್ದಾಳೆ. ಖಾಸಗಿ ಅಪಾರ್ಟ್‌ಮೆಂಟ್‌ಗಳಿಗೆ ಹೋಲಿಸಿದರೆ ಪಿಜಿಯಲ್ಲಿ ಇರುವುದು ಲಾಭದಾಯಕ ಎಂದು ಹೇಳಿದ್ದಾಳೆ.
ಇದೆಂಥ ಹುಚ್ಚಾಟ? ಚಲಿಸುವ ಟ್ರಕ್ ಕೆಳಗೆ ಬೈಕ್ ಓಡಿಸಿದ ಯುವಕ
ಊಟದ ಖರ್ಚಿಗಾಗಿ ಮೆಸ್ ಸೇವೆಯನ್ನು ಬಳಸಿಕೊಂಡಿದ್ದಾಳೆ. ಇದಕ್ಕಾಗಿ ಪ್ರತಿ ತಿಂಗಳು ಸುಮಾರು 3,600 ರುಪಾಯಿ ಪಾವತಿಸಬೇಕು. ಇದರಿಂದ ಹೊರಗಿನ ಆಹಾರದ ಮೇಲಿನ ಅನಗತ್ಯ ವೆಚ್ಚ ಕೂಡ ಕಡಿಮೆಯಾಗಿದೆ. ಪ್ರಯಾಣ ವೆಚ್ಚ ಮಾಸಿಕ ಸುಮಾರು 1,600 ರುಪಾಯಿ. ಆಕೆ ವಾರಕ್ಕೆ ಎರಡು ಬಾರಿ ಮಾತ್ರ ಕಚೇರಿಗೆ ತೆರಳುತ್ತಾಳೆ. ಶಾಪಿಂಗ್‌ಗೆ ಸುಮಾರು 2,000 ರುಪಾಯಿ. ಹೊರಗಡೆ ಹೋದಾಗ ಹೋಟೆಲ್ ಖರ್ಚು ಮತ್ತು ನೆಚ್ಚಿನ ಆಹಾರ ಆರ್ಡರ್ ಮಾಡಲು 2,000 ರುಪಾಯಿ ಹಾಗೂ ವಿವಿಧ ವೆಚ್ಚಗಳಿಗಾಗಿ ಸುಮಾರು 1,500 ರುಪಾಯಿ ಖರ್ಚಾಗುತ್ತದೆ ಎಂದು ತಿಳಿಸಿದ್ದಾಳೆ.
ಬೆಂಗಳೂರಿನ ದುಬಾರಿ ಜೀವನದ ನಡುವೆ ಅತ್ಯಂತ ಶಿಸ್ತುಬದ್ಧವಾಗಿ ಹಣಕಾಸು ನಿರ್ವಹಣೆ ಮಾಡಲು ಈಕೆಯ ಟ್ರಿಕ್ಸ್ ಅನೇಕರಿಗೆ ಮಾದರಿ ಎನಿಸಿಕೊಂಡಿದೆ. ಈ ವೀಡಿಯೊ ಆನ್‌ಲೈನ್‌ನಲ್ಲಿ ಅನೇಕ ವೀಕ್ಷಕರನ್ನು ಆಕರ್ಷಿಸಿದೆ. ಹಲವರು ಆಕೆಯ ಶಿಸ್ತನ್ನು ಹೊಗಳಿದ್ದಾರೆ.