ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪತಿಯ ಮೊದಲ ಮದುವೆ ವೇಳೆ ಅತಿಥಿ: 15 ವರ್ಷಗಳ ನಂತರ ಅದೇ ವ್ಯಕ್ತಿಯೊಂದಿಗೆ ಮದುವೆ! ಬರೋಬ್ಬರಿ 38 ವರ್ಷ ಅಂತರ ಹೊಂದಿರುವ ದಂಪತಿಯ ಕಥೆ ಕೇಳಿ

Viral News: ಮಹಿಳೆಯೊಬ್ಬರಿಗೆ ತನ್ನ ಪತಿಯ ಮದುವೆ ಆಲ್ಬಂ ಫೋಟೊ ನೋಡುವಾಗ ಶಾಕಿಂಗ್ ವಿಚಾರವೊಂದು ಗೊತ್ತಾಗಿದೆ. ವಿವಾಹ ಆಲ್ಬಂ ಮೂಲಕ ಅವರು ಅಪರೂಪದ ವಿಚಾರ ಕಂಡುಕೊಂಡಿದ್ದಾರೆ. 15 ವರ್ಷಗಳ ಹಿಂದೆ ಅವರು ತಮ್ಮ 62 ವರ್ಷದ ಪತಿಯನ್ನು ಭೇಟಿಯಾಗಿದ್ದರು. ಮತ್ತು ಮೊದಲ ಮದುವೆಯ ಅತಿಥಿಯಾಗಿದ್ದರು.

ಪತಿಯ ಮೊದಲ ಮದುವೆಗೆ ಬಾಲ್ಯದಲ್ಲಿ ಅತಿಥಿಯಾಗಿ ಹೋಗಿದ್ದ ಮಹಿಳೆ

ಪತಿಯ ಮೊದಲ ಮದುವೆಗೆ ಅತಿಥಿಯಾಗಿ ಹೋಗಿದ್ದ ಮಹಿಳೆ -

Profile
Pushpa Kumari Apr 8, 2026 2:07 PM

ದೆಹಲಿ, ಏ. 8: ಇಂಡೋನೇಷ್ಯಾದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. 24 ವರ್ಷದ ಮಹಿಳೆಗೆ ತನ್ನ ಪತಿಯ ಮೊದಲ ಮದುವೆಯ ಆಲ್ಬಂ ನೋಡುವಾಗ ಶಾಕಿಂಗ್ ವಿಚಾರ ಗೊತ್ತಾಗಿದೆ. 15 ವರ್ಷಗಳ ಹಿಂದೆ ಅಂದರೆ ಮಹಿಳೆಗೆ 9 ವರ್ಷ ಇದ್ದಾಗ 62 ವರ್ಷದ ಪತಿಯನ್ನು ಭೇಟಿಯಾಗಿದ್ದರು. ಅಂದರೆ ಪತಿಯ ಮೊದಲ ಮದುವೆಗೆ ಅತಿಥಿಯಾಗಿ ಹೋಗಿದ್ದರು. ಮದುವೆಗೆ ಅತಿಥಿಯಾಗಿ ಹೋಗಿದ್ದ ವ್ಯಕ್ತಿಯನ್ನೇ ವರಿಸಿರುವ ವಿಚಾರ ಅವರಿಗೆ ತಿಳಿದಿರಲಿಲ್ಲ. ಸದ್ಯ ಈ ಸುದ್ದಿ (Viral News) ವೈರಲ್‌ ಆಗಿದೆ.

ಬಂಗ್ಕಾ ದ್ವೀಪದ ರೆನಾಟಾ ಫಾಧಿಯಾ (24) ತನ್ನ 62 ವರ್ಷದ ಪತಿಯ ಹಳೆಯ ಫೋಟೊಗಳನ್ನು ನೋಡುತ್ತಿದ್ದರು. ಆಗ ಮದುಮಗನ ಪಕ್ಕದಲ್ಲೇ ನಿಂತಿದ್ದ 9 ವರ್ಷದ ಬಾಲಕಿಯನ್ನು ಕಂಡು ಅವರಿಗೆ ಶಾಕ್ ಆಗಿದ್ದಾರೆ. ಆ ಬಾಲಕಿ ಮತ್ಯಾರೂ ಅಲ್ಲ, ಸ್ವತಃ ಅವರೇ.

ಬೆಳಗ್ಗೆ 6:30ಕ್ಕೆ ಆಫೀಸ್‌ಗೆ ಹಾಜರಾಗಬೇಕು ಎಂಬ ಆದೇಶಕ್ಕೆ ಜೆನ್‌ ಝೀ ಉದ್ಯೋಗಿಯ ಖಡಕ್ ರೆಸ್ಪಾನ್ಸ್

ರೆನಾಟಾ ಅವರ ಪತಿ 2009ರಲ್ಲಿ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಿದ್ದರು. ಅಂದು ಕೇವಲ 9 ವರ್ಷದ ಬಾಲಕಿಯಾಗಿದ್ದ ರೆನಾಟಾ ಅವರ ಮದುವೆಗೆ ಅತಿಥಿಯಾಗಿ ಹೋಗಿದ್ದರು. ಈಗ 62 ವರ್ಷ ವಯಸ್ಸಿನ ಆಕೆಯ ಪತಿ ಅವರಿಗಿಂತ 38 ವರ್ಷ ದೊಡ್ಡವರು. ಫೋಟೊ ತೆಗೆದ ಸಮಯದಲ್ಲಿ, ಅವರು ಅತಿಥಿಯಾಗಿ ಮದುವೆಗೆ ಹಾಜರಾಗಿದ್ದರು. ಇಬ್ಬರೂ ದೂರದ ಸಂಬಂಧಿಗಳು. ಆದರೆ ಅವರು ಪರಸ್ಪರ ಮಾತನಾಡಿರಲಿಲ್ಲ.

ರೆನಾಟಾ ಅವರ ಪತಿ 2011ರಲ್ಲಿ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿದ್ದರು. ನಂತರ 2019ರಲ್ಲಿ ಇವರಿಬ್ಬರು ಪ್ರೀತಿಸಿ 2020ರಲ್ಲಿ ವಿವಾಹವಾದರು. 2021ರಲ್ಲಿ ಇವರಿಗೆ ಒಂದು ಮಗು ಕೂಡ ಜನಿಸಿದೆ. ಸದ್ಯ ಈ ಸುದ್ದಿ ಆನ್‌ಲೈನ್‌ನಲ್ಲಿ ಚರ್ಚೆಗೆ ನಾಂದಿ ಹಾಡಿದೆ. ವಿಶೇಷವಾಗಿ ದಂಪತಿಯ ವಯಸ್ಸಿನ ಅಂತರದ ಬಗ್ಗೆ ನೆಟ್ಟಿಗರು ಚರ್ಚೆ ಮಾಡಿದ್ದಾರೆ. ಬಳಕೆದಾರರೊಬ್ಬರು ವಯಸ್ಸು ಮುಖ್ಯ ಅಲ್ಲ... ಹಣವಿದ್ದರೆ, 38 ವರ್ಷ ವಯಸ್ಸಿನ ವ್ಯತ್ಯಾಸವಿದ್ದರೂ ನಡೆಯುತ್ತೆ ಎಂದು ಬರೆದಿದ್ದಾರೆ.