Viral Video: ದಿಟ್ಟಿಸಿ ನೋಡಿದನೆಂದು ಪ್ರೊಫೆಸರ್‌ಗೆ ಎಬಿವಿಪಿ ಸದಸ್ಯೆಯಿಂದ ಕಪಾಳಮೋಕ್ಷ! ವಿಡಿಯೊ ನೋಡಿ
ABVP member slapped the professor: ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ (ಡಿಯುಎಸ್‌ಯು) ಜಂಟಿ ಕಾರ್ಯದರ್ಶಿ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯೆ ದೀಪಿಕಾ ಝಾ ಎಂಬುವವರು ಡಾ. ಭೀಮ್ ರಾವ್ ಅಂಬೇಡ್ಕರ್ ಕಾಲೇಜಿನ ಪ್ರೊಫೆಸರ್‌ಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.

-

ನವದೆಹಲಿ: ಪ್ರೊಫೆಸರ್ ತನ್ನನ್ನು ದಿಟ್ಟಿಸಿ ನೋಡಿ ನಕ್ಕಿದ್ದಕ್ಕೆ ಕಪಾಳಮೋಕ್ಷ ಮಾಡಿದ್ದಾಗಿ ಎಬಿವಿಪಿ ಸದಸ್ಯೆಯೊಬ್ಬರು ತಿಳಿಸಿದ್ದಾರೆ. ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ (ಡಿಯುಎಸ್‌ಯು) ಜಂಟಿ ಕಾರ್ಯದರ್ಶಿ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಸದಸ್ಯೆ ದೀಪಿಕಾ ಝಾ (Deepika Jha) ಎಂಬುವವರು ಡಾ.ಭೀಮ್ ರಾವ್ ಅಂಬೇಡ್ಕರ್ ಕಾಲೇಜಿನ ಪ್ರೊಫೆಸರ್‌ಗೆ ಕಪಾಳಮೋಕ್ಷ ಮಾಡಿದ್ದಾರೆ. ಪ್ರಾಧ್ಯಾಪಕರು ಕಾಲೇಜಿನಲ್ಲಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೆ, ಅನುಚಿತವಾಗಿ ವರ್ತಿಸಿದ್ದಾರೆ ಎಂದು ದೀಪಿಕಾ ಝಾ ಆರೋಪಿಸಿದ್ದಾರೆ. ಪ್ರಾಧ್ಯಾಪಕರಿಗೆ ಕಪಾಳಮೋಕ್ಷ ಮಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.
ಸಂವಾದದ ಸಮಯದಲ್ಲಿ, ಅವರು ಸಾರ್ವಜನಿಕವಾಗಿ ಧೂಮಪಾನ ಮಾಡುವುದನ್ನು ನಾನು ನೋಡಿದೆ. ಅದು ವಿದ್ಯಾರ್ಥಿಗಳ ಮೇಲೆ ಒಳ್ಳೆಯ ಪ್ರಭಾವ ಬೀರುವುದಿಲ್ಲ ಎಂದು ನಾನು ಅವರಿಗೆ ಹೇಳಿದಾಗ, ಅವರು ನನ್ನನ್ನು ನಿಂದಿಸಿದರು ಎಂದು ದೀಪಿಕಾ ಝಾ ಹೇಳಿದರು. ಪ್ರಾಧ್ಯಾಪಕರಲ್ಲಿ ತಮ್ಮ ಅನಾನುಕೂಲತೆಯನ್ನು ವ್ಯಕ್ತಪಡಿಸುತ್ತಿದ್ದರೂ ಸಹ, ಅವರು ತಮ್ಮನ್ನೇ ದಿಟ್ಟಿಸಿ ನೋಡಿ ನಕ್ಕರು ಎಂದು ಝಾ ಹೇಳಿದರು. ಅವರು ಮೌಖಿಕವಾಗಿ ತನ್ನನ್ನು ನಿಂದಿಸಿದ ನಂತರವೇ ಅವರಿಗೆ ಕಪಾಳಮೋಕ್ಷ ಮಾಡಿದೆ. ನಾನು ಹಾಗೆ ಮಾಡಬಾರದಿತ್ತು ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಅವರು ಅನುಚಿತವಾಗಿ ವರ್ತಿಸಿದರು ಎಂದು ಆರೋಪಿಸಿದರು.
ಪ್ರಾಧ್ಯಾಪಕ ಸುಜಿತ್ ಕುಮಾರ್ ವಿರುದ್ಧ ವಿದ್ಯಾರ್ಥಿಗಳು ದೂರು ನೀಡಿದ್ದರು. ಇದನ್ನು ಪರಿಹರಿಸುವುದಕ್ಕಾಗಿ ಝಾ ಅಕ್ಟೋಬರ್ 16 ರಂದು ಕಾಲೇಜಿಗೆ ಭೇಟಿ ನೀಡಿದಾಗ ವಿವಾದ ಭುಗಿಲೆದ್ದಿತು. ಸುಜಿತ್ ಕುಮಾರ್ ಅವರು ಪ್ರಾಂಶುಪಾಲರ ಕಚೇರಿಯೊಳಗೆ ತನಗೆ ಬೆದರಿಕೆ ಹಾಕಿದ್ದಾರೆ ಮತ್ತು ಅವಾಚ್ಯ ಶಬ್ಧಗಳನ್ನು ಬಳಸಿದ್ದಾರೆ. ಅಲ್ಲದೆ ಆತ ಮದ್ಯ ಕುಡಿದಂತೆ ತೋರುತ್ತಿದ್ದ ಎಂದು ದೀಪಿಕಾ ಝಾ ಆರೋಪಿಸಿದ್ದಾರೆ.
ಇದನ್ನೂ ಓದಿ: Viral Video: ರೈಲ್ವೆ ಸಿಬ್ಬಂದಿ ನಡುವೆ ಮಾರಾಮಾರಿ... ಅಷ್ಟಕ್ಕೂ ಆಗಿದ್ದೇನು? ವಿಡಿಯೊ ವೈರಲ್
ಪದೇ ಪದೇ ಬೆದರಿಕೆ ಹಾಕುವುದು, ನಿರಂತರವಾಗಿ ನೋಡುವುದು ಮತ್ತು ಅಸಭ್ಯ ಮಾತುಗಳನ್ನು ಕೇಳಿದ್ರೆ, ಆ ಪ್ರಾಧ್ಯಾಪಕರು ಮದ್ಯದ ಅಮಲಿನಲ್ಲಿ ಕಾಲೇಜಿಗೆ ಬಂದಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದವು. ಆ ದುಃಖ ಮತ್ತು ಕೋಪದ ಕ್ಷಣದಲ್ಲಿ, ನಾನು ಹಠಾತ್ತನೆ ಪ್ರತಿಕ್ರಿಯಿಸಿದೆ. ಅದಕ್ಕಾಗಿ ನಾನು ಪ್ರಾಮಾಣಿಕವಾಗಿ ವಿಷಾದಿಸುತ್ತೇನೆ ಎಂದು ಝಾ ಹೇಳಿದರು.
ಘಟನೆಯ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಪೊಲೀಸರ ಸಮ್ಮುಖದಲ್ಲಿಯೇ ಪ್ರಾಂಶುಪಾಲರ ಕಚೇರಿಯೊಳಗೆ ಪ್ರಾಧ್ಯಾಪಕರ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ವಿಡಿಯೊದಲ್ಲಿ ಗಮನಿಸಬಹುದು. ಈ ಘಟನೆಯ ನಂತರ, ದೆಹಲಿ ವಿಶ್ವವಿದ್ಯಾಲಯದ ಉತ್ತರ ಕ್ಯಾಂಪಸ್‌ನಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ಎರಡು ಪ್ರಮುಖ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳಾದ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (SFI) ಮತ್ತು ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (AISA) ಈ ಹಲ್ಲೆಯನ್ನು ಖಂಡಿಸಿದವು.
ವಿಡಿಯೊ ವೀಕ್ಷಿಸಿ:
DUSU Joint Secretary and ABVP leader Deepika Jha slaps Prof. Sujit Kumar, convener of the disciplinary committee, inside the Principal’s office in the presence of Police.
— Mohammed Zubair (@zoo_bear) October 17, 2025
A incident happened at Dr. Bhim Rao Ambedkar College. pic.twitter.com/x59pIH2ggO
ಶೈಕ್ಷಣಿಕ ಸ್ಥಳಗಳ ಘನತೆ ಮತ್ತು ಪಾವಿತ್ರ್ಯದ ಮೇಲಿನ ನೇರ ದಾಳಿ ಎಂದು ಎಸ್‌ಎಫ್‌ಐ ಕರೆದಿದೆ. ಎಬಿವಿಪಿ ಸದಸ್ಯರಿಂದ ಹೆಚ್ಚುತ್ತಿರುವ ಬೆದರಿಕೆ ಮತ್ತು ಆಕ್ರಮಣಶೀಲತೆಯ ಮಾದರಿ ಎಂದು ಅದು ಆರೋಪಿಸಿದೆ. ಈ ಸಂಬಂಧ ನಿಷ್ಪಕ್ಷಪಾತ ಮತ್ತು ಕಾಲಮಿತಿಯ ತನಿಖೆಗೆ ಒತ್ತಾಯಿಸಿದೆ. ಝಾ ಅವರ ರಾಜೀನಾಮೆ ಮತ್ತು ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯಿಸಿ ಎಐಎಸ್ಎ ಡಿಯುಎಸ್‌ಯು ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿತು.
ಈ ದಾಳಿ ಕೇವಲ ಒಬ್ಬ ಪ್ರಾಧ್ಯಾಪಕರ ಮೇಲೆ ಅಲ್ಲ, ಬದಲಾಗಿ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಮುಕ್ತವಾಗಿ ಯೋಚಿಸಬಹುದಾದ ಮತ್ತು ಭಿನ್ನಾಭಿಪ್ರಾಯ ವ್ಯಕ್ತಪಡಿಸಬಹುದಾದ ವಿಶ್ವವಿದ್ಯಾಲಯದ ಕಲ್ಪನೆಯ ಮೇಲೆಯೇ ಆಗಿದೆ ಎಂದು AISA DU ಅಧ್ಯಕ್ಷ ಸಾವಿ ಹೇಳಿದರು. ಪ್ರಕರಣ ಸಂಬಂಧ ದೆಹಲಿ ವಿಶ್ವವಿದ್ಯಾಲಯವು ಈ ವಿಷಯದ ತನಿಖೆಗಾಗಿ ತನಿಖಾ ಸಮಿತಿಯನ್ನು ರಚಿಸಿದೆ.