ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ತುಂಬಾ ಇಷ್ಟಾ ಅಂತ ಚಿಕ್ಕಿ ತಿಂತೀರಾ? ಹಾಗಾದ್ರೆ ಒಮ್ಮೆ ವೈರಲ್‌ ಆಗಿರೋ ಈ ವಿಡಿಯೋ ನೋಡಿ

Viral Video: ಚಿಕ್ಕಿ ತಯಾರಿಸುವ ವಿಧಾನದ ಬಗ್ಗೆ ಇದೀಗ ಶಾಕಿಂಗ್ ವಿಡಿಯೊವೊಂದು ಹೊರಬಿದ್ದಿದೆ. ತಯಾರಾಗುವ ಅಶುಚಿಯಾದ ವಿಧಾನ ಕಂಡು ಜನರೇ ಆತಂಕ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಚಿಕ್ಕಿ ಪ್ರಿಯರಲ್ಲಿ ಆತಂಕ ಮೂಡಿಸಿದ್ದು,ಆಹಾರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸುವಂತೆ ಆಗಿದೆ.

ಕಡಲೆಕಾಯಿ ಚಿಕ್ಕಿ ಇಷ್ಟವೇ? ತಯಾರಿಸುವ ವಿಡಿಯೋ ಬಗ್ಗೆ ಕಣ್ಣುಹಾಯಿಸಿ!

ಕಡಲೆಕಾಯಿ ಚಿಕ್ಕಿ ತಯಾರಿಸುವ ವಿಡಿಯೋ -

Profile
Pushpa Kumari Jan 23, 2026 3:11 PM

ಮುಂಬೈ, ಜ.23: ಚಿಕ್ಕಿ ಎಂದು‌ ಕರೆಯಲ್ಪಡುವ ಕಡಲೆ ಕಾಯಿಯಲ್ಲಿ ತಯಾರಿಸುವ ಈ ತಿಂಡಿ ಭಾರತದ ಅತ್ಯಂತ ಪ್ರಿಯವಾದ ತಿನಿಸುಗಳಲ್ಲಿ ಒಂದಾಗಿದೆ. ಕೇವಲ ಸಣ್ಣ ಮಕ್ಕಳು ಮಾತ್ರವಲ್ಲದೆ ಹಿರಿಯರು ಕೂಡ ಇದನ್ನು ಇಷ್ಟಪಟ್ಟು ತಿನ್ನುತ್ತಾರೆ‌. ಆದರೆ ಇದೇ ಚಿಕ್ಕಿ ತಯಾರಿಸುವ ವಿಧಾನದ ಬಗ್ಗೆ ಇದೀಗ ಶಾಕಿಂಗ್ ವಿಡಿಯೊವೊಂದು ಹೊರಬಿದ್ದಿದೆ. ತಯಾರಾಗುವ ಅಶುಚಿಯಾದ ವಿಧಾನ ಕಂಡು ಜನರೇ ಆತಂಕ ವ್ಯಕ್ತ ಪಡಿಸಿದ್ದಾರೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ (Viral Video) ವಿಡಿಯೋವೊಂದು ಚಿಕ್ಕಿ ಪ್ರಿಯರಲ್ಲಿ ಆತಂಕ ಮೂಡಿಸಿದ್ದು, ಆಹಾರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸುವಂತೆ ಆಗಿದೆ.

ಕಂಟೆಂಟ್ ಕ್ರಿಯೆಟರ್ ಒಬ್ಬರು ಕಡಲೆಕಾಯಿ ಚಿಕ್ಕಿಯನ್ನು ಆರಂಭದಿಂದ ಕೊನೆಯವರೆಗೆ ಹೇಗೆ ತಯಾರಿಸಲಾಗುತ್ತದೆ ಎಂಬುದನ್ನು ತೋರಿಸುವ ಮೂಲಕ ಆನ್‌ಲೈನ್‌ನಲ್ಲಿ ಗಮನ ಸೆಳೆದರು. ವಿಡಿಯೋದಲ್ಲಿ, ಕಾರ್ಖಾನೆಯೊಂದರಲ್ಲಿ ಚಿಕ್ಕಿ ತಯಾರಿಸುವ ಸಂಪೂರ್ಣ ವಿಧಾನವನ್ನು ತೋರಿಸಲಾಗಿದೆ. ಬೆಲ್ಲದ ಪಾಕ ಮತ್ತು ಕಡಲೆಕಾಯಿಯ ಪುಡಿಯನ್ನು ನೆಲದ ಮೇಲೆಯೇ ಸುರಿದು ಹರಡಲಾಗಿದೆ. ಈ ನಡುವೆ ಆಹಾರ ತಯಾರಿಸುವ ಜಾಗದಲ್ಲಿಯೇ ಕಾರ್ಮಿಕರು ಬರಿಗಾಲಿನಲ್ಲಿ ಆಚೆ- ಈಚೆಗೊಮ್ಮೆ ಓಡಾಡುತ್ತಿರುವುದು ಕಂಡು ಬಂದಿದೆ.

ವಿಡಿಯೋ ನೋಡಿ:

ಕೆಲಸಗಾರರು ಕರಗಿದ ಬೆಲ್ಲದ ಸಿರಪ್ ಅನ್ನು ಮತ್ತೊಂದು ಪಾತ್ರೆಯಲ್ಲಿ ಸುರಿಯುವುದನ್ನು ತೋರಿಸುವ ಮೂಲಕ ವೀಡಿಯೊ ಪ್ರಾರಂಭವಾಗುತ್ತದೆ. ಸಿರಪ್ ಅನ್ನು ಮತ್ತೆ ಬಿಸಿ ಮಾಡಲಾಗುತ್ತಿದ್ದು ನಂತರ ಸಿಹಿಯನ್ನು ಹೆಚ್ಚಿಸಲು ಪುಡಿಮಾಡಿದ ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಲಾಗುತ್ತದೆ. ಮುಂದೆ, ಕಡಲೆಕಾಯಿಯನ್ನು ಸೇರಿಸಿ ಈ ಮಿಶ್ರಣವು ದಪ್ಪವಾಗಲು ಪ್ರಾರಂಭವಾಗುವವರೆಗೆ ಬೆರೆಸಲಾಗಿದೆ. ಆದರೆ ಬಳಕೆ ಮಾಡಿದ ಪಾತ್ರೆಗಳು ಮತ್ತು ಸ್ವಚ್ಛ ಗೊಳಿಸಿದಂತೆ ಕಾಣುತ್ತಿರಲಿಲ್ಲ.

Viral Video: ಬೆಂಗಳೂರಿನಲ್ಲಿ ಮಧ್ಯರಾತ್ರಿ ಆಟೋದಲ್ಲಿ ಸಂಚರಿಸಿದ ಮಹಿಳೆ ವಿಡಿಯೋದಲ್ಲಿ ಹೇಳಿದ್ದೇನು?

ಸದ್ಯ ಈ ವಿಡಿಯೊ ಬಗ್ಗೆ ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು ಪೋಸ್ಟ್‌ಗೆ ಪ್ರತಿಕ್ರಿಯಿಸುತ್ತಾ, “ಕೆಟ್ಟದ್ದಲ್ಲ, ಆದರೆ ನೆಲದ ಮೇಲೆ?” ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು ಕೂದಲನ್ನು ಕೆರೆದು ಕೊಳ್ಳುತ್ತಿದ್ದಾರೆ. ಆಹಾರವು ಬರಿಗಾಲಿನ ಪಕ್ಕದಲ್ಲಿದೆ. ಹಾಗಾಗಿ ರುಚಿ ಹೆಚ್ಚಾಗಿದೆ ಎಂದಿದ್ದಾರೆ. ಮತ್ತೊಬ್ಬರು ಯಾವುದೇ ವಸ್ತು ತಿನ್ನುವ ಮುನ್ನ ಪರಿಶೀಲನೆ ಮಾಡಿಕೊಳ್ಳಿ ಎಂದಿದ್ದಾರೆ.