ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಸಾಹಸಕ್ಕೆ ವಯಸ್ಸಿನ ಹಂಗಿಲ್ಲ! 80ನೇ ವಯಸ್ಸಿನಲ್ಲಿ ಸ್ಕೈಡೈವ್ ಮಾಡಿ ದಾಖಲೆ ನಿರ್ಮಿಸಿದ ಮಹಿಳೆ

ಡಾ. ಶ್ರದ್ಧಾ ಚೌಹಾಣ್ ತನ್ನ 80 ನೇ ವರ್ಷದ ಹುಟ್ಟುಹಬ್ಬದಂದು, ತನ್ನ ಮಗ, ನಿವೃತ್ತ ಸೇನಾ ಅಧಿಕಾರಿ ಬ್ರಿಗೇಡಿಯರ್ ಸೌರಭ್ ಸಿಂಗ್ ಶೇಖಾವತ್ ಅವರೊಂದಿಗೆ 10,000 ಅಡಿ ಎತ್ತರದಿಂದ ಜಿಗಿಯುವ ಮೂಲಕ ದಾಖಲೆ ನಿರ್ಮಿಸಿದ್ದಾಳೆ. ಈ ಮೂಲಕ ಡಾ. ಶ್ರದ್ಧಾ ಚೌಹಾಣ್, ಟಂಡೆಮ್ ಸ್ಕೈಡೈವ್ ಪೂರ್ಣಗೊಳಿಸಿದ ಅತ್ಯಂತ ಹಿರಿಯ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

80ನೇ ವಯಸ್ಸಿನಲ್ಲಿ ಸ್ಕೈಡೈವ್ ಮಾಡಿ ದಾಖಲೆ ನಿರ್ಮಿಸಿದ ಮಹಿಳೆ

Profile pavithra Jul 3, 2025 1:31 PM

ನವದೆಹಲಿ: ಸ್ಕೈಡೈವ್ ಮಾಡಬೇಕು ಎಂಬ ಆಸೆ ಹೆಚ್ಚಿನವರಿಗೆ ಇರುತ್ತದೆ. ಆದರೆ ಭಯದಿಂದಲೇ ಕೆಲವರು ಇದನ್ನು ಮಾಡುವುದಕ್ಕೆ ಮುಂದೇ ಬರುವುದಿಲ್ಲ. ಇದೀಗ 80 ವರ್ಷದ ಮಹಿಳೆಯೊಬ್ಬಳು ಸ್ಕೈಡೈವ್ ಮಾಡಿ ದಾಖಲೆ ನಿರ್ಮಿಸಿದ್ದಾಳೆ. ಡಾ. ಶ್ರದ್ಧಾ ಚೌಹಾಣ್, ಟಂಡೆಮ್ ಸ್ಕೈಡೈವ್ ಪೂರ್ಣಗೊಳಿಸಿದ ಅತ್ಯಂತ ಹಿರಿಯ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾಳೆ. ತನ್ನ 80 ನೇ ವರ್ಷದ ಹುಟ್ಟುಹಬ್ಬದಂದು, ಅವಳು 10,000 ಅಡಿ ಎತ್ತರದಿಂದ ಜಿಗಿಯುವ ಮೂಲಕ ದಾಖಲೆ ಪುಸ್ತಕಗದಲ್ಲಿ ತನ್ನ ಹೆಸರನ್ನು ಬರೆದಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೋಡುಗರಲ್ಲಿ ಆಶ್ಚರ್ಯ ಮೂಡಿಸಿದೆ.

ಬ್ರಿಗೇಡಿಯರ್ ಸೌರಭ್ ಸಿಂಗ್ ಶೇಖಾವತ್ ತಾಯಿ ಡಾ. ಶ್ರದ್ಧಾ, ತಮ್ಮ 80ನೇ ಹುಟ್ಟುಹಬ್ಬವನ್ನು ತನ್ನ ಮಗನೊಂದಿಗೆ ಆಚರಿಸಲು ಈ ಸಾಹಸಮಯ ಕೆಲಸ ಮಾಡಿದ್ದಾಳೆ. ವರ್ಟಿಗೊ, ಗರ್ಭಕಂಠದ ಸ್ಪಾಂಡಿಲೈಟಿಸ್ ಮತ್ತು ಬೆನ್ನುಮೂಳೆಯ ಡಿಸ್ಕ್ ಸಮಸ್ಯೆಗಳಂತಹ ಆರೋಗ್ಯ ಸವಾಲುಗಳನ್ನು ಎದುರಿಸುತ್ತಿದ್ದರೂ, ಡಾ. ಚೌಹಾಣ್ ದೆಹಲಿಯಿಂದ ಸುಮಾರು ಎರಡು ಗಂಟೆಗಳ ದೂರದಲ್ಲಿರುವ ಹರಿಯಾಣದ ನಾರ್ನಾಲ್ ಏರ್‌ಸ್ಟ್ರಿಪ್‌ನಲ್ಲಿರುವ ಸ್ಕೈಹೈ ಇಂಡಿಯಾದಲ್ಲಿ ಈ ಸಾಧನೆಯನ್ನು ಮಾಡಿದ್ದಾಳೆ.

ವಿಡಿಯೊ ಇಲ್ಲಿದೆ ನೋಡಿ...

ಸ್ಕೈಹೈ ಇಂಡಿಯಾದ ಅಧಿಕೃತ ಸೋಶಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಡಾ. ಚೌಹಾಣ್ ತನ್ನ ಮಗ, ನಿವೃತ್ತ ಬ್ರಿಗೇಡಿಯರ್ ಸೌರಭ್ ಸಿಂಗ್ ಶೇಖಾವತ್ ಸಹಾಯದಿಂದ ಸ್ಕೈಡೈವ್‍ಗೆ ಸಿದ್ಧತೆ ನಡೆಸುತ್ತಿರುವುದನ್ನು ಸೆರೆಹಿಡಿಯಲಾಗಿದೆ. ವಿಮಾನದಂತೆ ಆಕಾಶದಲ್ಲಿ ಹಾರಬೇಕೆಂಬ ತನ್ನ ಆಸೆಯನ್ನು ಇಂದು ತನ್ನ ಮಗ ಪೂರೈಸಿದ್ದಾನೆ. ಇದು ತುಂಬಾ ಹೆಮ್ಮೆಯ ಕ್ಷಣ" ಎಂದು ಡಾ. ಚೌಹಾಣ್ ತನ್ನ ಸಂತೋಷವನ್ನು ಹಂಚಿಕೊಂಡಿದ್ದಾಳೆ.ಹಾರಾಟಕ್ಕೆ ಮುನ್ನ ಬ್ರಿಗೇಡಿಯರ್ ತನ್ನ ತಾಯಿಗೆ ಸ್ಟ್ರೆಚ್‌ಗಳು ಮತ್ತು ವಾರ್ಮ್-ಅಪ್ ವ್ಯಾಯಾಮಗಳಲ್ಲಿ ಸಹಾಯ ಮಾಡುವುದನ್ನು ವಿಡಿಯೊದಲ್ಲಿ ಕಂಡುಬಂದಿದೆ.

ಡಾ. ಶ್ರದ್ಧಾ ಚೌಹಾಣ್ 10,000 ಅಡಿ ಎತ್ತರದಿಂದ ಸ್ಕೈಡೈವಿಂಗ್ ಮಾಡುವ ಮೂಲಕ ಇತಿಹಾಸ ನಿರ್ಮಿಸಿದ್ದಾಳೆ. ಸ್ಕೈಡೈವ್ ಪೂರ್ಣಗೊಳಿಸಿದ ಅತ್ಯಂತ ಹಿರಿಯ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾಳೆ.

ಈ ಸುದ್ದಿಯನ್ನೂ ಓದಿ:Viral Video: ಅಂತ್ಯಕ್ರಿಯೆಯ ವೇಳೆ ಹೆಲಿಕಾಪ್ಟರ್‌ನಿಂದ ಹಣದ ಸುರಿಮಳೆ; ಏನಿದು ವಿಚಿತ್ರ ಘಟನೆ?

ಸ್ಕೈಡೈವ್‌ ಮಾಡುವಾಗ ಪ್ರಜ್ಞೆ ತಪ್ಪಿ ಬಿದ್ದ ವ್ಯಕ್ತಿ!

ಆಸ್ಟ್ರೇಲಿಯಾ ಪರ್ತ್‍ನ 22 ವರ್ಷದ ಕ್ರಿಸ್ಟೋಫರ್ ಜೋನ್ಸ್ ಸ್ಕೈಡೈವಿಂಗ್ ತರಬೇತಿ ಪಡೆಯಲು ಡೈವ್ ಮಾಡುವಾಗ ವಿಮಾನದಿಂದ ಜಿಗಿದಿದ್ದು, ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಆತನನ್ನು ರಕ್ಷಿಸಿದ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಡೈವ್ ಮಾಡುವಾಗ ಕ್ರಿಸ್ಟೋಫರ್ 12,000 ಅಡಿ ಎತ್ತರದಿಂದ ವಿಮಾನದಿಂದ ಜಿಗಿದಿದ್ದಾನೆ. ಆಗ ಆತ ಪ್ರಜ್ಞೆ ಕಳೆದುಕೊಂಡಿದ್ದಾನೆ. ಜೋನ್ಸ್‌ಗೆ ಮೂರ್ಛೆ ರೋಗವಿದೆ ಎಂದು ವರದಿಗಳು ತಿಳಿಸಿವೆ. ಜೋನ್ಸ್‌ ಮೇಲಿನಿಂದ ಕೆಳಗೆ ಬೀಳುವಾಗ ಆತನ ತರಬೇತುದಾರ ಶೆಲ್ಡನ್ ಮ್ಯಾಕ್‍ಫರ್ಲೇನ್ ತನ್ನ ರಿಪ್ಕಾರ್ಡ್ ಎಳೆದು ಪ್ಯಾರಾಚೂಟ್ ಸಹಾಯದಿಂದ ಆತನನ್ನು ರಕ್ಷಿಸಿದ್ದಾನೆ.