ಚಹಾ ಕುಡಿಯಲು ಹೋಗಿ ವಂದೇ ಭಾರತ್ ಟ್ರೇನ್ ಮಿಸ್ ಮಾಡಿಕೊಂಡ ವ್ಯಕ್ತಿ; ಮುಂದೆ ನಡೆದಿದ್ದೇನು?
Viral Video: ವಂದೇ ಭಾರತ್ ರೈಲನ್ನು ಸಾಮಾನ್ಯ ಬಸ್ ಎಂದು ಪರಿಗಣಿಸಿದ ವ್ಯಕ್ತಿಯೊಬ್ಬರು ರೈಲು ಹತ್ತಲಾಗದೆ ಪರದಾಡಿದ ಘಟನೆಯೊಂದು ನಡೆದಿದೆ. ಕೋಲ್ಕತ್ತಾದ ಹೌರಾ ರೈಲು ನಿಲ್ದಾಣದಲ್ಲಿ ಒಬ್ಬ ವ್ಯಕ್ತಿ ಚಹಾ ಕುಡಿಯಲು ವಂದೇ ಭಾರತ್ ಸ್ಲೀಪರ್ ರೈಲಿನಿಂದ ಇಳಿದಿದ್ದು ಕ್ಷಣಾರ್ಧದಲ್ಲಿ ರೈಲಿನ ಬಾಗಿಲು ಮುಚ್ಚಿಕೊಂಡು ರೈಲು ಚಲಿಸಲು ಪ್ರಾರಂಭಿಸಿದೆ. ಇದನ್ನು ಕಂಡ ವ್ಯಕ್ತಿ ಕುಳಿತಲ್ಲಿಯೇ ತಬ್ಬಿಬ್ಬಾಗಿದ್ದಾರೆ.
ಚಹಾ ಕುಡಿಯಲು ಹೋಗಿ ಟ್ರೈನ್ ಮಿಸ್ ಮಾಡಿಕೊಂಡ ವ್ಯಕ್ತಿ -
ಕೋಲ್ಕತ್ತಾ,ಫೆ.12: ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat) ಭಾರತದ ಅತ್ಯಂತ ವೇಗದ ಹೈ-ಸ್ಪೀಡ್ ರೈಲು ಆಗಿದ್ದು ಇದು ಗಂಟೆಗೆ 160–180 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಹಾಗಾಗಿ ಹೆಚ್ಚಿನ ಪ್ರಯಾಣಿಕರು ವೇಗವಾಗಿ ತಲುಪುವ ಈ ರೈಲನ್ನು ಆಯ್ಕೆ ಮಾಡುತ್ತಾರೆ. ಅಂತೆಯೇ ಈ ವಂದೇ ಭಾರತ್ ರೈಲನ್ನು ಸಾಮಾನ್ಯ ಬಸ್ ಎಂದು ಪರಿಗಣಿಸಿದ ವ್ಯಕ್ತಿಯೊಬ್ಬರು ರೈಲು ಹತ್ತಲಾಗದೆ ಪರದಾಡಿದ ಘಟನೆಯೊಂದು ನಡೆದಿದೆ. ಕೋಲ್ಕತ್ತಾದ ಹೌರಾ ರೈಲು ನಿಲ್ದಾಣ ದಲ್ಲಿ ಒಬ್ಬ ವ್ಯಕ್ತಿ ಚಹಾ ಕುಡಿಯಲು ವಂದೇ ಭಾರತ್ ಸ್ಲೀಪರ್ ರೈಲಿನಿಂದ ಇಳಿದಿದ್ದು ಕ್ಷಣಾರ್ಧ ದಲ್ಲಿ ರೈಲಿನ ಬಾಗಿಲು ಮುಚ್ಚಿಕೊಂಡು ರೈಲು ಚಲಿಸಲು ಪ್ರಾರಂಭಿಸಿದೆ. ಇದನ್ನು ಕಂಡ ವ್ಯಕ್ತಿ ಕುಳಿತಲ್ಲಿಯೇ ತಬ್ಬಿಬ್ಬಾಗಿದ್ದಾರೆ.
ತನ್ನ ಕುಟುಂಬದೊಂದಿಗೆ ವ್ಯಕ್ತಿಯೊಬ್ಬರು ಕೋಲ್ಕತ್ತಾದಿಂದ ಅಸ್ಸಾಂಗೆ ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಪ್ರಯಾಣಿ ಸುತ್ತಿದ್ದರು. ಆದರೆ ಹೌರಾ ನಿಲ್ದಾಣದಲ್ಲಿ ರೈಲು ನಿಂತಿದೆ ಎಂದು ಚಹಾ ಕುಡಿಯಲು ಪ್ಲಾಟ್‌ಫಾರ್ಮ್‌ಗೆ ಇಳಿದಿದ್ದಾರೆ. ಆದರೆ ವಂದೇ ಭಾರತ್ ರೈಲಿನ ಸ್ವಯಂಚಾಲಿತ ಬಾಗಿಲುಗಳು ಕ್ಷಣಾರ್ಧದಲ್ಲಿ ಮುಚ್ಚಿಕೊಂಡು ರೈಲು ಹೊರಡಲು ಮುಂದಾಗಿದೆ. ಇದನ್ನು ಕಂಡು ಗಾಬರಿಯಾದ ವ್ಯಕ್ತಿ ರೈಲನ್ನು ನಿಲ್ಲಿಸುವಂತೆ ಕೈ ಸನ್ನೆ ಮಾಡಿದ್ದಾರೆ. ಆಗ, ಆರ್‌ಪಿಎಫ್ ಅಧಿಕಾರಿಯೊಬ್ಬರು ಪರಿಸ್ಥಿತಿಯನ್ನು ಗಮನಿಸಿ ಲೋಕೋ ಪೈಲಟ್‌ಗೆ ರೈಲು ನಿಲ್ಲಿಸುವಂತೆ ಸನ್ನೆ ಮಾಡುತ್ತಾರೆ.
ವಿಡಿಯೋ ನೋಡಿ:
A man got left outside while boarding the sleeper Vande Bharat as the automatic doors closed. The train started moving, but luckily the police made it stop in time.
— The Nalanda Index (@Nalanda_index) February 11, 2026
His own family was careless, and he was left behind a scary wake-up call for everyone! pic.twitter.com/2cVjxFjQy7
ರೈಲು ಅಂತಿಮವಾಗಿ ನಿಲ್ಲುತ್ತದೆ ಮತ್ತು ಆ ವ್ಯಕ್ತಿ ಮತ್ತೆ ಹತ್ತಲು ಯಶಸ್ವಿಯಾಗುತ್ತಾನೆ.. ರೈಲು ನಿಂತ ನಂತರ ವ್ಯಕ್ತಿ ರೈಲನ್ನು ಹತ್ತಿ ತನ್ನ ಕುಟುಂಬವನ್ನು ಸೇರಿಕೊಂಡಿದ್ದಾರೆ. ವೈರಲ್ ಕ್ಲಿಪ್‌ನಲ್ಲಿ, ಆ ವ್ಯಕ್ತಿ ಹೌರಾ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಒಂದು ಕಪ್ ಚಹಾ ಹಿಡಿದು ನಿಂತಿದ್ದು ಕಾಣ ಬಹುದು. ವಂದೇ ಭಾರತ್ ಸ್ಲೀಪರ್ ರೈಲು ಬಾಗಿಲು ಮುಚ್ಚಿ ಚಲಿಸಲು ಪ್ರಾರಂಭಿಸುತ್ತದೆ. ಆಗ ಅವರು ರೈಲಿಗೆ ಸಿಗ್ನಲ್ ನೀಡಲು ಪ್ರಯತ್ನಿಸುತ್ತಿದ್ದರು ಅದನ್ನು ನಿಲ್ಲಿಸಲು ವಿಫಲರಾಗುತ್ತಾರೆ. ಆಗ, ಆರ್‌ಪಿಎಫ್ ಅಧಿಕಾರಿಯೊಬ್ಬರು ಪರಿಸ್ಥಿತಿಯನ್ನು ಗಮನಿಸಿ ರೈಲು ನಿಲ್ಲಿಸುತ್ತಾರೆ.
Viral Video: ರೈಲಿನಲ್ಲೇ ಮಿನಿ ಕನ್ಸರ್ಟ್: ಅಹಮದಾಬಾದ್-ಲಖನೌ ಪ್ರಯಾಣಿಕರಿಂದ ಫುಲ್ ಮಸ್ತಿ
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಹೆಚ್ಚಿನವರು ವಂದೇ ಭಾರತ್ ರೈಲುಗಳನ್ನು ಸಾಮಾನ್ಯ ಬಸ್‌ಗಳಂತೆ ಮಾಡಬೇಡಿ. ಒಬ್ಬರಿಗಾಗಿಇಡೀ ನಿಲ್ಲಿಸುವುದು ತಪ್ಪು ಎಂದು ಅನೇಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಬಳಕೆದಾರರೊಬ್ಬರು ಎಲ್ಲಾ ಸಮಯದಲ್ಲೂ ಚಹಾ ಕುಡಿಯುವ ಗೀಳು ಏನು? ಎಂದು ಕೇಳಿದ್ದು ಮತ್ತೊಬ್ಬರು ತಮಾಷೆಯಾಗಿ, "ಬ್ರೋ ಇದು ಲೋಕಲ್ ರೈಲು ಎಂದು ಭಾವಿಸಿ, ಚಹಾ ಕುಡಿಯಲು ಬಂದಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.