ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮುದ್ದುಮುದ್ದಾಗಿ ಹಿಂದಿ ಮಾತನಾಡಿ ನೆಟ್ಟಿಗರ ಮನಗೆದ್ದ ಅಮೆರಿಕನ್ ಕಂದಮ್ಮ; ಕ್ಯೂಟ್‌ ವಿಡಿಯೊ ಇಲ್ಲಿದೆ ನೋಡಿ

ಅಮೆರಿಕದ ಪುಟ್ಟ ಮಗುವೊಂದು ಹಿಂದಿಯಲ್ಲಿ ಬಹಳ ಅದ್ಭುತವಾಗಿ ಮಾತನಾಡಿದ ಹೃದಯಸ್ಪರ್ಶಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಭಾರತದಲ್ಲಿ ವಾಸಿಸುವ ಅಮೆರಿಕನ್ ಮಹಿಳೆ ಕ್ರಿಸ್ಟನ್ ಫಿಶರ್ ಎಂಬಾಕೆ ತನ್ನ ಮಗುವಿನ ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಹಂಚಿಕೊಂಡಿದ್ದಾಳೆ. ನೆಟ್ಟಿಗರು ಮಗುವಿನ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಪಟಪಟನೆ ಹಿಂದಿ ಮಾತನಾಡಿದ ಅಮೆರಿಕನ್‌ ಬೇಬಿ!

Profile pavithra Mar 18, 2025 1:15 PM

ವಾಷಿಂಗ್ಟನ್‌: ಅಮೆರಿಕದ ಪುಟ್ಟ ಮಗುವೊಂದು ಹಿಂದಿಯಲ್ಲಿ ಬಹಳ ಅದ್ಭುತವಾಗಿ ಮಾತನಾಡಿದೆ. ಈ ಹೃದಯಸ್ಪರ್ಶಿ ವಿಡಿಯೊವನ್ನು ಆ ಮಗುವಿನ ತಾಯಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಇದು ಈಗ ನೆಟ್ಟಿಗರ ಮನಗೆದ್ದು ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಭಾರತದಲ್ಲಿ ವಾಸಿಸುವ ಅಮೆರಿಕನ್ ಮಹಿಳೆ ಕ್ರಿಸ್ಟನ್ ಫಿಶರ್ ಎಂಬಾಕೆ ತನ್ನ ಮಗುವಿನ ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ಹಂಚಿಕೊಂಡಿದ್ದಾಳೆ. ಇದರಲ್ಲಿ ಆಕೆಯ ಚಿಕ್ಕ ಮಗು ಮಾತನಾಡಲು ಹಿಂದಿ ಪದಗಳನ್ನು ಬಳಸಲು ಪ್ರಯತ್ನಿಸುತ್ತಿರುವುದು ಸೆರೆಯಾಗಿದೆ.ಮಗುವಿನ ಈ ಮಾತು ಕೇಳಿ ನೆಟ್ಟಿಗರು ಫುಲ್‌ ಖುಷ್‌ ಆಗಿದ್ದಾರೆ.

ವಿಡಿಯೊದಲ್ಲಿ, ಪುಟ್ಟ ಮಗು ಹಿಂದಿಯಲ್ಲಿ ಮಾತನಾಡುತ್ತಾ ತನ್ನ ತಾಯಿಯ ಬಳಿ ಸ್ವಲ್ಪ ನೀರು ಮತ್ತು ಜ್ಯೂಸ್ ಅನ್ನು ಕೇಳಿದ್ದಾಳೆ. ವಿಡಿಯೊ ಶುರುವಿನಲ್ಲಿ "ಮಮ್ಮಿ ಖೋಲೋ" ಎಂದು ಹೇಳಿ ಆಟಿಕೆ ಪೆಟ್ಟಿಗೆಯನ್ನು ತೆರೆಯಲು ಅವಳ ತಾಯಿಯ ಬಳಿ ಮುದ್ದಾಗಿ ವಿನಂತಿಸಿದ್ದಾಳೆ. ನಂತರ ಮುಗ್ಧ ನಗುವಿನೊಂದಿಗೆ, ಅವಳು ಹಿಂದಿಯಲ್ಲಿ "ಅಮ್ಮಾ, ಜ್ಯೂಸ್ ದೆದೋ" ಎಂದು ಕೇಳಿದ್ದಾಳೆ. ಮಗುವಿನ ಮುದ್ದು ಮುದ್ದಾದ ಮಾತು ಕೇಳಿ ನೆಟ್ಟಿಗರು ಫುಲ್‌ ಫಿದಾ ಆಗಿದ್ದಾರೆ.

ಮಗು ಮುದ್ದಾಗಿ ಮಾತನಾಡಿದ ವಿಡಿಯೊ ಇಲ್ಲಿದೆ ನೋಡಿ...

ಭಾರತದಲ್ಲಿನ ತನ್ನ ಅನುಭವಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುವ ಫಿಶರ್, ತನ್ನ ಮಗಳ ಹಿಂದಿ ಭಾಷಾ ಪ್ರೇಮದ ಕುರಿತು ಆಶ್ಚರ್ಯ ವ್ಯಕ್ತಪಡಿಸಿದ್ದಾಳೆ. ಈ ವಿಡಿಯೊ ನೋಡಿದ ನೆಟ್ಟಿಗರು ಮಗವಿನ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಹೊಸ ಸಂಸ್ಕೃತಿಯಲ್ಲಿ ಬೆರೆತಾಗ ಮಕ್ಕಳು ಭಾಷೆಗಳನ್ನು ಹೇಗೆ ಸಲೀಸಾಗಿ ಕಲಿತುಕೊಳ್ಳುತ್ತಾರೆ ಎಂಬುದನ್ನು ಅನೇಕರು ಹೊಗಳಿದ್ದಾರೆ. "ಅವಳು ಸುತ್ತಮುತ್ತಲಿನ ಪರಿಸರದಿಂದ ವೇಗವಾಗಿ ಕಲಿಯುತ್ತಿದ್ದಾಳೆ" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. "ಅದು ತುಂಬಾ ಮುದ್ದಾಗಿದೆ", ಎಂದು ಇನ್ನೊಬ್ಬರು ಹೇಳಿದ್ದಾರೆ.

ಈ ರೀಲ್ ನೆಟ್ಟಿಗರ ಹೃದಯವನ್ನು ಗೆದ್ದಿದೆ. ಹಾಗಾಗಿ ಇದು 40,000 ಕ್ಕೂ ಹೆಚ್ಚು ಲೈಕ್‍ಗಳನ್ನು ಪಡೆದಿದೆ. ಇದು ಈಗಾಗಲೇ 8.9 ಲಕ್ಷ ವ್ಯೂವ್ಸ್ ಪಡೆದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ:Viral Video: ಮಗುವನ್ನು ಛಾವಣಿಯ ಅಂಚಿನಲ್ಲಿ ಕೂರಿಸಿ ತಾಯಿಯ ರೀಲ್ಸ್‌; ಹಿಗ್ಗಾಮುಗ್ಗಾ ಜಾಡಿಸಿದ ನೆಟ್ಟಿಗರು

ಅರಳುಹುರಿದಂತೆ ಹಿಂದಿ ಮಾತನಾಡಿದ ಕಂದಮ್ಮ

ಚಿಕ್ಕ ಮಕ್ಕಳು ಈ ರೀತಿಯ ಹೊಸ ಹೊಸ ವಿಚಾರಗಳನ್ನು ಕಲಿಯುವಂತಹ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಇದೇ ಮೊದಲಲ್ಲ. ಈ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಚಿಕ್ಕ ಮಗುವೊಂದು ತಾನು ಇಂಗ್ಲಿಷ್‍ನಲ್ಲಿ ಕೇಳಿದ ಪ್ರತಿಯೊಂದು ವಿಭಿನ್ನ ಪದಗಳಿಗೆ ಪಟಪಟನೆ ಹಿಂದಿಯಲ್ಲಿ ಉತ್ತರಿಸುವ ವಿಡಿಯೊ ವೈರಲ್ ಆಗಿತ್ತು.

ವಿಡಿಯೊದಲ್ಲಿ ಮಹಿಳೆಯೊಬ್ಬಳು ಇಂಗ್ಲಿಷ್‍ನಲ್ಲಿ ಹೇಳಿದ ವಸ್ತು ಹಾಗೂ ಜೀವಿಗಳನ್ನು ಮಗು ಹಿಂದಿಯಲ್ಲಿ ಭಾಷಾಂತರಿಸಿ ಬಹಳ ವೇಗವಾಗಿ ತಪ್ಪಿಲ್ಲದೇ ಹೇಳಿದೆ. ಅವಳು ಕೋತಿ, ಕತ್ತೆ, ಹುಲಿ, ಸೇಬು, ಬಾಳೆಹಣ್ಣು, ಸೌತೆಕಾಯಿ, ದ್ರಾಕ್ಷಿ, ಪೇರಳೆ ನವಿಲು ಮುಂತಾದ ಪದಗಳನ್ನು ಒಂದೊಂದಾಗಿ ವೇಗವಾಗಿ ಇಂಗ್ಲಿಷ್‍ನಲ್ಲಿ ಹೇಳುವಾಗ ಮಗು ಎಲ್ಲಾ ಪದಗಳನ್ನು ಹಿಂದಿಯಲ್ಲಿ ಅದೇ ವೇಗದಲ್ಲಿ ಹೇಳಿದೆ. ಮಗು ವೇಗವಾಗಿ ಭಾಷಾಂತರಿಸುವುದನ್ನು ಕೇಳಿ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ. ಮತ್ತು ಚಪ್ಪಾಳೆ ತಟ್ಟುವ ಎಮೋಜಿಯನ್ನು ಹಂಚಿಕೊಳ್ಳುವ ಮೂಲಕ ಮಗುವನ್ನು ಪ್ರೋತ್ಸಾಹಿಸಿದ್ದರು. ಈ ಮುದ್ದಾದ ಮಗುವಿನ ವಿಡಿಯೊ 3 ಲಕ್ಷ 71 ಸಾವಿರಕ್ಕೂ ಹೆಚ್ಚು ಲೈಕ್‍ಗಳನ್ನು ಪಡೆದಿತ್ತು.