#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral Video: ಮಗುವನ್ನು ಛಾವಣಿಯ ಅಂಚಿನಲ್ಲಿ ಕೂರಿಸಿ ತಾಯಿಯ ರೀಲ್ಸ್‌; ಹಿಗ್ಗಾಮುಗ್ಗಾ ಜಾಡಿಸಿದ ನೆಟ್ಟಿಗರು

ಮಹಿಳೆಯೊಬ್ಬಳು ತನ್ನ ಚಿಕ್ಕ ಮಗುವನ್ನು ಒಂದು ಕೈಯಿಂದ ಹಿಡಿದುಕೊಂಡು ಮನೆಯ ಟೇರೆಸ್ ಮೇಲಿನ ಛಾವಣಿಯ ಅಂಚಿನಲ್ಲಿ ಕುಳಿತಿರುವ ವಿಡಿಯೊ ಒಂದು ವೈರಲ್(Viral News) ಆಗಿದ್ದು, ನೆಟ್ಟಿಗರು ಆಕೆಯ ವಿರುದ್ಧ ಕಿಡಿಕಾರಿದ್ದಾರೆ. ನಂತರ ಮತ್ತೊಂದು ವಿಡಿಯೊದಲ್ಲಿ ಆಕೆ ಅದಕ್ಕೆ ಸೃಷ್ಟಿಕರಣ ನೀಡಿದ್ದಾಳೆ. ಏನಿದು ವಿಷಯ...

ರೀಲ್‌ ಕ್ರೇಜ್‌ಗಾಗಿ ಹೆತ್ತ ಕಂದಮ್ಮನ ಪ್ರಾಣದ ಜತೆ ಮಹಾತಾಯಿಯ ಚೆಲ್ಲಾಟ!

reel craze viral video

Profile pavithra Feb 12, 2025 3:43 PM

ಸೋಶಿಯಲ್ ಮೀಡಿಯಾ ತೆರೆದರೆ ಈಗ ರೀಲ್ಸ್‌ಗಳದ್ದೇ ಹಾವಳಿ! ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಮಹಿಳೆಯೊಬ್ಬಳು ತನ್ನ ಚಿಕ್ಕ ಮಗುವನ್ನು ಒಂದು ಕೈಯಿಂದ ಹಿಡಿದುಕೊಂಡು ಮನೆಯ ಛಾವಣಿಯ ಅಂಚಿನಲ್ಲಿ ಕುಳಿತಿರುವ ವಿಡಿಯೊವೊಂದು ವೈರಲ್(Viral Video) ಆಗಿದೆ. ಇದಕ್ಕೆ ನೆಟ್ಟಿಗರು ಮಹಿಳೆಯನ್ನು ‘ಬೇಜವಾಬ್ದಾರಿಯುತ ತಾಯಿ’ ಎಂದು ಕಿಡಿಕಾರಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ಆಕೆ ಪ್ರತ್ಯೇಕ ವಿಡಿಯೊ ಮಾಡಿ ಈ ವಿವಾದವನ್ನು ಪರಿಹರಿಸಿದ್ದಾಳೆ. ಸದ್ಯ ವಿಡಿಯೋ ಭಾರೀ ವೈರಲ್‌ ಆಗಿದೆ. ವೈರಲ್ ವಿಡಿಯೊದಲ್ಲಿ ಮಹಿಳೆ ಮಗುವನ್ನು ಕೈಯಲ್ಲಿ ಹಿಡಿದುಕೊಂಡು ಮನೆಯ ಛಾವಣಿಯ ಅಂಚಿನಲ್ಲಿ ಕೂರಿಸಿದ್ದಾಳೆ. ಮಗು ಹೆದರದೆ ಸುಮ್ಮನೆ ಕುಳಿತಿರುವುದನ್ನು ಕಾಣಬಹುದಾಗಿದೆ.

ಈ ವಿಡಿಯೊಗೆ ಸೋಶಿಯಲ್ ಮೀಡಿಯಾದಲ್ಲಿ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಮಗುವನ್ನು ಈ ರೀತಿ ಬಿಟ್ಟಿದ್ದಕ್ಕಾಗಿ ಕೆಲವರು ಮಹಿಳೆಯನ್ನು ತರಾಟೆಗೆ ತೆಗೆದುಕೊಂಡರೆ, ಇತರರು ಅವಳು ಏನು ಮಾಡುತ್ತಿದ್ದಾಳೆಂದು ಅವಳಿಗೆ ತಿಳಿದಿದೆ ಮತ್ತು ಜನರು ಬೈಯುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ವಾದಿಸಿದ್ದಾರೆ.

"ಅವಳು ಏನು ಮಾಡುತ್ತಿದ್ದಾಳೆಂದು ಅವಳಿಗೆ ತಿಳಿದಿದೆ" ಎಂದು ನೆಟ್ಟಿಗರೊಬ್ಬರು ಬರೆದಿದ್ದಾರೆ. "ಇಂತವರು ಎಂದಿಗೂ ಪೋಷಕರಾಗಬಾರದು" ಎಂದು ಇನ್ನೊಬ್ಬರು ಹೇಳಿದ್ದಾರೆ. ಮೂರನೆಯವರು, "ಪೊಲೀಸರೇ, ದಯವಿಟ್ಟು ಮಗುವನ್ನು ನೋಡಿಕೊಳ್ಳಿ" ಎಂದು ಕಾಮೆಂಟ್ ಮಾಡಿದ್ದಾರೆ. ನಾಲ್ಕನೆಯವರು "ಇದು ಮೂರ್ಖತನದ ಉತ್ತುಂಗ." ಎಂದಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಟೀಕೆಗಳು ವ್ಯಕ್ತವಾದ ನಂತರ, ಮಹಿಳೆ ಮತ್ತೊಂದು ವಿಡಿಯೊವನ್ನು ಪೋಸ್ಟ್ ಮಾಡಿ, "ದಯವಿಟ್ಟು ಈ ವಿಡಿಯೊವನ್ನು ಸರಿಯಾಗಿ ನೋಡಿ ಮತ್ತು ಸತ್ಯಗಳನ್ನು ಅರ್ಥಮಾಡಿಕೊಳ್ಳಿ ಎಂದು ಬರೆದಿದ್ದಾಳೆ. ಈ ವಿಡಿಯೊದಲ್ಲಿ, “ವಿಡಿಯೊವನ್ನು ರೆಕಾರ್ಡ್ ಮಾಡುವಾಗ ನಾನು ನನ್ನ ಮಗುವನ್ನು ಎರಡು ಕೈಗಳಿಂದ ಹಿಡಿದಿದ್ದೇನೆ ರೆಕಾರ್ಡಿಂಗ್ ನಿಲ್ಲಿಸಿದಾಗ ಮಗುವನ್ನು ಒಂದು ಕೈಯಿಂದ ಹಿಡಿದಿರುವುದನ್ನು ಸೆರೆಹಿಡಿಯಲಾಗಿತ್ತು" ಎಂದು ತಿಳಿಸಿದ್ದಾಳೆ. ಇನ್ನು ತನ್ನನ್ನು ಟ್ರೋಲ್ ಮಾಡಿದ್ದಕ್ಕಾಗಿ ಜನರನ್ನು ತರಾಟೆಗೆ ತೆಗೆದುಕೊಂಡ ಅವಳು, "ನನ್ನ ಮಗುವನ್ನು ಹೇಗೆ ಬೆಳೆಸಬೇಕೆಂದು ನನಗೆ ಹೇಳಬೇಡಿ" ಎಂದು ಎಚ್ಚರಿಕೆ ನೀಡಿದ್ದಾಳೆ.

ಈ ಸುದ್ದಿಯನ್ನೂ ಓದಿ: Viral Video: ಕಾರಿನ ಬಾನೆಟ್‌ನಲ್ಲಿ ಬಾಲಕನನ್ನು ಕೂರಿಸಿ ರೀಲ್ಸ್... ವಿಡಿಯೊ ನೋಡಿ ಹೌಹಾರಿದ ನೆಟ್ಟಿಗರು!

ಇವತ್ತಿನ ದಿನದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಬೇಗನೆ ಖ್ಯಾತಿಗಳಿಸಲು ಹಲವು ಯುವಕ, ಯುವತಿಯರು ಪ್ರಯತ್ನಿಸುತ್ತಾರೆ. ಅದಕ್ಕಾಗಿ ಚಿತ್ರ-ವಿಚಿತ್ರವಾದ ರೀಲ್ ಮಾಡಿ, ಇತರ ಗಮನ ಸೆಳೆಯುತ್ತಿರುತ್ತಾರೆ. ಕೆಲವೊಮ್ಮೆ ಈ ರೀತಿ ಮಾಡಲು ಹೋಗಿ, ತಾವು ಮಾತ್ರವಲ್ಲದೆ, ಬೇರೆಯವರನ್ನು ತೊಂದರೆಗೆ ತಳ್ಳುತ್ತಾರೆ. ಅಂತಹದೊಂದು ಘಟನೆ ನಡೆದಿದೆ.

ಇಲ್ಲೊಬ್ಬ ಭೂಪ ಚಲಿಸುತ್ತಿರುವ ಆಲ್ಟೊ ಕಾರಿನ ಮೇಲೆ ಬಾಲಕನ್ನು ಕೂರಿಸಿ ವಿಡಿಯೋ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು, ಪೊಲೀಸರು ಕೂಡ ಈ ಚಾಲಕನ ಹಿಂದೆ ಬಿದ್ದಿದ್ದಾರೆ. ಈ ಘಟನೆ ರಾಜಸ್ಥಾನದ ಝಾಲಾವರ್‌ನ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ನಡೆದಿದ್ದು, ಕಪ್ಪು ಬಣ್ಣದ ಮಾರುತಿ ಆಲ್ಟೊ ಕಾರಿನ ಬಾನೆಟ್ ಮೇಲೆ ಬಾಲಕ ಕೂತು ರೀಲ್ಸ್ ಮಾಡಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ಮತ್ತೊಂದು ಕಾರಿನಲ್ಲಿದ್ದ ಪ್ರಯಾಣಿಕರು ಆ ದೃಶ್ಯವನ್ನು ವಿಡಿಯೊ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹರಿಬಿಟ್ಟಿದ್ದಾರೆ.