Viral News: ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ 16 ವರ್ಷದ ಬಾಲಕ
ಮುಂಬೈಯ ವ್ಯಸ್ತ ರಸ್ತೆಯಲ್ಲಿ 16 ವರ್ಷದ ಬಾಲಕ ಕಿಶೋರ್ ಸರ್ಕಾರಿ ಬಸ್ ಮೇಲೆ ದಾಳಿ ನಡೆಸಿದ್ದಾನೆ. ದಾರಿ ಮಧ್ಯೆ ಕತ್ತಿ ಹಿಡಿದು ನಿಂತಿದ್ದ ಈತ ಬಸ್ ತಡೆದು ಚಾಲಕನಿಗೆ ಬೆದರಿಕೆ ಹಾಕಿದ್ದಾನೆ. ನಂತರ ಬಸ್‌ನ ಡ್ರೈವರ್ ದ್ಯಾನೇಶ್ವರ ರಾಠೋಡ್ ಎನ್ನುವವರನ್ನು ನಿಂದಿಸಿ ಹಲ್ಲೆ ಮಾಡಿದ್ದಾನೆ. ಜತೆಗೆ ಬಸ್‌ನ ಮುಂದೆ ಹಾಗೂ ಕಿಟಕಿಗಳ ಗಾಜುಗಳನ್ನು ಒಡೆದು ಸುಮಾರು 70,000 ರೂ. ನಷ್ಟ ಉಂಟು ಮಾಡಿದ್ದಾನೆ.

Angry Teen Attacks Bus With Sword In Mumbai

ಮುಂಬೈ: 16 ವರ್ಷದ ಬಾಲಕನೊಬ್ಬ ಸರ್ಕಾರಿ ಬಸ್‌ವೊಂದನ್ನು ತಡೆದು ಚಾಲಕನ ಮೇಲೆ ಹಲ್ಲೆ ನಡೆಸಿದ ಅಘಾತಕಾರಿ ಘಟನೆಯೊಂದು ನಡೆದಿದೆ. ಮುಂಬೈನ ಭಾಂಡೂಪ್ ಪ್ರದೇಶದ ಟ್ಯಾಂಕ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಬಾಲಕನು ತನ್ನ ಮಾವನ ಜತೆ ಜಗಳ ಮಾಡಿ ಕೋಪ ಗೊಂಡಿದ್ದಾಗಿ ಈ ಉಗ್ರ ವರ್ತನೆ ತೋರಿದ್ದಾನೆ ಎಂದು ತಿಳಿದು ಬಂದಿದೆ. ಬ್ರಹನ್‌ಮುಂಬೈ ಎಲೆಕ್ಟ್ರಿಕ್ ಸಪ್ಲೈ ಆ್ಯಂಡ್ ಟ್ರಾನ್ಸ್‌ಪೋರ್ಟ್ (BEST) ಬಸ್ ಅನ್ನು ರಸ್ತೆ ಮಧ್ಯೆಯೇ ನಿಲ್ಲಿಸಿ ಕತ್ತಿ ಹಿಡಿದುಕೊಂಡು ಚಾಲಕನಿಗೆ ಹಲ್ಲೆ ಮಾಡಿದ್ದಾನೆ. ಬಸ್ ಚಾಲಕ ನೀಡಿದ ದೂರಿನ ಮೇಲೆ ಬಾಲಕನ ವಿರುದ್ಧ ಸಾರ್ವಜನಿಕ ಆಸ್ತಿ ಹಾನಿ ಕಾಯ್ದೆ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ (Viral News) ಆಗಿದೆ.
ಮುಂಬೈಯ ವ್ಯಸ್ತ ರಸ್ತೆಯಲ್ಲಿ 16 ವರ್ಷದ ಕಿಶೋರ್ ಎನ್ನುವ ಬಾಲಕ ಸರ್ಕಾರಿ ಬಸ್ ಮೇಲೆ ದಾಳಿ ನಡೆಸಿದ್ದಾನೆ. ದಾರಿ ಮಧ್ಯೆ ಕತ್ತಿ ಹಿಡಿದು ನಿಂತಿದ್ದ ಯುವಕನು ಬಸ್ ತಡೆದು ಚಾಲಕನಿಗೆ ಬೆದರಿಕೆ ಹಾಕಿದ್ದಾನೆ. ನಂತರ ಬಸ್‌ನ ಡ್ರೈವರ್ ದ್ಯಾನೇಶ್ವರ ರಾಠೋಡ್ ಎನ್ನುವವರನ್ನು ನಿಂದಿಸಿ ಹಲ್ಲೆ ಮಾಡಿದ್ದಾನೆ. ಜತೆಗೆ ಬಸ್‌ನ ಮುಂದೆ ಹಾಗೂ ಕಿಟಕಿಗಳ ಗಾಜುಗಳನ್ನು ಒಡೆದು ಸುಮಾರು 70,000 ರೂ. ನಷ್ಟ ಉಂಟು ಮಾಡಿದ್ದಾನೆ. ಸಮೀಪದಲ್ಲಿ ನಿಲ್ಲಿಸಿದ್ದ ನೀರಿನ ಟ್ಯಾಂಕರ್ ಮತ್ತು ಆಟೋದ ಗಾಜು ಕೂಡ ಹಾನಿಯಾಗಿದೆ ಎಂದು ವರದಿಯಾಗಿದೆ.
ಆರೋಪಿ ಕಿಶೋರ್‌ನನ್ನು ಪೊಲೀಸರು ಬಂಧಿಸಿ, ಬಾಲಾ ಅಪರಾಧಿಗಳ ಗೃಹಕ್ಕೆ ಕಳುಹಿಸಿದ್ದಾರೆ. ತನಿಖೆ ವೇಳೆ ಆತನ ಮಾವ ತಾನು ಕಳವು ಮಾಡಿದ್ದಾನೆಂದು ಆರೋಪಿಸಿದ್ದಕ್ಕೆ ಕೋಪಗೊಂಡು ಈ ರೀತಿ ವರ್ತಿಸಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಬಾಲಕನ ವಿರುದ್ಧ ಇದಕ್ಕೂ ಮುಂಚೆ ಹಲವಾರು ಅಪರಾಧ ಎಸಗಿದ ಬಗ್ಗೆ ಪ್ರಕರಣ ದಾಖಲಾಗಿದೆ. ಹಲ್ಲೆ ಮಾಡಿರುವುದು ಹಾಗೂ ಸಾರ್ವಜನಿಕ ಶಾಂತಿ ಕದಡಿದ್ದ ಎನ್ನಲಾಗಿದೆ.
ಇದನ್ನು ಓದಿ: Viral News: ಎಷ್ಟೇ ಬೇಡ ಅಂದ್ರು ಕೇಳದೆ ಬ್ಯೂಟಿ ಪಾರ್ಲರ್‌ಗೆ ಹೋದ ಪತ್ನಿ- ಸಿಟ್ಟಿಗೆದ್ದ ಪತಿ ಮಾಡಿದ್ದೇನು ಗೊತ್ತಾ?
ಇದೀಗ ಬಸ್ ಚಾಲಕ ನೀಡಿದ ದೂರಿನ ಮೇಲೆ ಬಾಲಕನ ವಿರುದ್ಧ ಅಪಾಯಕಾರಿ ಆಯುಧ ಬಳಸಿರುವುದು ಹಾಗೂ ಸಾರ್ವಜನಿಕ ಆಸ್ತಿ ಹಾನಿ ಕಾಯ್ದೆ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಈಗಾಗಲೇ ಬಾಲಕನನ್ನು ಬಂಧಿಸಿ ಬಾಲಾಪರಾಧಿಗಳ ರಿಮಾಂಡ್ ಹೋಮ್‌ಗೆ ಕಳುಹಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆಯನ್ನು ನಡೆಸಿ ಬಾಲಕನ ಮನೆಯವರಿಗೆ ಎಚ್ಚರಿಕೆಯನ್ನು ನೀಡಲಾಗುವುದು ಎಂದು ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಬಾಲಕನ ವರ್ತನೆಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.