ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bagepally News: ಪೋಷಕರು ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರ್ತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕು: ಮಣಿಕಂಠ ಪ್ರಿಂಟರ್ಸ್ ನ ಮಾಲೀಕರಾದ ಬಿ.ಜಿ. ಶ್ರೀನಿವಾಸ ಜಿನ್ನಿ

ಪ್ರತಿಯೊಬ್ಬ ಮಕ್ಕಳಲ್ಲಿಯೂ ಒಂದೊಂದು ರೀತಿಯ ಪ್ರತಿಭೆ ಅಡಗಿರುತ್ತದೆ. ಅದನ್ನು ಗುರ್ತಿಸಿ ಪ್ರೋತ್ಸ ಹಿಸುವ ಕೆಲಸವನ್ನು ಪೋಷಕರು ಮಾಡಬೇಕು. ಅಡಗಿರುವ ಪ್ರತಿಭೆಗಳನ್ನು ಹೊರಗೆ ತರಲು ಇಂತಹ ವೇದಿಕೆಗಳು ಬಹಳ ಅನುಕೂಲಕರವಾಗಿವೆ. ಇಂದಿನಿಂದ ಪ್ರತೀ ಭಾನುವಾರ ಚಿಣ್ಣರ ಕಲಾ ಉತ್ಸವ ಕಾರ್ಯಕ್ರಮ ನಡೆಯಲಿದೆ.

ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರ್ತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕು

-

Ashok Nayak
Ashok Nayak Dec 21, 2025 11:55 PM

ಬಾಗೇಪಲ್ಲಿ: ಪೋಷಕರು ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರ್ತಿಸಿ ಪ್ರೋತ್ಸಾಹಿಸುವ ಕೆಲಸ ಮಾಡ ಬೇಕು ಎಂದು ಯುವ ಮುಖಂಡ ಹಾಗೂ ಮಣಿಕಂಠ ಪ್ರಿಂಟರ್ಸ್ ನ ಮಾಲೀಕರಾದ ಬಿ.ಜಿ. ಶ್ರೀನಿವಾಸ ಜಿನ್ನಿ ತಿಳಿಸಿದರು.

ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಲಕ್ಷ್ಮೀ ಟಿವಿ ಕಛೇರಿಯಲ್ಲಿ ಮಣಿಕಂಠ ಪ್ರಿಂಟರ್ಸ್, ದಿ ಎಕ್ಸ್ಪರ್ಟ್ ಪಿಯು ಕಾಲೇಜ್ ಮತ್ತು ಲಕ್ಷ್ಮೀ ಟಿವಿ ಇವರ ಸಂಯುಕ್ತಾಶ್ರಯದಲ್ಲಿ ಚಿಣ್ಣರ ಕಲಾ ಉತ್ಸವ 2025-2026 ನ್ನು ಉದ್ಛಾಟಿಸಿ ಮಕ್ಕಳಿಗೆ ಬಹುಮಾನವನ್ನು ನೀಡಿ ಮಾತನಾಡಿದ ಅವರು ಮಕ್ಕಳ ಪ್ರತಿಭೆಯನ್ನು ಅರಳಿಸುವ ವೇದಿಕೆ ಚಿಣ್ಣರ ಕಲಾ ಉತ್ಸವ. ಮಕ್ಕಳು ತಮ್ಮಲ್ಲಿ ಅಡಕ ವಾಗಿರುವ ಕಲೆಯನ್ನು ಪ್ರದರ್ಶಿಸಿ ಅದರಲ್ಲಿ ಯಶಸ್ಸು ಸಾಧಿಸಿ ಪೋಷಕರಿಗೆ ಮತ್ತು ಊರಿನ ಕೀರ್ತಿಯನ್ನು ಹೆಚ್ಚಿಸಬೇಕು.

ಇದನ್ನೂ ಓದಿ: Bagepally News: ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ : ಸಂಸದ ಸುಧಾಕರ್ ಆಶಯ

ಪ್ರತಿಯೊಬ್ಬ ಮಕ್ಕಳಲ್ಲಿಯೂ ಒಂದೊಂದು ರೀತಿಯ ಪ್ರತಿಭೆ ಅಡಗಿರುತ್ತದೆ. ಅದನ್ನು ಗುರ್ತಿಸಿ ಪ್ರೋತ್ಸಹಿಸುವ ಕೆಲಸವನ್ನು ಪೋಷಕರು ಮಾಡಬೇಕು. ಅಡಗಿರುವ ಪ್ರತಿಭೆಗಳನ್ನು ಹೊರಗೆ ತರಲು ಇಂತಹ ವೇದಿಕೆಗಳು ಬಹಳ ಅನುಕೂಲಕರವಾಗಿವೆ. ಇಂದಿನಿಂದ ಪ್ರತೀ ಭಾನುವಾರ ಚಿಣ್ಣರ ಕಲಾ ಉತ್ಸವ ಕಾರ್ಯಕ್ರಮ ನಡೆಯಲಿದೆ.

ಮಕ್ಕಳು ಸೋಲು ಗೆಲುವು ಎನ್ನದೆ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ತೋರಿಸ ಬೇಕು. ನೃತ್ಯ, ಏಕಪಾತ್ರಾಭಿನಯ, ಹೇಳು, ಕೇಳು, ಭರತನಾಟ್ಯ, ಹಾಡು ಹಾಡುವುದು ಸೇರಿದಂತೆ ಯಾವುದೇ ಪ್ರತಿಭೆಯಾದರೂ ಸಹ ಪ್ರದರ್ಶಿಸಬಹುದು. ಇದರಿಂದಾಗಿ ಮಕ್ಕಳಲ್ಲಿ ವೇದಿಕೆಯ ಭಯ ಹೋಗಲಾಡಿಸಲು, ನಾಯಕತ್ವದ ಗುಣ, ಧೈರ್ಯಬೆಳೆಸಿಕೊಳ್ಳಲು ಉತ್ತಮ ಅವಕಾಶವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನ್ಯಾಷನಲ್ ಕಾಲೇಜು ನಿವೃತ್ತ ಪ್ರಾಂಶುಪಾಲರಾದ ಪ್ರೊ. ಕೆ.ಟಿ. ವೀರಾಂಜ ನೇಯ, ಲಕ್ಷ್ಮೀ ಟಿವಿ ಮಾಲೀಕರಾದ ಕ್ರೇಜಿ ರಮೇಶ್, ಮುಖಂಡರಾದ ಚಿನ್ನತಿಮ್ಮನಪಲ್ಲಿ ರಮೇಶ್, ಆನಂದರೆಡ್ಡಿ, ನಾರಾಯಣರೆಡ್ಮಿ, ಬಿ.ಎಸ್. ಸುರೇಶ್, ಚಂದ್ರಾನಾಯಕ್ ಸೇರಿದಂತೆ ಹಲವರು ಹಾಜರಿದ್ದರು.