MLA H R Gaviyappa: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ವಾಸ್ತವ ಮಾಹಿತಿ ನೀಡಿ: ಶಾಸಕ ಹೆಚ್.ಆರ್.ಗವಿಯಪ್ಪ
ಸೆ.22 ರಿಂದ ಅ.07 ರವರೆಗೆ 18 ದಿನಗಳ ಕಾಲ ನಡೆಯಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯ ಲಿದೆ. ಸರ್ಕಾರ 10 ವರ್ಷಗಳ ಹಿಂದೆ ಸಮೀಕ್ಷೆಗಳನ್ನು ನಡೆಸಲಾಗಿತ್ತು. ಆದರೆ ಈಗೀನ ಕೌಟುಂ ಬಿಕ ಸ್ಥಿತಿಗತಿಗಳು ಅರಿಯುವ ನಿಟ್ಟಿನಲ್ಲಿ ಈ ಸಮೀಕ್ಷೆ ಕಾರ್ಯ ತುಂಬಾ ಅನುಕೂಲಕರವಾಗಲಿದೆ

-

ಹೊಸಪೇಟೆ: ರಾಜ್ಯಾದ್ಯಂತ ನಡೆಯಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯದಲ್ಲಿ ಗಣತಿದಾರರಿಗೆ ಹೊಸಪೇಟೆ ನಿವಾಸಿಗಳು ತಮ್ಮ ಕೌಟುಂಬಿಕ ಸ್ಥಿತಿಗತಿಗಳ ವಾಸ್ತವ ಮಾಹಿತಿಯನ್ನು ನೀಡಬೇಕು ಎಂದು ಹೊಸಪೇಟೆ ಶಾಸಕ ಹೆಚ್.ಆರ್.ಗವಿಯಪ್ಪ(Hospet MLA H R Gaviyappa)ಹೇಳಿದರು.
ನಗರದ ಸಾಯಿಲೀಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಸಮಗ್ರ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಂದು ಕುಟುಂಬಗಳ ಸಾಮಾಜಿಕ ಸ್ಥಿತಿಗತಿಗಳು ಮತ್ತು ಶೈಕ್ಷಣಿಕ ಮಾಹಿಯನ್ನಾಧರಿಸಿ ಸಮೀಕ್ಷೆ ಕಾರ್ಯ ನಡೆಸಲಾಗುತ್ತಿದೆ. ತಂತ್ರಜ್ಞಾನದ ಬಳಕೆಯಿಂದ ಮೊಬೈಲ್ ಮೂಲಕ ಸಮೀಕ್ಷಾ ದಾರರು ಮನೆ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿರುವುದರಿಂದ ಯಾವುದೇ ರೀತಿಯ ತಪ್ಪು ಗ್ರಹಿಕೆಗಳನ್ನು ವಹಿಸದೇ ತಮ್ಮ ಅಧಾರ ಕಾರ್ಡ್, ರೇಷನ್ ಕಾರ್ಡ್ ಹಾಗೂ ಚುನಾವಣಾ ಗುರುತಿನ ಚೀಟಿಗಳನ್ನು ತೋರಿಸಿ ಗಣತಿಕಾರ್ಯದಲ್ಲಿರುವ ಎಲ್ಲಾ ಪ್ರಶ್ನೆಗಳಿಗೆ ವಾಸ್ತವ ವರದಿ ಯನ್ನು ನೀಡಬೇಕು. ಇದರಿಂದ ನಿಮ್ಮ ಕೌಟುಂಬಿಕ ಸ್ಥಿತಿಗತಿಗಳನ್ನು ಸರ್ಕಾರ ಅರಿತು ಮುಂಬರುವ ಸರ್ಕಾರದ ಯೋಜನೆಗಳಿಗೆ ನೀವು ಫಲಾನುಭವಿಗಳಾಗಲು ಸಹಕಾರಿಯಾಗಲಿದೆ ಎಂದರು.
ಇದನ್ನೂ ಓದಿ: Hospet News: ಆರೋಗ್ಯ ಸಂಪತ್ತನ್ನು ಹೊಂದುವುದಕ್ಕೆ ಆಯುರ್ವೇದ ಪ್ರಮುಖ ಪಾತ್ರ ವಹಿಸುತ್ತದೆ
ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಜೆ.ಎಂ.ಅನ್ನದಾನಸ್ವಾಮಿ ಮಾತನಾಡಿ, ಸೆ.22 ರಿಂದ ಅ.07 ರವರೆಗೆ 18 ದಿನಗಳ ಕಾಲ ನಡೆಯಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯ ಲಿದೆ. ಸರ್ಕಾರ 10 ವರ್ಷಗಳ ಹಿಂದೆ ಸಮೀಕ್ಷೆಗಳನ್ನು ನಡೆಸಲಾಗಿತ್ತು. ಆದರೆ ಈಗೀನ ಕೌಟುಂಬಿಕ ಸ್ಥಿತಿಗತಿಗಳು ಅರಿಯುವ ನಿಟ್ಟಿನಲ್ಲಿ ಈ ಸಮೀಕ್ಷೆ ಕಾರ್ಯ ತುಂಬಾ ಅನುಕೂಲಕರವಾಗಲಿದೆ.
ಪ್ರತಿಯೊಬ್ಬ ಸಮೀಕ್ಷಾದಾರರಿಗೆ ಕನಿಷ್ಟ 150 ಮನೆಗಳ ಮಾಹಿತಿ ಪಡೆಯಲು ಸೂಚನೆ ನೀಡಲಾಗಿರುತ್ತದೆ. ಸ್ಥಳೀಯ ಪ್ರಾಥಾಮಿಕ ಶಾಲಾ ಶಿಕ್ಷಕರುಗಳನ್ನು ಈ ಸಮೀಕ್ಷೆ ಕಾರ್ಯದಲ್ಲಿ ನಿಯೋಜಿಸಲಾಗಿದೆ. ಸಮೀಕ್ಷೆಯ ಪ್ರತಿಯಲ್ಲಿರುವ ಸುಮಾರು 60 ಪ್ರಶ್ನೆಗಳಿಗೆ ವೈಯಕ್ತಿಕ ಮತ್ತು ಕೌಟುಂಬಿಕ ಮಾಹಿತಿಯನ್ನು ತಂತ್ರಜ್ಞಾನ ಬಳಸಿ ಮೊಬೈಲ್ ನಲ್ಲಿ ಮಾಹಿತಿಯನ್ನು ಸಂಗ್ರಹಿಸ ಲಾಗುವುದು. ಜಿಲ್ಲಾದ್ಯಾಂತ ಅಂದಾಜು 3.30 ಲಕ್ಷ ಕುಟುಂಬಗಳಿವೆ ಎಂದು ಜೆಸ್ಕಾಂ ಆರ್.ಆರ್. ಸಂಖ್ಯೆಯನ್ನಾಧರಿಸಿ ಪ್ರತಿ ಮನೆಗಳಿಗೆ ಸ್ಟಿಕರ್ ಅಂಟಿಸಲಾಗಿದೆ. ಅವುಗಳ ಅಧಾರದ ಮೇಲೆ ಗಣತಿ ದಾರರು ಸಮೀಕ್ಷೆಗಳನ್ನು ನಡೆಸಲಿದ್ದಾರೆ. ಮನೆಯ ಯಜಮಾನ ಸೇರಿ ಕುಟುಂಬದ ಎಲ್ಲಾ ಸದಸ್ಯರ ಅಗತ್ಯ ಮಾಹಿತಿಗಳನ್ನು ಪಡೆಯಲಾಗುವುದು. ಯಾವುದೇ ರೀತಿಯ ನಿಮ್ಮ ಪ್ರಶ್ನೆಗಳಿದ್ದರೇ ಸ್ಥಳದಲ್ಲಿಯೇ ಉತ್ತರಿಸಲಿದ್ದಾರೆ ಎಂದರು.
ಈ ಕಾರ್ಯಾಗಾರದಲ್ಲಿ ಹೊಸಪೇಟೆ ಸಹಾಯಕ ಆಯುಕ್ತರಾದ ಪಿ.ವಿವೇಕಾನಂದ, ನಗರಸಭೆ ಆಯುಕ್ತ ಶಿವಕುಮಾರ್ ಯರ್ರಗುಡಿ, ತಾಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಲಂಪಾಷಾ, ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರಪ್ಪ ಹೊರಪೇಟೆ, ಹಿಂದುಳಿದ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಿ.ಶಶಿಕಲಾ ಹಾಗೂ ತಹಶೀಲ್ದಾರ ಎಂ.ಶೃತಿ ವೇದಿಕೆಯಲ್ಲಿದ್ದರು. ಕಾರ್ಯಾಗಾರದಲ್ಲಿ ಸುಮಾರು 500 ಕ್ಕೂ ಹೆಚ್ಚು ಜನ ಸ್ಥಳೀಯರು ಭಾಗವಹಿಸಿದ್ದರು.