ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮೃತ ಮರಿಯನ್ನು ಮರೆಯಲು ಸಾಧ್ಯವಾಗದೆ ಶವವನ್ನು ಬೆನ್ನ ಮೇಲೆ ಹೊತ್ತು ಈಜಿದ ತಾಯಿ ಡಾಲ್ಫಿನ್: ಭಾವುಕ ವಿಡಿಯೊ ವೈರಲ್‌

Viral Video: ತಾಯಿ ಡಾಲ್ಫಿನ್ ತನ್ನ ಮೃತ ಮರಿಯೊಂದನ್ನು ಸುಮಾರು ಆರು ದಿನಗಳವರೆಗೆ ಬೆನ್ನ ಮೇಲೆ ಹೊತ್ತುಈಜಿದೆ. ಕಂದನನ್ನು ಮರೆಯಲಾಗದೆ ತನ್ನ ಜತೆಯಲ್ಲೇ ಮೃತ ಮರಿಯನ್ನು ಹೊತ್ತೊಯ್ದಿದೆ. ಈ ಭಾವುಕ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಎಲ್ಲರ ಕಣ್ಣಂಚಲ್ಲಿ ನೀರು ತರಿಸಿದೆ.

ಮೃತ ಮರಿಯನ್ನು ಹೊತ್ತು ಈಜಿದ ತಾಯಿ ಡಾಲ್ಫಿನ್: ವಿಡಿಯೊ ನೋಡಿ

ಮೃತ ಮರಿಯನ್ನು ಬೆನ್ನ ಮೇಲೆ ಹೊತ್ತು ಈಜಿದ ತಾಯಿ ಡಾಲ್ಫಿನ್ -

Profile
Pushpa Kumari Aug 4, 2026 10:03 PM

ನವದೆಹಲಿ, ಆ. 4: ಭಾವನೆ ಅನ್ನೋದು ಕೇವಲ ಮನುಷ್ಯರಿಗಷ್ಟೇ ಅಲ್ಲ, ಪ್ರಾಣಿಗಳಿಗೂ ಪ್ರೀತಿ, ನೋವಿನ ಬೆಲೆ ಗೊತ್ತು ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ತಾಯಿ ಡಾಲ್ಫಿನ್ ಒಂದು ತನ್ನ ಮೃತ ಮರಿಯೊಂದನ್ನು ಸುಮಾರು ಆರು ದಿನಗಳವರೆಗೆ ಬೆನ್ನ ಮೇಲೆ ಹೊತ್ತು ಈಜಿದೆ. ಕಂದನನ್ನು ಮರೆಯಲಾಗದೆ ತನ್ನ ಜತೆಯಲ್ಲೇ ಮೃತ ಮರಿಯನ್ನು ಹೊತ್ತೊಯ್ದಿದೆ. ಈ ಭಾವುಕ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದ್ದು ಎಲ್ಲರ ಕಣ್ಣಂಚಲ್ಲಿ ನೀರು ತರರಿಸಿದೆ.

"ಫ್ರಾಗಲ್" ಎಂಬ ಹೆಸರಿನ ಬಾಟಲ್‌ನೋಸ್ ಡಾಲ್ಫಿನ್ ತನ್ನ ಮೃತ ಮರಿಯ ದೇಹವನ್ನು ಹೊತ್ತು ಸುಮಾರು ಆರು ದಿನಗಳ ಕಾಲ ಹಿಂದೂ ಮಹಾಸಾಗರದಲ್ಲಿ ಈಜಿದೆ.​ ಆಸ್ಟ್ರೇಲಿಯಾದ ಕರಾವಳಿ ಸಂಶೋಧನಾ ಸಂಸ್ಥೆ 'ಜಿಯೋಗ್ರಾಫ್ ಮರೀನ್ ರಿಸರ್ಚ್' ಡ್ರೋನ್ನಲ್ಲಿ ಈ ದೃಶ್ಯ ಸೆರೆಹಿಡಿದಿದೆ. ತಾಯ್ತನದ ಪ್ರೀತಿ ಅನ್ನೋದು ಕೇವಲ ಮನುಷ್ಯರಿಗೆ ಮಾತ್ರವಲ್ಲ, ಈ ಪ್ರೀತಿ, ಆಗಲಿಕೆಯ ನೋವು ಪ್ರಾಣಿಗಳಿಗೂ ಇದೆ ಎನ್ನುವುದನ್ನು ಇದು ಸಾಬೀತು ಪಡಿಸಿದೆ.

ವಿಡಿಯೊ ನೋಡಿ:



ಬಾಟಲ್‌ನೋಸ್ ಡಾಲ್ಫಿನ್ ತನ್ನ ಮರಿಯನ್ನು ದೇಹದ ಮೇಲೆ ನಿಧಾನವಾಗಿ ಸಮತೋಲನಗೊಳಿಸುತ್ತ ಈಜುವುದನ್ನು ಮುಂದುವರಿಸಿದೆ. ಮೃತಪಟ್ಟ 2 ವಾರದ ಮರಿಯನ್ನು ಸುಮಾರು 6 ದಿನಗಳ ಕಾಲ ಬೆನ್ನಿನ ಮೇಲೆ ಹೊತ್ತುಕೊಂಡು ಈಜಿದೆ. ಸಂರಕ್ಷಣಾ ತಂಡದ ಪ್ರಕಾರ, ಅದು ಈ ಹಿಂದೆ ನಾಲ್ಕು ಮರಿಗಳನ್ನು ಕಳೆದುಕೊಂಡಿತ್ತು. ಈ ತಾಯಿಗೆ, ಪ್ರಸ್ತುತ ಮೃತಪಟ್ಟ ಮರಿಯು 5ನೇ ಸಂತತಿ.

ಪೊಲೀಸ್ ಠಾಣೆಯಲ್ಲೇ ಕಾನ್ಸ್‌ಟೇಬಲ್‌ಗಳ ರೊಮ್ಯಾನ್ಸ್‌

ಮರಿ ಮೃತಪಟ್ಟರೂ ಅದನ್ನು ನೀರಿನಲ್ಲಿ ಮುಳುಗಲು ಬಿಡದೆ 6 ದಿನಗಳ ಕಾಲ ಸಮುದ್ರದಲ್ಲಿ ಸಾಗಿದೆ. ವಿಡಿಯೊದಲ್ಲಿ ಸೆರೆಹಿಡಿಯಲಾದ ಅತ್ಯಂತ ಹೃದಯಸ್ಪರ್ಶಿ ಕ್ಷಣವೆಂದರೆ ಇತರ ಡಾಲ್ಫಿನ್‌ಗಳ ನಡವಳಿಕೆ. ತಾಯಿ ಡಾಲ್ಫಿನ್‌ ಬಿಟ್ಟು ಹೋಗದ ಅವು ಹತ್ತಿರದಲ್ಲಿಯೇ ನಿಂತು ಜತೆಯಾಗಿ ಸಾಗಿವೆ.

ಈ ಭಾವನಾತ್ಮಕ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ವೀಕ್ಷಕರು ತಾಯಿಯ ಬಾಂಧವ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಒಬ್ಬರು, "ಪ್ರಾಣಿಗಳಿಗೂ ಭಾವನೆಗಳಿವೆ" ಎಂದಿದ್ದಾರೆ. ಮತ್ತೊಬ್ಬರು, ʼʼನಿಜಕ್ಕೂ ಈ ದೃಶ್ಯ ನನ್ನನ್ನು ಅಳವಮತೆ ಮಾಡಿತುʼʼ ಎಂದಿದ್ದಾರೆ.