500 ರೂ.ನೀಡಿ ಲೈಂಗಿಕ ಕ್ರಿಯೆಗೆ ಆಮಿಷ ಒಡ್ಡಿದ ಆಟೋ ಚಾಲಕ: ವಿಡಿಯೊ ಶೇರ್ ಮಾಡಿ ಆಕ್ರೋಶ ಹೊರ ಹಾಕಿದ ಯುವತಿ
Viral Video: ಮಹಿಳೆಯರಿಗೆ ಅಸುರಕ್ಷಿತ ಉಂಟು ಮಾಡುವ ಅನೇಕ ಘಟನೆಗಳು ನಡೆಯುತ್ತಿವೆ. ಪ್ರಯಾಣದಲ್ಲಿ ಕಿರುಕುಳ, ಉದ್ಯೋಗ ಸ್ಥಳದಲ್ಲಿ ದೌರ್ಜನ್ಯ ಹೀಗೆ ದಿನಕ್ಕೊಂದು ವರದಿ ಕೇಳಿ ಬರುತ್ತಲೇ ಇದೆ. ಈ ನಡುವೆ ವಿಶಾಖಪಟ್ಟಣದ ಪೆಂದುರ್ತಿ ಎಂಬಲ್ಲಿ ಆಟೋ ರಿಕ್ಷಾ ಚಾಲಕನೊಬ್ಬ ಹಗಲು ಹೊತ್ತಿನಲ್ಲೆ ಯುವತಿಯೊಬ್ಬಳಿಗೆ ಕಿರುಕುಳ ನೀಡಿದ ಘಟನೆ ನಡೆದಿದೆ. ಸಂತ್ರಸ್ತೆ ಯುವತಿ ಕೃತ್ಯವನ್ನು ರೆಕಾರ್ಡ್ ಮಾಡಿ ವಿಡಿಯೊ ಶೇರ್ ಮಾಡಿದ್ದಾಳೆ.
ಹಗಲು ಸಮಯದಲ್ಲೆ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆಟೋಚಾಲಕ -
ವಿಶಾಖಪಟ್ಟಣ,ಜು.10: ಸಾರ್ವಜನಿಕ ಸ್ಥಳದಲ್ಲೂ ಮಹಿಳೆಯರಿಗೆ ಅಸುರಕ್ಷಿತ ಭಾವನೆ ಉಂಟು ಮಾಡುವ ಅನೇಕ ಘಟನೆಗಳು ನಡೆಯುತ್ತಿವೆ. ಪ್ರಯಾಣದಲ್ಲಿ ಕಿರುಕುಳ, ಉದ್ಯೋಗ ಸ್ಥಳದಲ್ಲಿ ದೌರ್ಜನ್ಯ ಹೀಗೆ ದಿನಕ್ಕೊಂದು ವರದಿ ಕೇಳಿ ಬರುತ್ತಲೇ ಇದೆ. ಈ ನಡುವೆ ವಿಶಾಖಪಟ್ಟಣದ ಪೆಂದುರ್ತಿ ಎಂಬಲ್ಲಿ ಆಟೋ ರಿಕ್ಷಾ ಚಾಲಕನೊಬ್ಬ ಹಗಲು ಹೊತ್ತಿನಲ್ಲೆ ಯುವತಿಯೊಬ್ಬಳಿಗೆ ಕಿರುಕುಳ ನೀಡಿದ ಘಟನೆ ನಡೆದಿದೆ. ಸಂತ್ರಸ್ತೆ ಯುವತಿ ಕೃತ್ಯವನ್ನು ರೆಕಾರ್ಡ್ ಮಾಡಿ ವಿಡಿಯೊ ಶೇರ್ (Viral News) ಮಾಡಿದ್ದಾಳೆ.
ಮಧ್ಯಾಹ್ನ 2:30 ರ ಸುಮಾರಿಗೆ ಯುವತಿಯೂ ತರಕಾರಿ ಖರೀದಿಸಿ ತನ್ನ ಮನೆಗೆ ಆಟೋದಲ್ಲಿ ವಾಪಸ್ಸು ಆಗುತ್ತಿದ್ದಳು. ಈ ಸಂದರ್ಭದಲ್ಲಿ ಆಟೋ ಚಾಲಕ ಲೈಂಗಿಕ ಸಂಪರ್ಕವನ್ನು ಬೆಳೆಸಲು 500 ರೂಪಾಯಿ ನೀಡುವುದಾಗಿ ಆತ ಆಮಿಷ ಒಡ್ಡಿದ್ದಾನೆ. ಈ ಆತಂಕಕಾರಿ ಘಟನೆಯ ನಂತರ, ಅವಳು ತನ್ನ ಅನುಭವವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಆತನನ್ನು ಪತ್ತೆಹಚ್ಚಲು ಸಹಾಯ ಮಾಡುವಂತೆ ಮನವಿ ಮಾಡಿದ್ದಾಳೆ.
ವಿಡಿಯೋ ನೋಡಿ:
ಈ ಭಯದ ವಾತಾವರಣ ನಡುವೆಯೂ ಯುವತಿ ತಾಳ್ಮೆಯಿಂದ ವರ್ತಿಸಿದ್ದಾಳೆ. ಆತನೊಂದಿಗೆ ಯಾವುದೇ ರೀತಿ ಜಗಳ ಮಾಡದೇ ಮೊಬೈಲ್ ಕ್ಯಾಮೆರಾ ಆನ್ ಮಾಡಿ ಚಾಲಕನ ಮುಖ ಕೂಡ ಚಿತ್ರೀಕರಣ ಮಾಡಿದ್ದಾಳೆ.ಆಕೆಯೂ ತಾನು ಮೊದಲಿಗೆ ಮನೆಗೆ ಹೋಗಿ ಬರುವುದಾಗಿ ಹೇಳಿ ಆತನನ್ನು ಕಾಯಲು ಹೇಳಿದ್ದಳು. ಅಷ್ಟರಲ್ಲಿ ಆಟೋ ಚಾಲಕ ಪರಾರಿಯಾಗಿದ್ದ.
ಕ್ಲಿಪ್‌ನಲ್ಲಿ, ಹುಡುಗಿ ಇಡೀ ಘಟನೆಯನ್ನು ವಿವರಿಸಿದ್ದು ಮೊದಲು ತಾನು ಧರಿಸಿದ ಉಡುಪಿನ ಬಗ್ಗೆ ಮಾತನಾಡಿದ್ದಾಳೆ. ಕಪ್ಪು ಪ್ಯಾಂಟ್ ಹಾಗೂ ಲೂಸ್ ಟಿ-ಶರ್ಟ್ ಧರಿಸಿದ್ದೆ. ನಾನು ಹರಿದ ಬಟ್ಟೆ, ಶಾರ್ಟ್ಸ್ ಅಥವಾ ತೋಳಿಲ್ಲದ ಬಟ್ಟೆಗಳನ್ನು ಧರಿಸಿರಲಿಲ್ಲ. ಆದರೂ ಹಗಲು ಹೊತ್ತಿನಲ್ಲಿ ಈ ಕಿರುಕುಳ ನೀಡಲು ಇಷ್ಟೊಂದು ಧೈರ್ಯ, ಆದಾಗ್ಯೂ, ಪ್ರಯಾಣದ ಅರ್ಧದಾರಿಯಲ್ಲೇ, ಚಾಲಕ ತನ್ನೊಂದಿಗೆ ಲೈಂಗಿಕತೆಯನ್ನು ಹೊಂದಲು ಪ್ರತಿಯಾಗಿ ಹಣವನ್ನು ನೀಡಿದ್ದಾನೆ.
ದಯವಿಟ್ಟು ಅವನನ್ನು ಹಿಡಿಯಲು ನನಗೆ ಸಹಾಯ ಮಾಡಿ. ಇದರಿಂದ ನಾನು ಅವನನ್ನು ಹಿಡಿಯಬಹುದು. ನಾನು ಆತನನ್ನು ಪೊಲೀಸ್ ಠಾಣೆಗೆ ಕರೆದೊಯ್ಯುತ್ತೇನೆ ಎಂದಿದ್ದಾಳೆ.ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅನೇಕ ಬಳಕೆದಾರರು ಮಹಿಳೆಯರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಸೂಕ್ತ ಕ್ರಮ ವಹಿಸಲು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಈ ಪೋಸ್ಟ್ ವೈಜಾಗ್ ಪೊಲೀಸರ ಗಮನವನ್ನೂ ಸೆಳೆದಿದ್ದು ಯುವತಿಯ ಬಳಿ ಮಾಹಿತಿಯನ್ನು ಸಂಗ್ರಹಿಸಿದ್ದಾರೆ ಎನ್ನಲಾಗಿದೆ.