ಭಾರತದ ಕಂಪನಿಯಲ್ಲಿ ಆಕರ್ಷಕ ಪ್ಯಾಕೇಜ್ ಇದ್ದರೂ ಅಮೆರಿಕ ಬಿಟ್ಟು ಬರದ ಭಾರತೀಯ ಯುವತಿಯರು: ಕಾರಣವೇನು?
Viral Video: ಹೆಚ್ಚಿನವರು ವಿದೇಶದಲ್ಲಿ ಕೆಲಸ ಮಾಡಲು ಆಸಕ್ತಿಯನ್ನು ವಹಿಸುತ್ತಾರೆ. ಆಕರ್ಷಕ ವೇತನ ವಿಚಾರವಾಗಿ ಮಾತ್ರವಲ್ಲದೆ ಅಲ್ಲಿನ ಜೀವನ ಶೈಲಿ, ಹಾಗೂ ಕೆಲಸದ ವಾತಾವರಣ ಕೂಡ ಕೆಲವರನ್ನು ಆಕರ್ಷಣೆ ಮಾಡುತ್ತದೆ. ಇದೀಗ ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಇಬ್ಬರು ಭಾರತೀಯ ಮಹಿಳೆ ಯರು ತಮ್ಮ ಕೆಲಸದ ಆಯ್ಕೆ ವಿದೇಶದಲ್ಲಿ ಯಾಕೆ ಅನ್ನೋದನ್ನು ಅಚ್ಚರಿಯ ಕೆಲವು ಸಂಗತಿಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ..
ಭಾರತದಲ್ಲಿ ಆಫರ್ ನಿರಾಕರಿಸಿ ಯುಎಸ್‌ನಲ್ಲೇ ಬದುಕಲು ಇಚ್ಚಿಸಿದ ಯುವತಿಯರು -
ನವದೆಹಲಿ,ಜು.10: ಸಾಮಾನ್ಯವಾಗಿ ಹೆಚ್ಚಿನವರು ವಿದೇಶದಲ್ಲಿ ಕೆಲಸ ಮಾಡಲು ಆಸಕ್ತಿಯನ್ನು ವಹಿಸುತ್ತಾರೆ. ಆಕರ್ಷಕ ವೇತನ ವಿಚಾರವಾಗಿ ಮಾತ್ರವಲ್ಲದೆ ಅಲ್ಲಿನ ಜೀವನ ಶೈಲಿ, ಹಾಗೂ ಕೆಲಸದ ವಾತಾವರಣ ಕೂಡ ಕೆಲವರನ್ನು ಆಕರ್ಷಣೆ ಮಾಡುತ್ತದೆ. ಇದೀಗ ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಇಬ್ಬರು ಭಾರತೀಯ ಮಹಿಳೆಯರು ತಮ್ಮ ಕೆಲಸದ ಆಯ್ಕೆ ವಿದೇಶದಲ್ಲಿ ಯಾಕೆ ಅನ್ನೋದನ್ನು ಅಚ್ಚರಿಯ ಕೆಲವು ಸಂಗತಿಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ (Viral News) ಮಾಡಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್ ಕ್ರಿಯೇಟರ್ ಉಮಂಗ್ ಚೌಧರಿ ಎಂಬವರು ಈ ವಿಡಿಯೊ ಹಂಚಿಕೊಂಡಿದ್ದಾರೆ. ಇವರು ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ತನುಶ್ರೀ ಮತ್ತು ಶಿವಾನಿ ಎಂಬ ಇಬ್ಬರು ಭಾರತೀಯ ಮಹಿಳೆಯರನ್ನು ಪ್ರಶ್ನೆ ಮಾಡಿದ್ದು ಅಮೆರಿಕದಲ್ಲಿ $200,000 ಸಂಬಳ (ರೂ.1.91 ಕೋಟಿ) ಹಾಗೂ ಭಾರತದಲ್ಲಿ ರೂ.40 ಲಕ್ಷ ಪ್ಯಾಕೇಜ್ ಇದ್ದರೆ ಯಾವುದನ್ನು ಆಯ್ಕೆ ಮಾಡು ತ್ತೀರಿ ಎಂದು ಕೇಳಿದಾಗ ಇಬ್ಬರೂ ಅಮೆರಿಕವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.
ವಿಡಿಯೋ ನೋಡಿ:
ಈ ಇಬ್ಬರು ಮಹಿಳೆಯರು ದೆಹಲಿಯವರು ಆಗಿದ್ದು ಪ್ರಸ್ತುತ ಅಮೆರಿಕದಲ್ಲಿ ಸೇಲ್ಸ್‌ಫೋರ್ಸ್‌ನಲ್ಲಿ ಕೆಲಸ ಮಾಡುತ್ತಾರೆ. ತನುಶ್ರೀ ಹಿರಿಯಮಾರ್ಗದರ್ಶಿಯಾಗಿದ್ದರೆ, ಶಿವಾನಿ ಹಿರಿಯ ತಾಂತ್ರಿಕ ಬೆಂಬಲ ಎಂಜಿನಿಯರ್ ಆಗಿ ಕೆಲಸ ಮಾಡುತ್ತಾರೆ. ಅವರ ವಾರ್ಷಿಕ ಗಳಿಕೆ ಸುಮಾರು ರೂ.1.24 ಕೋಟಿಯಿಂದ ರೂ.1.43 ಕೋಟಿ ಎಂದು ಹಂಚಿಕೊಂಡಿದ್ದಾರೆ.
ತಾವು ಈಗಾಗಲೇ ಭಾರತದಲ್ಲಿ 40 ಲಕ್ಷದ ಆಸುಪಾಸಿನ ಪ್ಯಾಕೇಜ್ ಪಡೆಯುತ್ತಿದ್ದರೂ ಅಮೆರಿಕಾದಲ್ಲೇ ಉಳಿಯಲು ಬಯಸುತ್ತೇವೆ. ಅಮೆರಿಕದಲ್ಲಿ ಸಿಗುವ ಸ್ವಾತಂತ್ರ್ಯ ನಿಜಕ್ಕೂ ಇಷ್ಟ. ಇಲ್ಲಿನ ಜನರು ಯಾವುದಕ್ಕೆ ಕಾಮೆಂಟ್‌ಗಳನ್ನು ಮಾಡುವುದಿಲ್ಲ, ಯಾರ ಬಗ್ಗೆಯೂ ತಲೆಕೆಡಿಸಿ ಕೊಳ್ಳಬೇಕಾದ ಸಂದರ್ಭ ಇಲ್ಲಿ ಬರುವುದಿಲ್ಲ, ಆದ್ದರಿಂದ ಅದು ನಮ್ಮನ್ನು ಇಲ್ಲಿಯೇ ಇರಿಸುತ್ತದೆ. ಇಲ್ಲದಿದ್ದರೆ, ನಾನು ಖಂಡಿತವಾಗಿಯೂ ಸ್ಥಳಾಂತರ ಗೊಳ್ಳುತ್ತಿದ್ದೇವು ಎಂದು ಅವರು ಹೇಳಿದರು.
ಅಮೆರಿಕದಲ್ಲಿ ತಮ್ಮ ಆದಾಯ ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ವಿವರಿಸಿ ತೆರಿಗೆಗಳ ನಂತರ ತಮ್ಮ ಆದಾಯದ ಅರ್ಧದಷ್ಟು ಉಳಿಸುತ್ತಾರೆ. ಹಾಗೂ ಉಳಿದ ಹಣವನ್ನು ದೈನಂದಿನ ವೆಚ್ಚಗಳು ಮತ್ತು ವೈಯಕ್ತಿಕ ಅಗತ್ಯಗಳಿಗಾಗಿ ಬಳಸುತ್ತಾರೆ. "ಹಣವನ್ನು ಉಳಿಸುವುದರ ಜೊತೆಗೆ ಜೀವನವನ್ನು ಆನಂದಿಸುವುದು ಸಹ ಮುಖ್ಯ, ನೀವು ಒಮ್ಮೆ ಮಾತ್ರ ಬದುಕುತ್ತೀರಿ,ಉಳಿತಾಯ ಮಾಡುವುದರ ಜೊತೆಗೆ ನೀವು ನಿಮಗಾಗಿ ಖರ್ಚು ಮಾಡಬೇಕಾಗುತ್ತದೆ" ಎಂದು ಅವರು ಹೇಳಿದ್ದಾರೆ.
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು ಕೆಲವರು ಆದಾಯಕ್ಕಿಂತ ವೈಯಕ್ತಿಕ ಸ್ವಾತಂತ್ರ್ಯವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ ಅಂದರು. ಮತ್ತೊಬ್ಬರು "ತಮಗೆ ಬೇಕಾಗಿದ್ದನ್ನು ಆಯ್ಕೆ ಮಾಡಿಕೊಳ್ಳುವುದೇ ಜೀವನ ಇವರ ನಿರ್ಧಾರ ಸರಿಯಾಗಿದೆ"ಎಂದು ಪ್ರತಿಕ್ರಿಯೆ ನೀಡಿದ್ದಾರೆ.