'ʼಅಯೋಧ್ಯೆ ದೇಣಿಗೆ ಕಳ್ಳರಿಗೆ ಕ್ಯಾನ್ಸರ್ ಬರಲಿದೆʼ': ವಿವಾದದ ಕಿಡಿ ಹೊತ್ತಿಸಿದ ಬಿಜೆಪಿ ಶಾಸಕನ ಹೇಳಿಕೆ
ಅಯೋಧ್ಯೆ ರಾಮ ಮಂದಿರದ ದೇಣಿಗೆ ಹಣ ಕದ್ದವರಿಗೆ ಕ್ಯಾನ್ಸರ್ ಬರಲಿದೆ ಎಂದು ಬಿಜೆಪಿ ಶಾಸಕರೊಬ್ಬರು ನೀಡಿದ ಹೇಳಿಕೆ ಈಗ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಮೌರವಾನ್‌ನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಅನಿಲ್ ಸಿಂಗ್ ಈ ಹೇಳಿಕೆ ನೀಡಿದ್ದು, ಇದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಸಂಗ್ರಹ ಚಿತ್ರ -
ಉತ್ತರ ಪ್ರದೇಶ: ಅಯೋಧ್ಯೆ ರಾಮ ಮಂದಿರದ (Ayodhya Ram temple) ದೇಣಿಗೆ ಹಣ (Ayodhya donation theft) ದುರುಪಯೋಗಕ್ಕೆ ಸಂಬಂಧಿಸಿ ಮೌರವಾನ್‌ನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಅನಿಲ್ ಸಿಂಗ್ (BJP MLA Anil Singh) ನೀಡಿರುವ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. ರಾಮ ಮಂದಿರಕ್ಕೆ (Ram mandir) ಮೀಸಲಾದ ದೇಣಿಗೆಯನ್ನು ಕದ್ದವರು ಕ್ಯಾನ್ಸರ್ (cancer)ನಿಂದ ಸಾಯುತ್ತಾರೆ ಎಂದು ಹೇಳಿದ್ದು, ಇದರ ವಿಡಿಯೋ (Viral Video) ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದು ಈಗ ತೀವ್ರವಾದ ರಾಜಕೀಯ ಟೀಕೆಗೆ ಗುರಿಯಾಗಿದೆ.
ಉತ್ತರಪ್ರದೇಶದ ಉನ್ನಾವೊ ಜಿಲ್ಲೆಯ ಪೂರ್ವಾದ ಶಾಸಕ ಅನಿಲ್ ಸಿಂಗ್ ಅವರು ಮೌರವಾನ್‌ನಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಅಯೋಧ್ಯೆಯ ರಾಮ ಮಂದಿರದಲ್ಲಿ ದೇಣಿಗೆ ದುರುಪಯೋಗದಲ್ಲಿ ಭಾಗಿಯಾಗಿರುವವರು ಕ್ಯಾನ್ಸರ್ ಗೆ ತುತ್ತಾಗಿ ನೋವಿನಿಂದ ಸಾಯುತ್ತಾರೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶ ಸರ್ಕಾರವು ದೇವಾಲಯ ಟ್ರಸ್ಟ್‌ನ ಕೋರಿಕೆಯ ಮೇರೆಗೆ ದೇಣಿಗೆ ಹಣ ದುರುಪಯೋಗಕ್ಕೆ ಸಂಬಂಧಿಸಿ ಜೂನ್ 13ರಂದು ವಿಶೇಷ ತನಿಖಾ ತಂಡವನ್ನು ರಚಿಸಿದೆ. ಇದರ ತನಿಖೆ ತೀವ್ರಗೊಂಡಿರುವ ಮಧ್ಯೆಯೇ ಅನಿಲ್ ಸಿಂಗ್ ಈ ಹೇಳಿಕೆ ನೀಡಿದ್ದಾರೆ.
ವೈರಲ್ ಆಗಿರುವ ಅನಿಲ್ ಸಿಂಗ್ ವಿಡಿಯೋದಲ್ಲಿ ಅವರು ರಾಮನ ದೇವಸ್ಥಾನದಿಂದ ದೇಣಿಗೆ ಹಣ ಕದ್ದವರಿಗೆ ಕ್ಯಾನ್ಸರ್ ಬರುತ್ತದೆ. ಅದು ದೇವರಿಂದ ಅವರಿಗೆ ಮರಣದಂಡನೆಯಾಗಿದೆ. ಒಂದು ವರ್ಷ ಕಾಯಿರಿ. ಖಂಡಿತ ಅವರಿಗೆ ಕ್ಯಾನ್ಸರ್ ಬರುತ್ತದೆ ಎಂದು ಹೇಳಿರುವುದು ಸೆರೆಯಾಗಿದೆ.
"जिन्होंने मंदिर में चोरी की, उन्हें कैंसर होगा... भगवान की तरफ से मौत की सजा सुनाई जाएगी... एक साल बाद देखना, उन्हें कैंसर हो जाएगा।"
— Anamika Pal (@BindasWith) July 1, 2026
— राम मंदिर चंदा चोरी के मामले पर BJP विधायक अनिल सिंह#bjp #Anilsingh #NewShape pic.twitter.com/TNE6goUuHK
ಉತ್ತರ ಪ್ರದೇಶ ಸರ್ಕಾರವು ಅಪರಾಧಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತದೆ. ರಾಮನು ಅವರನ್ನು ನೋವಿನಿಂದ ಸಾಯುವ ರೀತಿಯಲ್ಲಿ ಶಿಕ್ಷಿಸುತ್ತಾನೆ. ಅವರ ಮುಂದಿನ ಏಳು ತಲೆಮಾರುಗಳು ದೇವಾಲಯದ ಹಣ ಕದ್ದ ಪರಿಣಾಮಗಳನ್ನು ನೆನಪಿಸಿಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
ಹಾವೇರಿಯ ಗುತ್ತಲ ವ್ಯಾಪ್ತಿಯಲ್ಲಿ ಅಕ್ರಮ ಮರಳು ಅಡ್ಡೆ ಮೇಲೆ ಅಧಿಕಾರಿಗಳ ದಾಳಿ: ಪ್ರಕರಣ ದಾಖಲು
ಅಯೋಧ್ಯೆ ರಾಮ ಮಂದಿರದ ಹಣ ದುರುಪಯೋಗಕ್ಕೆ ಸಂಬಂಧಿಸಿ ವಿರೋಧ ಪಕ್ಷಗಳು ಕೂಡ ವಾಗ್ದಾಳಿ ನಡೆಸಿವೆ. ಪ್ರಮುಖ ಅಪರಾಧಿಗಳು ಇನ್ನೂ ಮುಕ್ತರಾಗಿದ್ದಾರೆ ಎಂದು ಆರೋಪಿಸಿದೆ. ಒಟ್ಟಿನಲ್ಲಿ ರಾಮ ಮಂದಿರ ದೇಣಿಗೆ ದುರುಪಯೋಗದ ಆರೋಪವು ಉತ್ತರ ಪ್ರದೇಶದಲ್ಲಿ ರಾಜಕೀಯ ವಿವಾದವನ್ನು ಹೆಚ್ಚಿಸಿದೆ.