'ʼನಾನು ಸ್ಕೂಲ್ ಸ್ಟೂಡೆಂಟ್ ಅಲ್ಲʼ': ಸಿಕ್ ಲೀವ್‌ಗೆ ಡಾಕ್ಟರ್ ಪ್ರಿಸ್ಕ್ರಿಪ್ಷನ್ ಕೇಳಿದ ಮ್ಯಾನೇಜರ್‌ಗೆ ಜೆನ್ ಝೀ ಉದ್ಯೋಗಿಯ ಖಡಕ್ ರೆಸ್ಪಾನ್ಸ್
Viral News: ಆಫೀಸ್ ಒತ್ತಡ, ಕೆಲಸದ ಟಾರ್ಗೆಟ್, ರಜೆಯ ವಿಚಾರವಾಗಿ ನೊಂದು ಕೆಲಸ ತ್ಯಜಿಸಿದ ಅನೇಕರು ಇದ್ದಾರೆ. ಇದೀಗ ಜ್ವರ ಬಂದ ಹಿನ್ನಲೆಯಲ್ಲಿ ರಜೆ ಕೇಳಿದ ಜೆನ್ ಝೀ ಉದ್ಯೋಗಿ ಹಾಗೂ ಮ್ಯಾನೇಜರ್ ಒಬ್ಬರ ವಾಟ್ಸ್‌ಆ್ಯಪ್ ಚಾಟ್ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ರಜೆ ನೀಡಲು ಸತಾಯಿಸಿ ಡಾಕ್ಟರ್ ಪ್ರಿಸ್ಕ್ರಿಪ್ಷನ್ ಕೇಳಿದ ಮ್ಯಾನೇಜರ್‌ಗೆ ಯುವ ಉದ್ಯೋಗಿ ಖಡಕ್ ಆಗಿ ರೆಸ್ಪಾನ್ಸ್ ಮಾಡಿದ್ದಾಳೆ. ಈ ಚಾಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮ್ಯಾನೇಜರ್ ವರ್ತನೆಗೆ ಆಕ್ರೋಶ ಹೊರ ಹಾಕಿದ್ದಾರೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಜು. 1: ಇತ್ತೀಚೆಗೆ ಕಾರ್ಪೊರೇಟ್ ಉದ್ಯೋಗದಲ್ಲಿನ ಕೆಲವೊಂದು ನಿಯಮಗಳ ಬಗ್ಗೆ ಸಿಬ್ಬಂದಿ ದೂರುತ್ತಲೇ ಇರುತ್ತಾರೆ. ಆಫೀಸ್ ಒತ್ತಡ, ಕೆಲಸದ ಟಾರ್ಗೆಟ್, ರಜೆಯ ವಿಚಾರಕ್ಕೆ ನೊಂದು ಕೆಲಸ ತ್ಯಜಿಸಿದ ಅನೇಕರಿದ್ದಾರೆ. ಇದೀಗ ಜ್ವರ ಬಂದ ಹಿನ್ನಲೆಯಲ್ಲಿ ರಜೆ ಕೇಳಿದ ಜೆನ್ ಝೀ ಉದ್ಯೋಗಿ ಹಾಗೂ ಮ್ಯಾನೇಜರ್ ಒಬ್ಬರ ವಾಟ್ಸ್‌ಆ್ಯಪ್ ಚಾಟ್ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗುತ್ತಿದೆ. ರಜೆ ನೀಡಲು ಸತಾಯಿಸಿ ಡಾಕ್ಟರ್ ಪ್ರಿಸ್ಕ್ರಿಪ್ಷನ್ ಕೇಳಿದ ಮ್ಯಾನೇಜರ್‌ಗೆ ಯುವ ಉದ್ಯೋಗಿ ಖಡಕ್ ಆಗಿ ರೆಸ್ಪಾನ್ಸ್ ಮಾಡಿದ್ದಾಳೆ. ಈ ಚಾಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮ್ಯಾನೇಜರ್ ವರ್ತನೆಗೆ ಆಕ್ರೋಶ ಹೊರಹಾಕಿದ್ದಾರೆ.
ಜೆನ್ ಝೀ ಉದ್ಯೋಗಿ ಮತ್ತು ಅವರ ವ್ಯವಸ್ಥಾಪಕರ ನಡುವಿನ ವಾಟ್ಸ್‌ಆ್ಯಪ್ ಸಂಭಾಷಣೆಯ ಸ್ಕ್ರೀನ್‌ಶಾಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದು ಕೆಲಸದ ಒತ್ತಡ, ಅನಾರೋಗ್ಯ ರಜೆ ನಿಯಮಗಳ ಬಗ್ಗೆ ಚರ್ಚೆಗೆ ನಾಂದಿ ಹಾಡಿದೆ. ಜ್ವರ ಬಂದ ಹಿನ್ನೆಲೆಯಲ್ಲಿ ಜೆನ್ ಝೀ ಯುವತಿ ಮ್ಯಾನೇಜರ್ ಬಳಿ ರಜೆ ಕೇಳಿದ್ದಳು. ತಾನು ಜ್ವರದಿಂದಾಗಿ ಬರಲು ಸಾಧ್ಯವಾಗುವುದಿಲ್ಲ ಎಂದು ಸಂದೇಶ ಕಳುಹಿಸಿದ್ದಳು. ಇದಕ್ಕೆ ಮ್ಯಾನೇಜರ್ ಬಾ, ಇಬ್ಬರೂ ಸೇರಿ ಡಾಕ್ಟರ್ ಹತ್ತಿರ ಹೋಗೋಣ ಎಂದಿದ್ದ. ಇದಕ್ಕೆ ಪ್ರತಿಕ್ರಿಯೆ ನೀಡಿದ ಯುವತಿ ಅಷ್ಟೊಂದು ಗಂಭೀರವಾಗಿಲ್ಲ ಸರ್, ಸದ್ಯಕ್ಕೆ ಪ್ಯಾರಸಿಟಮಾಲ್ ತಗೊಂಡಿದ್ದೀನಿ, ವಿಶ್ರಾಂತಿ ಪಡೆದರೆ ವಾಸಿಯಾಗುತ್ತದೆ ಎಂದು ಸಂದೇಶ ಕಳುಹಿಸಿದ್ದಳು.
ವೈರಲ್ ಪೋಸ್ಟ್:
Indian managers think slaves work under them not employees
— Oxygen 💨 (@WhateverVishal) June 30, 2026
Brutal response by GenZ Employee pic.twitter.com/oCAesR7Ens
ಯಾರಾದರೂ ಅನಾರೋಗ್ಯ ರಜೆ ತೆಗೆದುಕೊಂಡರೆ ಯಾವಾಗಲೂ ವೈದ್ಯರ ಪ್ರಿಸ್ಕ್ರಿಪ್ಷನ್ ಕೇಳಲು ನಿರ್ದೇಶಕರು ಹೇಳಿದ್ದಾರೆ ಎಂದು ಮ್ಯಾನೇಜರ್ ತಿಳಿಸಿದಾಗ ಉದ್ಯೋಗಿ, ತಡಮಾಡದೆ ಖಡಕ್ ಆಗಿ ತಿರುಗೇಟು ನೀಡಿದ್ದಾಳೆ. "ನಾನೇನು ಸ್ಕೂಲ್ ಸ್ಟೂಡೆಂಟ್ ಅಲ್ಲ. ನನ್ನ ರಜೆ ಬಾಕಿ ಇದೆ. ಅದನ್ನೇ ನಾನು ಬಳಸಿಕೊಳ್ಳುತ್ತಿದ್ದೇನೆ" ಎಂದು ವಿವರಿಸಿದ್ದಾಳೆ. ʼʼಆ ಡೈರೆಕ್ಟರ್ ದೊಡ್ಡ ಡಾಕ್ಟರ್ ಆಗಿದ್ದರೆ, ನನ್ನ ಹೆಸರಿಗೆ ಅವರೇ ಒಂದು ಪ್ರಿಸ್ಕ್ರಿಪ್ಷನ್ ಬರೆದುಕೊಳ್ಳಲಿ. ನನ್ನ ಹತ್ತಿರ ಯಾವುದೇ ಡಾಕ್ಟರ್ ಚೀಟಿ ಇಲ್ಲ, ಪೋಷಕರ ಸಹಿ ಇರುವ ರಜೆ ಅರ್ಜಿಯೂ ಇಲ್ಲ. ಈಗ ನಾನು ವಿಶಾಂತ್ರಿ ಪಡೆಯುತ್ತಿದ್ದೇನೆʼʼ ಎಂದು ಖಡಕ್ ಆಗಿ ಉತ್ತರಿಸಿದ್ದಾಳೆ.
ಸ್ವಿಟ್ಜರ್‌ಲ್ಯಾಂಡ್‌ನ 7 ಲಕ್ಷ ರುಪಾಯಿ ಭಾರತದ 40 ಸಾವಿರ ರುಪಾಯಿಗೆ ಸಮ
ಈ ಪೋಸ್ಟ್ ತ್ವರಿತವಾಗಿ ವೈರಲ್ ಆಗಿದ್ದು, ಗಂಟೆಗಳಲ್ಲಿ 42,000ಕ್ಕೂ ಹೆಚ್ಚು ವೀಕ್ಷಣೆ ಗಳಿಸಿದೆ. ಅನೇಕರು ಈ ಬಗ್ಗೆ ಟೀಕೆ ವ್ಯಕ್ತ ಪಡಿಸಿದ್ದು, ಪ್ರತಿ ಸಣ್ಣ ಕಾಯಿಲೆಗೆ ವೈದ್ಯಕೀಯ ಪ್ರಮಾಣ ಪತ್ರಗಳನ್ನು ನೀಡಬೇಕೆಂದು ನಿರೀಕ್ಷಿಸಬಾರದು ಎಂದಿದ್ದಾರೆ. ನೆಟ್ಟಿಗರೊಬ್ಬರು, ʼʼಉದ್ಯೋಗಿ ತನ್ನ ಹಕ್ಕನ್ನು ಸರಿಯಾಗಿಯೇ ಉಪಯೋಗಿಸಿದ್ದಾರೆʼʼ ಎಂದು ಕಮೆಂಟ್ ಮಾಡಿದ್ದಾರೆ.