ಘೇಂಡಾಮೃಗದ ಮರಿಯನ್ನು ಎಂದಾದರೂ ನೋಡಿದ್ದೀರಾ? ವನ್ಯಜೀವಿ ಅಭಯಾರಣ್ಯದೊಳಗಿನ ಅಪರೂಪದ ವಿಡಿಯೊ ವೈರಲ್
Viral Video: ಸಾಕು ಪ್ರಾಣಿಗಳ ತುಂಟಾಟದ ದೃಶ್ಯ, ಮನುಷ್ಯ- ಪ್ರಾಣಿಗಳ ನಡುವೆ ಭಾಂದವ್ಯ ಸಾರುವ ವಿಡಿಯೊ ಹೀಗೆ ನಾನಾ ಘಟನೆಗಳು ಗಮನ ಸೆಳೆಯುತ್ತದೆ. ಇದೀಗ ವನ್ಯಜೀವಿ ಅಭಯಾರಣ್ಯವೊಂದರಲ್ಲಿ ಹುಟ್ಟಿದ ಒಂದು ದಿನದ ಖಡ್ಗ ಮೃಗದ ಮರಿಯ ವಿಡಿಯೊ ವೈರಲ್ ಆಗಿದೆ. ಅಭಯಾರಣ್ಯದೊಳಗಿನ ಅಪರೂಪದ ನೋಟದ ವಿಡಿಯೊವನ್ನು IFS ಅಧಿಕಾರಿಯೊಬ್ಬರು ಹಂಚಿಕೊಂಡಿದ್ದಾರೆ.
ಹುಟ್ಟಿದ ಒಂದೇ ದಿನದ ಪುಟ್ಟ ಖಡ್ಗಮೃಗ -
ನವದೆಹಲಿ, ಏ. 16: ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿಗಳ ಹಲವು ಮುದ್ದಾದ ವಿಡಿಯೊಗಳು ವೈರಲ್ (Viral News) ಆಗುತ್ತವೆ. ಸಾಕು ಪ್ರಾಣಿಗಳ ತುಂಟಾಟದ ದೃಶ್ಯ, ಮನುಷ್ಯ- ಪ್ರಾಣಿಗಳ ನಡುವೆ ಭಾಂದವ್ಯ ಸಾರುವ ವಿಡಿಯೊ ಹೀಗೆ ನಾನಾ ಘಟನೆಗಳು ಗಮನ ಸೆಳೆಯುತ್ತವೆ. ಇದೀಗ ವನ್ಯಜೀವಿ ಅಭಯಾರಣ್ಯವೊಂದರಲ್ಲಿ ಹುಟ್ಟಿದ ಒಂದು ದಿನದ ಖಡ್ಗ ಮೃಗದ ಮರಿಯ ವಿಡಿಯೊ ವೈರಲ್ ಆಗಿದೆ. ಅಭಯಾರಣ್ಯದೊಳಗಿನ ಅಪರೂಪದ ನೋಟದ ವೀಡಿಯೊವನ್ನು IFS ಅಧಿಕಾರಿಯೊಬ್ಬರು ಹಂಚಿಕೊಂಡಿದ್ದಾರೆ.
ನವಜಾತ ಘೇಂಡಾಮೃಗದ ಮರಿಯ ಹೃದಯಸ್ಪರ್ಶಿ ವಿಡಿಯೊ ವನ್ಯಜೀವಿ ಪ್ರಿಯರ ಗಮನ ಸೆಳೆದಿದೆ. ಭಾರತದ ರಾಷ್ಟ್ರೀಯ ಉದ್ಯಾನವನಗಳು ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ಹೇಗೆ ರಕ್ಷಣೆ ಮಾಡುತ್ತವೆ ಎಂಬುದಕ್ಕೆ ಈ ಅಪರೂಪದ ನೋಟ ಸಾಕ್ಷಿ. ಈ ದೃಶ್ಯಗಳನ್ನು ಆಕಸ್ಮಿಕವಾಗಿ ರೆಕಾರ್ಡ್ ಮಾಡಿಲ್ಲ. ಅರಣ್ಯ ಸಿಬ್ಬಂದಿ ದಿನನಿತ್ಯದ ಕರ್ತವ್ಯಗಳನ್ನು ನಿರ್ವಹಿಸುವಾಗ ದೃಶ್ಯವನ್ನು ರೆಕಾರ್ಡ್ ಮಾಡಿದ್ದಾರೆ. ತರಬೇತಿ ಪಡೆದ ಆನೆಯ ಮೇಲಿನಿಂದ ವಿಡಿಯೊವನ್ನು ಚಿತ್ರೀಕರಿಸಲಾಗಿದೆ ಮತ್ತು ಸುರಕ್ಷಿತ ದೂರದಿಂದ ಜೂಮ್ ಮಾಡಲಾಗಿದೆ. ಈ ಕ್ಯೂಟ್ ವಿಡಿಯೊ ಲಕ್ಷಾಂತರ ಲೈಕ್, ಕಮೆಂಟ್ ಪಡೆದುಕೊಂಡಿದೆ.
ವಿಡಿಯೊ ನೋಡಿ:
If you have never seen how a one day old rhino baby looks like.
— Parveen Kaswan, IFS (@ParveenKaswan) April 15, 2026
In our national park every rhino is recorded and monitored. pic.twitter.com/U26W5J8OVC
ಹುಟ್ಟಿದ ಒಂದೇ ದಿನದಲ್ಲಿ ತೆಗೆದ ಖಡ್ಗ ಮೃಗದ ಮರಿಯ ಅಪರೂಪದ ದೃಶ್ಯ ಇದಾಗಿದ್ದು ಭಾರತೀಯ ಅರಣ್ಯ ಸೇವೆ ಅಧಿಕಾರಿ ಪರ್ವೀನ್ ಕಸ್ವಾನ್ ಎಂಬವರು ಹಂಚಿಕೊಂಡಿದ್ದಾರೆ. ಅಭಯಾರಣ್ಯದಲ್ಲಿ ಜನಿಸುವ ಪ್ರತಿಯೊಂದು ಖಡ್ಗಮೃಗದ ಮೇಲೂ ಅರಣ್ಯ ಇಲಾಖೆ ಹೆಚ್ಚಿನ ನಿಗಾ ಇಟ್ಟಿರುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ವಿಡಿಯೊ ಮಾಡುತ್ತ ಮೈಮರೆತು ಚರಂಡಿಗೆ ಬಿದ್ದ ಯುವತಿ
ವನ್ಯಜೀವಿ ಮೇಲ್ವಿಚಾರಣಾ ತಂಡಗಳು ನವಜಾತ ಮರಿಗಳನ್ನು ನಿಯಮಿತವಾಗಿ ಪತ್ತೆಹಚ್ಚುತ್ತವೆ. ಜನಸಂಖ್ಯಾ ದಾಖಲೆಗಳನ್ನು ನಿರ್ವಹಿಸಲು ಮತ್ತು ವಿಶೇಷವಾಗಿ ಮರಿಗಳ ಆರೋಗ್ಯವನ್ನು ತಿಳಿಯಲು ಹೆಚ್ಚಿನ ನಿಗಾ ಇಟ್ಟಿರುತ್ತವೆ. ಈ ವಿಡಿಯೊ ತ್ವರಿತವಾಗಿ ಆನ್‌ಲೈನ್‌ನಲ್ಲಿ ಆಕರ್ಷಣೆ ಗಳಿಸಿದ್ದು ಅಪರೂಪ, ಹೃದಯಸ್ಪರ್ಶಿ ಎಂದು ಹಲವರು ಬಣ್ಣಿಸಿದ್ದಾರೆ. ಕೆಲವರು ನವಜಾತ ಖಡ್ಗಮೃಗವನ್ನು ಸಮೀಪಿಸುವುದು ಸುರಕ್ಷಿತವೇ ಎಂದು ಪ್ರಶ್ನಿಸಿದ್ದಾರೆ. ಖಡ್ಗಮೃಗ ಕರುಗಳ ಹತ್ತಿರ ಹೋಗುವುದು ಅತ್ಯಂತ ಅಪಾಯಕಾರಿ. ಇವುಗಳು ಮನುಷ್ಯನ ಮೇಲೆ ದಾಳಿ ಮಾಡಬಹುದು ಎಂದು ಕಸ್ವಾನ್ ಸ್ಪಷ್ಟಪಡಿಸಿದರು.