ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Battery Flavoured Chips: ಬ್ಯಾಟರಿಯ ಫ್ಲೇವರ್‌ನಲ್ಲಿ ಬಂದಿದೆ ಈ ಚಿಪ್ಸ್‌! ನೀವೂ ಒಮ್ಮೆ ಟ್ರೈ ಮಾಡಿ

ಎಂದಾದರೂ ನೀವು ಬ್ಯಾಟರಿಯನ್ನು ಕಚ್ಚಿ ನೋಡಿದ್ದೀರಾ, ಅದರ ರುಚಿ, ಸುವಾಸನೆ ನಿಮಗೆ ಇಷ್ಟವಾಗಿದೆಯೇ.. ? ಅರೆ.. ಏನಿದು ಬ್ಯಾಟರಿ ತಿನ್ನುವ ವಸ್ತುವೇ ಏನು ಯೋಚಿಸುತ್ತಿದ್ದೀರಾ? ಹೌದು ಎನ್ನುತ್ತೇವೆ ನಾವು. ಯಾಕೆಂದರೆ ಈಗ ಬ್ಯಾಟರಿಯ ರುಚಿ, ಸುವಾಸನೆಯೊಂದಿಗೆ ಮಾರುಕಟ್ಟೆಗೆ ಬಂದಿದೆ ವಿಶೇಷ ಚಿಪ್ಸ್. ಸದ್ಯಕ್ಕೆ ಇದು ಭಾರತದಲ್ಲಿ ಸಿಗುತ್ತಿಲ್ಲ. ಮುಂದಿನ ದಿನಗಳಲ್ಲಿ ಬಂದರೂ ಬರಬಹುದು.

ಬ್ಯಾಟರಿಯ ಫ್ಲೇವರ್‌ನಲ್ಲಿ ಬಂದಿದೆ ಈ ಚಿಪ್ಸ್‌! ನೀವೂ ಒಮ್ಮೆ ಟ್ರೈ ಮಾಡಿ

-

ಆಮ್ಸ್ಟರ್‌ಡ್ಯಾಮ್: ಸಾಮಾನ್ಯವಾಗಿ ಬ್ಯಾಟರಿಗಳು (Battery) ಎಲ್ಲರ ಬಳಿಯೂ ಇರುತ್ತದೆ. ಕೆಲವು ವಿಚಿತ್ರ ರುಚಿಯ ಅನುಭವವುಳ್ಳವರು ಈ ಬ್ಯಾಟರಿಗಳ ರುಚಿಯನ್ನೂ (Battery Flavored Chips) ನೋಡಿರುತ್ತಾರೆ. ಇದು ಕೆಲವರಿಗೆ ಇಷ್ಟವಾಗಿರಬಹುದು. ಇದೀಗ ಸ್ನ್ಯಾಕ್ ಕಂಪನಿಯೊಂದು (Snack company) ಬ್ಯಾಟರಿ ರುಚಿಯ ಕಾರ್ನ್ ಚಿಪ್ಸ್ (Battery Flavored Corn chips) ಅನ್ನು ಈ ವರ್ಷದ ಆರಂಭದಲ್ಲಿ ಮಾರುಕಟ್ಟೆಗೆ ಪರಿಚಯಿಸಿದೆ. ಸ್ನ್ಯಾಕ್ ಬ್ರ್ಯಾಂಡ್ ರಿವೈಂಡ್ (Snack brand Rewind) ಕಳೆದ ಜುಲೈ 10 ರಂದು ಬಿಡುಗಡೆ ಮಾಡಿರುವ ಹೊಸ ಕಾರ್ನ್ ಚೀಪಿಸ್ 90ರ 9 ವೋಲ್ಟ್ ನ ಬ್ಯಾಟರಿಯ ವಿದ್ಯುತ್ ಜುಮ್ಮೆನಿಸುವಿಕೆ ಅನುಭವವನ್ನು ಕೊಡುತ್ತದೆ ಎನ್ನುತ್ತಾರೆ ಇದರ ರುಚಿ ನೋಡಿದವರು. ಈ ಸುದ್ದಿ ಕೇಳಿ ಈಗ ಲಕ್ಷಾಂತರ ಜನರು ತಮ್ಮ ಬಳಿ ಇರುವ ಬ್ಯಾಟರಿ ರುಚಿ ನೋಡುತ್ತಿದ್ದಾರೆ.

ಆಲೂಗಡ್ಡೆ, ಕಾರ್ನ್, ಉಪ್ಪು, ಮೆಣಸು.. ಹೀಗೆ ಬಹುವಿಧದ ಚಿಪ್ಸ್ ಗಳು ಈಗ ಮಾರುಕಟ್ಟೆಯಲ್ಲಿವೆ. ಅದಕ್ಕೆ ಈಗ ಹೊಸ ಸೇರ್ಪಡೆಯೇ ಬ್ಯಾಟರಿ ರುಚಿಯ ಈ ಚಿಪ್ಸ್. ರಿವೈಂಡ್ ಬ್ರ್ಯಾಂಡ್ 90 ರ ದಶಕದ ಒಂದು ಅನುಭವವನ್ನು ಈ ಚಿಪ್ಸ್ ಮೂಲಕ ಎಲ್ಲರಿಗೂ ನೀಡಲು ಸಜ್ಜಾಗಿದೆ. ಅದೂ ಚಿಪ್ಸ್ ರೂಪದಲ್ಲಿ. ಇದು ನಾಲಿಗೆಗೆ ಬಲವಾದ ಆಮ್ಲೀಯ ಅನುಭವವನ್ನು ಕೊಡುತ್ತದೆ. ಉಪ್ಪು ಲೋಹ ತಿಂದಂತೆ ಭಾಸವಾಗುತ್ತದೆ. ಕಾರ್ನ್ ಚಿಪ್ಸ್ ಗೆ ಬ್ಯಾಟರಿಯಂತಹ ಸಂವೇದನೆಯನ್ನು ನೀಡಲು ಇದಕ್ಕೆ ಅಡುಗೆ ಸೋಡಾವನ್ನು ಬೆರೆಸಲಾಗಿದೆ. ಇನ್ನು ನಾಲಿಗೆ ಜುಮ್ಮೆನಿಸುವಂತೆ ಮಾಡಲು ಸಿಟ್ರಿಕ್ ಆಮ್ಲ ಮತ್ತು ಸೋಡಿಯಂ ಬೈಕಾರ್ಬನೇಟ್‌ನ ಮಿಶ್ರಣವನ್ನು ಬಳಸಲಾಗಿದೆ. ಜೊತೆಗೆ ಖನಿಜ ಲವಣಗಳನ್ನೂ ಸೇರಿಸಲಾಗಿದೆ. ಇದು ಚಿಪ್ಸ್‌ಗೆ ಲೋಹೀಯ ರುಚಿಯನ್ನು ಕೊಟ್ಟಿದೆ ಎನ್ನುತ್ತಾರೆ ಬಾಣಸಿಗ ಮ್ಯಾಟಿಯಾಸ್ ಲಾರ್ಸನ್.

ಇದು ಖಂಡಿತಾ ಎಲ್ಲರನ್ನೂ ಸೆಳೆಯುತ್ತದೆ. ಅತ್ಯಂತ ರುಚಿಕರವಾಗಿರುವುದರ ಜೊತೆಗೆ ಇದು ಕುತೂಹಲ ಉಂಟು ಮಾಡುವ ಸುವಾಸನೆಯನ್ನೂ ಹೊಂದಿದೆ ಎಂದು ಅವರು ಹೇಳಿದ್ದಾರೆ.

chips1

ಬ್ಯಾಟರಿ ರುಚಿಯ ಚಿಪ್ಸ್ ಜೊತೆಗೆ ಕಂಪೆನಿಯು ಚೀಸ್ ಮತ್ತು ಈರುಳ್ಳಿ, ಟ್ಯಾಂಗಿ ಶ್ರೀರಾಚಾ, ಕ್ರೀಮಿ ಪ್ಯಾಪ್ರಿಕಾ ಮತ್ತು ಬಿಬಿಕ್ಯೂ ಆಂಡ್ ಹನಿಯಂತಹ ಸುವಾಸನೆಗಳ ಚಿಪ್ಸ್ ಅನ್ನು ತಯಾರಿಸುತ್ತಿದೆ. ಬ್ಯಾಟರಿ ರುಚಿಯ ಹೊಸ ಚಿಪ್ಸ್ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಇದರಲ್ಲಿ ಯಾವುದೇ ರೀತಿಯ ಬ್ಯಾಟರಿ ವಸ್ತುಗಳು ಇಲ್ಲ ಎಂದು ಕಂಪೆನಿ ದೃಢ ಪಡಿಸಿದೆ.

ಇದನ್ನೂ ಓದಿ: Narendra Modi: ಮೋದಿಯನ್ನು ಬಿಗಿದಪ್ಪಿದ ಪುಟಿನ್‌; ಬೆಪ್ಪಾಗಿ ನಿಂತ ಪಾಕ್‌ ಪ್ರಧಾನಿ

ಈ ಉತ್ಪನ್ನವು ವಿಶೇಷ ಅನುಭವ ಕೊಡುವ ತಿಂಡಿಯಾಗಿದ್ದು, ಅದನ್ನು ಆನಂದಿಸಿ. ಈ ಚಿಪ್ಸ್ ಸವಿಯಲು ಯಾವುದೇ ರೀತಿಯಲ್ಲಿ ಬ್ಯಾಟರಿಗಳನ್ನು ನೆಕ್ಕುವುದು, ಕಚ್ಚುವುದು ಅಥವಾ ಸೇವಿಸುವುದನ್ನು ಕಂಪೆನಿ ಶಿಫಾರಸು ಮಾಡುವುದಿಲ್ಲ ಎಂದು ರಿವೈಂಡ್ ಸ್ಪಷ್ಟಪಡಿಸಿದೆ. ಈ ಚಿಪ್ಸ್ ಗಳು ಕೆಲವು ಡಚ್ ಚಿಲ್ಲರೆ ವ್ಯಾಪಾರಿಗಳಲ್ಲಿ ಮಾತ್ರ ಲಭ್ಯವಿದೆ. ಆಮೆರಿಕನ್ ಗ್ರಾಹಕರು ಬ್ರ್ಯಾಂಡ್‌ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇದರ ಮಾದರಿಗಳನ್ನು ಖರೀದಿಸಬಹುದು. ಇದರ ಬೆಲೆ 1.89 ಯುರೋ ಅಂದರೆ ಸರಿಸುಮಾರು 200 ರೂ.