ಜನ ಓಡಾಡುತ್ತಿದ್ದರೂ ಬೆಂಗಳೂರಿನ ಫುಟ್‌ಪಾತ್‌ನಲ್ಲಿ ಬಿಂದಾಸ್ ಆಗಿ ಸ್ಕೂಟರ್ ಓಡಿಸಿದ ಭೂಪ: ವಿಡಿಯೊ ವೈರಲ್
Viral News: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗದಲ್ಲಿ ವಾಹನ ಚಲಾಯಿಸುವ ಮೂಲಕ ಬೇಜವಾಬ್ದಾರಿಯಿಂದ ನಡೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ನಗರದ ಎನ್‌ಜಿಇಎಫ್ ಸಿಗ್ನಲ್ ಬಳಿ ದ್ವಿಚಕ್ರ ಸವಾರನೊಬ್ಬ ಫುಟ್‌ಪಾತ್ ಮೇಲೆಯೇ ಸ್ಕೂಟರ್ ಚಲಾಯಿಸಿಕೊಂಡು ಹೋಗಿರುವ ದೃಶ್ಯ ವೈರಲ್ ಆಗಿದೆ.
ಬೆಂಗಳೂರಿನಲ್ಲಿ ರಸ್ತೆ ಬಿಟ್ಟು ಫುಟ್‌ಪಾತ್‌ನಲ್ಲೇ ಸ್ಕೂಟರ್ ಚಲಾಯಿಸಿದ ವ್ಯಕ್ತಿ -
ಬೆಂಗಳೂರು, ಅ. 7: ಸಾರಿಗೆ ಇಲಾಖೆ ರಸ್ತೆ ಸುರಕ್ಷಿತ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದರೂ ಉಲ್ಲಂಘನೆ ಪ್ರಕರಣಗಳು ವರದಿಯಾಗುತ್ತವೇ ಇವೆ. ಬೇಕಾಬಿಟ್ಟಿಯಾಗಿ ವಾಹನ ಚಲಾಯಿಸುವುದು, ಹೆಲ್ಮೆಟ್ ರಹಿತ ಪ್ರಯಾಣ, ಸಿಗ್ನಲ್ ಜಂಪ್ ಹೀಗೆ ನಿಯಮಗಳನ್ನು ಗಾಳಿಗೆ ತೂರುವವರು ಅನೇಕರಿದ್ದಾರೆ. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಇರುವುದೇ ಬ್ರೇಕ್ ಮಾಡಲು ಎನ್ನುವಂತಾಗಿದೆ. ಫುಟ್ಪಾತ್‌ನಲ್ಲಿ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚಾಗಿದೆ. ನಗರದ ಎನ್‌ಜಿಇಎಫ್ ಸಿಗ್ನಲ್ ಬಳಿ ದ್ವಿಚಕ್ರ ಸವಾರನೊಬ್ಬ ಫುಟ್‌ಪಾತ್ ಮೇಲೆಯೇ ಸ್ಕೂಟರ್ ಚಲಾಯಿಸಿಕೊಂಡು ಹೋಗಿರುವ ದೃಶ್ಯ (Viral News) ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಮುಖ್ಯ ರಸ್ತೆ ಖಾಲಿಯಾಗಿದ್ದರೂ ಬೆಂಗಳೂರಿನ ವ್ಯಕ್ತಿಯೊರ್ವ ಫುಟ್‌ಪಾತ್‌ನಲ್ಲಿ ಸ್ಕೂಟಿ ಚಲಾಯಿಸಿರುವುದು ಆನ್‌ಲೈನ್‌ನಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಬಳಕೆದಾರರು ಈ ಬೇಜವಾಬ್ದಾರಿಯುತ ಚಾಲನೆ ಮತ್ತು ನಾಗರಿಕ ಪ್ರಜ್ಞೆಯ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಪಾದಚಾರಿಗಳ ಬಗ್ಗೆ ಯೋಚಿಸದೆ ಎಲ್ಲೆಂದರಲ್ಲಿ ವಾಹನ ಚಲಾಯಿಸುವ ಸವಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹ ಕೇಳಿ ಬಂದಿದೆ.
ಫುಟ್‌ಪಾತ್‌ನಲ್ಲೇ ಸ್ಕೂಟಿ ಚಲಾಯಿಸಿದ ಭೂಪ:
Why the obsession with riding on the footpath even when the road is empty? Reckless riding on footpaths is dangerous and puts pedestrians at risk. This is about civic sense, responsibility and public safety. 📍 NGEF Signal KA03KY1913 Kindly take necessary action. @blrcitytraffic
— ಸನಾತನ (सनातन) (@sanatan_kannada) October 5, 2026
ನೆಟ್ಟಿಗರೊಬ್ಬರು ಈ ವಿಡಿಯೊ ಹಂಚಿಕೊಂಡಿದ್ದು, ಮುಖ್ಯ ರಸ್ತೆ ಖಾಲಿಯಾಗಿದ್ದರೂ ವಾಹನ ಸವಾರರು ಏಕೆ ಫುಟ್‌ಪಾತ್ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಈ ಅಭ್ಯಾಸವು ಪಾದಚಾರಿಗಳಿಗೆ ಅಪಾಯಕಾರಿ ಎಂದು ವಿವರಿಸುತ್ತಾ, ಬೆಂಗಳೂರು ಸಂಚಾರ ಪೊಲೀಸರು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ರೈಲ್ವೆ ಗೇಟ್‌ನಲ್ಲೇ ಟ್ರೈನ್ ನಿಲ್ಲಿಸಿ ಹತ್ತಿದ ಕುಟುಂಬ; ಇದೇನು ನಿಮ್ಮ ಮನೆಯ ಆಸ್ತಿಯೇ? ನೆಟ್ಟಿಗರ ಪ್ರಶ್ನೆ
KA03KY1913 ನೋಂದಣಿ ಸಂಖ್ಯೆಯ ಸ್ಕೂಟರ್ ಅನ್ನು ಸವಾರ ರಸ್ತೆಯ ಬದಲು ಫುಟ್‌ಪಾತ್ ಮೇಲೆ ಯಾವುದೇ ಭಯವಿಲ್ಲದೆ ಓಡಿಸಿದ್ದಾನೆ. ಈ ಸವಾರನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರು ನಗರ ಸಂಚಾರ ಪೊಲೀಸ್ಅಧಿಕೃತ ಖಾತೆಗೆ ಟ್ಯಾಗ್ ಮಾಡಿ ಸಾರ್ವಜನಿಕರು ಆಗ್ರಹಿಸಿದ್ದಾರೆ.