ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಅಶ್ಲೀಲ ವಿಡಿಯೋಗಳನ್ನು ಮಹಿಳೆಯರಿಗೆ ಕಳುಹಿಸಿದ ಬಿಜೆಪಿ ನಾಯಕ; ಚಪ್ಪಲಿಯಲ್ಲಿ ಬಿತ್ತು ಏಟು! ವಿಡಿಯೋ ನೋಡಿ

ಉತ್ತರ ಪ್ರದೇಶದ ಬಿಜೆಪಿ ನಾಯಕನೊಬ್ಬ ಪಕ್ಷದ ಮಹಿಳಾ ಕಾರ್ಯಕರ್ತರಿಗೆ ಅಶ್ಲೀಲ ವಿಡಿಯೋಗಳನ್ನು ಕಳುಹಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಮಹಿಳೆಯರು ಆತನಿಗೆ ಚಪ್ಪಲಿಯಿಂದ ಹೊಡೆಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಆನಂದ್ ಶರ್ಮಾ ಆಗ್ರಾದ ಖಂಡೌಲಿ ಪ್ರದೇಶದ ನಿವಾಸಿ. ಅವನ ಸಂಬಂಧಿಕರೊಬ್ಬರು ಬಿಜೆಪಿಯಲ್ಲಿ ಬೂತ್ ಅಧ್ಯಕ್ಷರೂ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.

ಅಶ್ಲೀಲ ವಿಡಿಯೋಗಳನ್ನು ಮಹಿಳೆಯರಿಗೆ ಕಳುಹಿಸಿದ ಬಿಜೆಪಿ ನಾಯಕ!

Profile Vishakha Bhat Jul 15, 2025 8:43 PM

ಲಖನೌ: ಉತ್ತರ ಪ್ರದೇಶದ (Uttara Pradesh) ಬಿಜೆಪಿ ನಾಯಕನೊಬ್ಬ ಪಕ್ಷದ ಮಹಿಳಾ (Viral Video) ಕಾರ್ಯಕರ್ತರಿಗೆ ಅಶ್ಲೀಲ ವಿಡಿಯೋಗಳನ್ನು ಕಳುಹಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಮಹಿಳೆಯರು ಆತನಿಗೆ ಚಪ್ಪಲಿಯಿಂದ ಹೊಡೆಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ನಾಯಕನನ್ನು ಆನಂದ್ ಶರ್ಮಾ ಎಂದು ತಿಳಿದು ಬಂದಿದೆ. ಈತ ಮಹಿಳಾ ಕಾರ್ಯಕರ್ತರಿಗೆ ಅಶ್ಲೀಲ ವಿಡಿಯೋಗಳನ್ನು ಕಳುಹಿಸಿ ನಿರಂತವಾಗಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ಆನಂದ್ ಶರ್ಮಾ ಆಗ್ರಾದ ಖಂಡೌಲಿ ಪ್ರದೇಶದ ನಿವಾಸಿ. ಅವನ ಸಂಬಂಧಿಕರೊಬ್ಬರು ಬಿಜೆಪಿಯಲ್ಲಿ ಬೂತ್ ಅಧ್ಯಕ್ಷರೂ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಆನಂದ್ ದೀರ್ಘಕಾಲದವರೆಗೆ ವಾಟ್ಸಾಪ್‌ನಲ್ಲಿ ಅಶ್ಲೀಲ ಚಿತ್ರಗಳು ಮತ್ತು ವೀಡಿಯೊಗಳನ್ನು ಕಳುಹಿಸುತ್ತಿದ್ದನೆಂದು ಮಹಿಳೆಯರು ಹೇಳುತ್ತಾರೆ, ಇದರಿಂದಾಗಿ ಅವರು ಮಾನಸಿಕವಾಗಿ ತುಂಬಾ ತೊಂದರೆಗೀಡಾಗಿದ್ದರು. ಪಕ್ಷದ ಮಹಿಳಾ ಅಧಿಕಾರಿಯೊಬ್ಬರು ಕೂಡ ತೊಂದರೆಗೀಡಾದವರಲ್ಲಿ ಸೇರಿದ್ದಾರೆ.



ಆರೋಪಿಯನ್ನು ಆತನ ಪತ್ನಿಯ ಎದುರೇ ಥಳಿಸಲಾಗಿದೆ. ವರದಿಗಳ ಪ್ರಕಾರ, ಆನಂದ್ ತನ್ನ ಮುಖವನ್ನು ಮುಚ್ಚಿಕೊಂಡು ಅಶ್ಲೀಲ ವೀಡಿಯೊಗಳನ್ನು ಮಾಡಿ ಮಹಿಳಾ ಕಾರ್ಯಕರ್ತರಿಗೆ ಕಳುಹಿಸುತ್ತಿದ್ದ. ಮಹಿಳೆಯರು ಮನೆಯೊಳಗೆ ನುಗ್ಗಿ ಮೊದಲು ಆತನ ಕಾಲರ್‌ ಹಿಡಿದು ಹೊರಗೆಳೆದುಕೊಂಡು ಬಂದಿದ್ದಾರೆ. ನಂತರ ಆತನಿಗೆ ಚಪ್ಪಲಿಯಿಂದ ಆತನಿಗೆ ಥಳಿಸಲಾಗಿದೆ. ಕೆಲವರು ಈ ಇಡೀ ಘಟನೆಯ ವಿಡಿಯೋ ಮಾಡಿದ್ದು, ಅದು ಈಗ ಅಂತರ್ಜಾಲದಲ್ಲಿ ವೈರಲ್ ಆಗಿದೆ.

ಈ ಸುದ್ದಿಯನ್ನೂ ಓದಿ: Marathi Row: ಮರಾಠಿ ಮಾತನಾಡಲ್ಲ ಎಂದಿದ್ದಕ್ಕೆ ಕಪಾಳಕ್ಕೇ ಹೊಡೆದರು; ಎಂಎನ್‌ಎಸ್ ಬೆಂಬಲಿಗರ ಹಲ್ಲೆ ವಿಡಿಯೋ ವೈರಲ್‌

ಆನಂದ್ ಶರ್ಮಾ ಅವರನ್ನು ಥಳಿಸುತ್ತಿದ್ದಾಗ, ಅವರ ಕುಟುಂಬ ಸದಸ್ಯರು ಮಧ್ಯಪ್ರವೇಶಿಸಿ ಕೈಮುಗಿದು ಮಹಿಳೆಯರಲ್ಲಿ ಕ್ಷಮೆಯಾಚಿಸಿದರು. ಇದಾದ ನಂತರ ಅವರು ಸುಮ್ಮನಾಗಿದ್ದಾನೆ. ಪ್ರಸ್ತುತ, ಈ ವಿಷಯದಲ್ಲಿ ಪೊಲೀಸರಿಗೆ ಯಾವುದೇ ಲಿಖಿತ ದೂರು ನೀಡಲಾಗಿಲ್ಲ. ಈ ಘಟನೆಯ ವಿಡಿಯೋವನ್ನು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಉಪ್ಮಾ ಗುಪ್ತಾ ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. "ಇಂದು, ಮಹಿಳಾ ಮೋರ್ಚಾ ತನ್ನ ಸಹೋದರಿಯರಿಗೆ ಅಶ್ಲೀಲ ವೀಡಿಯೊಗಳನ್ನು ಕಳುಹಿಸುವ ಮೂಲಕ ಕಿರುಕುಳ ನೀಡುತ್ತಿದ್ದ ಆನಂದ್ ಶರ್ಮಾ ಎಂಬ ಯುವಕನನ್ನು ಥಳಿಸಿದೆ" ಎಂದು ಅವರು ಬರೆದಿದ್ದಾರೆ.