ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಇರಾನ್‍ನಲ್ಲಿ ರಕ್ತದ ಮಳೆ; ಕೆಂಪು ಬಣ್ಣಕ್ಕೆ ತಿರುಗಿದ ಸಮುದ್ರದ ನೀರು: ಕಾರಣವೇನು?

Viral Video: ಇರಾನಿನಲ್ಲಿ ಭಾರೀ ಮಳೆಯಾಗಿದ್ದು, ಕಡಲ ತೀರವು ಕೆಂಪು ಬಣ್ಣಕ್ಕೆ ತಿರುಗಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಜನರು ಇದನ್ನು 'ರಕ್ತದ ಮಳೆ' ಎಂದು ಕರೆದಿದ್ದಾರೆ. ಆದರೆ ಇದಕ್ಕೆ ನಿಜವಾದ ಕಾರಣವೇನು ಎಂಬ ಮಾಹಿತಿ ಇಲ್ಲಿದೆ.

ಇರಾನಿನಲ್ಲಿ ರಕ್ತದ ಬಣ್ಣಕ್ಕೆ ತಿರುಗಿದ ಕಡಲ ತೀರ; ಕಾರಣವೇನು?

Profile pavithra Mar 13, 2025 6:14 PM

ಟೆಹ್ರಾನ್: ಜಗತ್ತಿನಲ್ಲಿ ಹಲವಾರು ವಿಸ್ಮಯಗಳು ನಡೆಯುತ್ತಿರುತ್ತವೆ. ಇದಕ್ಕೆ ಸಂಬಂಧಪಟ್ಟ ಕೆಲವು ವಿಡಿಯೊಗಳು ಆಗಾಗ ಸೋಶಿಯಲ್ ಮಿಡಿಯಾಗಳಲ್ಲಿ ಹರಿದಾಡುತ್ತಿರುತ್ತವೆ. ಇದೀಗ ಇರಾನಿನಲ್ಲಿ ಭಾರೀ ಮಳೆಯ ಕಾರಣ ಅಲ್ಲಿನ ಕಡಲತೀರವು ಕೆಂಪು ಬಣ್ಣಕ್ಕೆ ತಿರುಗಿದ ವಿಡಿಯೊಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗಿದೆ. ಜನರು ಇದನ್ನು 'ರಕ್ತದ ಮಳೆ' ಎಂದು ಕರೆದಿದ್ದಾರೆ. ಕೆಲವು ಜನರಿಗೆ ಇದು ತಮಾಷೆಯಾಗಿ ಕಂಡರೆ, ಇತರರು ಇದನ್ನು ನೋಡಿ ಶಾಕ್‌ಗೆ ಒಳಗಾಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ಈ ಪ್ರದೇಶದಲ್ಲಿರುವ ಒಂದು ನಿರ್ದಿಷ್ಟ ರೀತಿಯ ಮಣ್ನು ಎನ್ನಲಾಗಿದೆ. ಮಣ್ಣು ಕೆಂಪು ಬಣ್ಣವಿದ್ದ ಕಾರಣ ನೀರು ಕೂಡ ಕೆಂಪು ಬಣ್ಣಕ್ಕೆ ತಿರುಗಿದೆ.

ಈ ವೈರಲ್ ವಿಡಿಯೊದಲ್ಲಿ ಭಾರೀ ಮಳೆಯಿಂದ ಕೆಂಪು ಮಣ್ಣು ಕಡಲ ತೀರಕ್ಕೆ ಹೋಗುವುದು ಸೆರೆಯಾಗಿದೆ. ಈ ಮಣ್ಣು ಸಮುದ್ರದ ನೀರಿನೊಂದಿಗೆ ಬೆರೆತಾಗ, ನೀರು ಸಹ ಕಡುಗೆಂಪು ಬಣ್ಣಕ್ಕೆ ತಿರುಗಿದೆ. ಸೆರಾಸಿಮಾ ಪ್ರವಾಸಿಗರು ಈ ಮಳೆಯನ್ನು ನೋಡಲು ಬಹಳ ಅದ್ಭುತವಾಗಿದೆ ಎಂದಿದ್ದಾರೆ.

ರಕ್ತದ ಮಳೆಯ ವಿಡಿಯೊ ಇಲ್ಲಿದೆ ನೋಡಿ



ಈ ವಿದ್ಯಮಾನಕ್ಕೆ ಮುಖ್ಯ ಕಾರಣ ಈ ಪ್ರದೇಶದಲ್ಲಿದ್ದ ಒಂದು ನಿರ್ದಿಷ್ಟ ರೀತಿಯ ಮಣ್ಣಂತೆ. ಅದು ಕೆಂಪು ಬಣ್ಣವಿದ್ದ ಕಾರಣ ನೀರು ಕೂಡ ಕೆಂಪು ಬಣ್ಣಕ್ಕೆ ತಿರುಗಿದೆ ಎಂದು ಮೂಲಗಳು ತಿಳಿಸಿ ವೆ. ಇರಾನಿನ ಟೂರಿಸಂ ಮಂಡಳಿ ಉಲ್ಲೇಖಿಸಿದ ಪ್ರಕಾರ, ಮಣ್ಣಿನಲ್ಲಿ ಕಬ್ಬಿಣದ ಆಕ್ಸೈಡ್‍ನ ಸಾಂದ್ರತೆಯ ಕಾರಣ ಹೀಗಾಗಿದೆ. ಮಣ್ಣಿನಲ್ಲಿರುವ ಖನಿಜಗಳು ಸಮುದ್ರದ ನೀರಿನೊಂದಿಗೆ ಬೆರೆತು, ಮೋಡಿ ಮಾಡುವ ಕೆಂಪು ಬಣ್ಣಕ್ಕೆ ಕಾರಣವಾಗುತ್ತದೆ ಎಂದಿದ್ದಾರೆ. ಈ ವಿದ್ಯಮಾನವು ವರ್ಷಪೂರ್ತಿ ನಡೆಯುತ್ತದೆ ಮತ್ತು ಇದು ಇರಾನ್‍ನ ಜನಪ್ರಿಯ ಪ್ರವಾಸಿ ಆಕರ್ಷಣೆಯಾಗಿದೆ. ಈ ಬೀಚ್ ಹಾರ್ಮುಜ್ ಜಲಸಂಧಿಯ 'ಕಾಮನಬಿಲ್ಲು ದ್ವೀಪ'ದಲ್ಲಿದೆ.

ಈ ಸುದ್ದಿಯನ್ನೂ ಓದಿ:Touring Spot: ಇಲ್ಲಿದೆ ಪ್ರಪಂಚದ 9 ಅತ್ಯಂತ ಸುಂದರ ಊರುಗಳು – ಇಲ್ಲಿಗೆ ಭೇಟಿ ಕೊಡುವುದೇ ಒಂದು ಅನುಪಮ ಅನುಭವ?
ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಸಾಕಷ್ಟು ಸಂಚಲನವನ್ನು ಸೃಷ್ಟಿಸಿದೆ. "ಇದು ದೇವರ ಮಹಿಮೆ. ಎಂತಹ ಸೌಂದರ್ಯ. ವಾಸ್ತವವಾಗಿ, ದೇವರು ಪ್ರಪಂಚದ ಅತ್ಯುತ್ತಮ ವರ್ಣಚಿತ್ರಕಾರ" ಎಂದು ನೆಟ್ಟಿಗರೊಬ್ಬರು ಬರೆದಿದ್ದಾರೆ.