ಮದುವೆ ಹಾಲ್‌ನಿಂದ ನೇರ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಕ್ಕೆ ಬಂದ ವಧು: ನೆಟ್ಟಿಗರಿಗೆ ಆಕೆಯ ವಯಸ್ಸಿನ ಬಗ್ಗೆ ಅನುಮಾನ
Viral Video: ಮದುವೆ ಸಂಭ್ರಮದ ನಡುವೆಯೂ ವಧು ಒಬ್ಬಳು ಪರೀಕ್ಷೆ ಬರೆಯಲು ಅದೇ ಧಿರಿಸಿನಲ್ಲಿ ಸಾಲೆಗೆ ಬಂದ ಘಟನೆ ಬಿಹಾರದ ಗಯಾ ಜಿಲ್ಲೆಯ ಶೇರ್ಘಾಟಿನಲ್ಲಿ ನಡೆದಿದೆ. ಮದುಮಗಳು ಕೆಂಪು ಬಣ್ಣದ ವಧುವಿನ ಉಡುಪನ್ನು ಧರಿಸಿ, ಮಂಟಪದಿಂದ ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಪ್ರಯಾಣ ಬೆಳೆಸಿದ್ದಾಳೆ.
ಪರೀಕ್ಷೆಗೆ ವಧುವಿನ ಆಲಂಕಾರದಲ್ಲೇ ಹಾಜರಾದ ಯುವತಿ -
ಪಾಟ್ನಾ, ಫೆ. 24: ಇತ್ತೀಚೆಗೆ ಮದುಮಗಳು ವಧುವಿನ ಅಲಂಕಾರದಲ್ಲೇ ಪರೀಕ್ಷೆ ಬರೆದ ಹಲವು ಘಟನೆಗಳು ವರದಿಯಾಗಿವೆ. ಇಂತಹ ದೃಶ್ಯಗಳು (Viral Video) ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲು ಪ್ರೇರೇಪಿಸುತ್ತವೆ. ಇದೀಗ ಮದುವೆ ಸಂಭ್ರಮದ ನಡುವೆಯೂ ಅದ್ದೂರಿ ವಿವಾಹವನ್ನೇ ನಿಲ್ಲಿಸಿ ವಧು ಪರೀಕ್ಷೆ ಬರೆಯಲು ಶಾಲೆಗೆ ಬಂದ ಘಟನೆ ಬಿಹಾರದ ಗಯಾ ಜಿಲ್ಲೆಯ ಶೇರ್ಘಾಟಿಯಲ್ಲಿ ನಡೆದಿದೆ. ಮದುಮಗಳು ತನ್ನ 10ನೇ ತರಗತಿಯ ಬೋರ್ಡ್ ಪರೀಕ್ಷೆಗೆ ಹಾಜರಾಗಿದ್ದಾಳೆ. ಕೆಂಪು ಬಣ್ಣದ ವಧುವಿನ ಉಡುಪನ್ನು ಧರಿಸಿ, ಮಂಟಪದಿಂದ ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಪ್ರಯಾಣ ಬೆಳೆಸಿದ್ದಾಳೆ.
ಪೂರ್ಣ ವಧುವಿನ ಉಡುಪನ್ನು ಧರಿಸಿ, ಮಹಿಳೆ ಹೂವಿನಿಂದ ಅಲಂಕರಿಸಲ್ಪಟ್ಟ ಕಾರಿನಿಂದ ಇಳಿದು ಪರೀಕ್ಷೆ ಕೇಂದ್ರಕ್ಕೆ ಹೋಗಿದ್ದಾಳೆ. ಈ ದೃಶ್ಯವು ವಿದ್ಯಾರ್ಥಿಗಳು ಮತ್ತು ನೋಡುಗರನ್ನು ದಿಗ್ಭ್ರಮೆಗೊಳಿಸಿದೆ. ಈ ಘಟನೆ ಶೇರ್‌ಘಾಟಿಯ ಎಸ್‌ಎಂಎಸ್‌ಜಿ ಕಾಲೇಜಿನಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ವಿಡಿಯೊ ನೋಡಿ:
ವೈರಲ್ ಆಗಿರುವ ವಿಡಿಯೊದಲ್ಲಿ, ಸಿಆರ್‌ಪಿಎಫ್ ಅಧಿಕಾರಿಯೊಬ್ಬರು ಕಾರನ್ನು ತಪಾಸಣೆ ಮಾಡಿದ್ದಾರೆ. ವರನು ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತಿರುವುದನ್ನು ಕಾಣಬಹುದು. ಹಿಂದಿನ ಸೀಟಿನಿಂದ ಕೆಂಪು ಸೀರೆ ಮತ್ತು ಆಭರಣಗಳನ್ನು ಧರಿಸಿದ್ದ ವಧು ಕೆಳಗಿಳಿದು ಪರೀಕ್ಷೆ ಬರೆಯಲು ಹೋಗಿದ್ದಾಳೆ.
ಬೆರಳಿನ ತುದಿಯಲ್ಲೇ ಉರಿದ ಗ್ಯಾಸ್ ಸ್ಟೌವ್: ಇದು ಪವಾಡವಲ್ಲ ವಿಜ್ಞಾನ!
ಈ ವಿಡಿಯೊ ನೆಟ್ಟಿಗರನ್ನು ಅಚ್ಚರಿಗೆ ದೂಡಿದೆ. "ಅಪ್ರಾಪ್ತ ಬಾಲಕಿಯ ಮದುವೆಯೇ?" ಎಂದು ಈ ಬಗ್ಗೆ ಅನೇಕರು ಪ್ರಶ್ನಿಸಿದ್ದಾರೆ. ಒಬ್ಬರು, ʼʼಪೋಷಕರಿಗೆ ಸರಿಯಾದ ಜ್ಞಾನ ಇರಬೇಕು. ಆಕೆಯ ವಯಸ್ಸು ಎಷ್ಟು? ವರ ಮತ್ತು ವಧುವಿನ ವಯಸ್ಸನ್ನು ಸರಿಯಾಗಿ ಪರಿಶೀಲನೆಯನ್ನು ಮಾಡಬೇಕುʼʼ ಎಂದು ಕಮೆಂಟ್ ಮಾಡಿದ್ದಾರೆ.
2025ರ ಏಪ್ರಿಲ್‌ನಲ್ಲಿಯೂ ಬಿಹಾರ ಇಂತಹದ್ದೇ ಘಟನೆಗೆ ಸಾಕ್ಷಿಯಾಗಿತ್ತು. ನವವಿವಾಹಿತ ಮಹಿಳೆಯೊಬ್ಬರು ತಮ್ಮ ಮದುವೆಯ ದಿನವೇ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದರು. ವಧುವಿನಂತೆ ಸಿಂಧೂರ ಮತ್ತು ಮೆಹಂದಿ ಧರಿಸಿದ್ದರೂ, ನಡೆಯುತ್ತಿರುವ ಆಚರಣೆಗಳ ಹೊರತಾಗಿಯೂ ಅವರು ಅಧ್ಯಯನಕ್ಕೆ ಆದ್ಯತೆ ನೀಡಿದ್ದರು.