ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಸ್ಕೂಟಿಯ ಮೇಲೆ ಈ ಗೂಳಿಗೆ ಇದೆಂಥಾ ಕೋಪ! ಈ ವಿಡಿಯೊ ನೋಡಿದ್ರೆ ಬೆಚ್ಚಿ ಬೀಳ್ತೀರಾ?

ಉತ್ತರಾಖಂಡದ ಋಷಿಕೇಶದಲ್ಲಿ ಸಿಟ್ಟಿಗೆದ್ದ ಗೂಳಿಯೊಂದು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಸ್ಕೂಟಿಯ ಮೇಲೆ ದಾಳಿ ಮಾಡಿ ಅದನ್ನು ದೂಡಿಕೊಂಡು ಹೋಗಿ ಕಟ್ಟಡವೊಂದಕ್ಕೆ ಗುದ್ದಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ. ಇದು ನೆಟ್ಟಿಗರಲ್ಲಿ ನಗುವನ್ನು ಮೂಡಿಸಿದೆ.

ಬೆಚ್ಚಿ ಬೀಳಿಸೋ ವಿಡಿಯೊ- ಸ್ಕೂಟಿಯ ಮೇಲೆ ಈ ಗೂಳಿಗೆ ಇದೆಂಥಾ ಕೋಪ!

Profile pavithra May 3, 2025 2:06 PM

ಡೆಹ್ರಾಡೂನ್: ಗೂಳಿ ದಾಳಿಯ ಪ್ರಕರಣ ಆಗಾಗ ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತವೆ.ಇದೀಗ ಉತ್ತರಾಖಂಡದ ಋಷಿಕೇಶದಲ್ಲಿ ಗೂಳಿಯೊಂದು ತನ್ನ ದರ್ಪವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಸ್ಕೂಟಿಯ ಮೇಲೆ ತೋರಿಸಿದೆ. ಗೂಳಿ ಸ್ಕೂಟಿಯ ಮೇಲೆ ದಾಳಿ ಮಾಡಿ ಅದನ್ನು ದೂಡಿಕೊಂಡು ಹೋಗಿ ಕಟ್ಟಡವೊಂದಕ್ಕೆ ಗುದ್ದಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಇದು ನೆಟ್ಟಿಗರಲ್ಲಿ ನಗುವನ್ನು ಮೂಡಿಸಿದ್ದು, ಗೂಳಿ "ಟೆಸ್ಟ್ ರೈಡ್" ಗಾಗಿ ಸ್ಕೂಟಿಯನ್ನು ತೆಗೆದುಕೊಂಡು ಹೋಗಿದೆ ಎಂದು ನೆಟ್ಟಿಗರು ತಮಾಷೆ ಮಾಡಿದ್ದಾರೆ.

ವೈರಲ್ ಆದ ವಿಡಿಯೊದಲ್ಲಿ ರಸ್ತೆಯಲ್ಲಿ ಸುಮ್ಮನೆ ಹೋಗುತ್ತಿದ್ದ ಗೂಳಿ ಇದ್ದಕ್ಕಿದ್ದಂತೆ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಬಿಳಿ ಬಣ್ಣದ ಸ್ಕೂಟಿಯ ಮೇಲೆ ದಾಳಿ ಮಾಡಿ ಅದನ್ನು ಸ್ವಲ್ಪ ದೂರ ದೂಡಿಕೊಂಡು ಹೋಗಿದೆ. ನಂತರ ಅಲ್ಲೇ ಇದ್ದ ಕಟ್ಟಡಕ್ಕೆ ಡಿಕ್ಕಿ ಹೊಡೆದು ಕೆಳಗೆ ಬೀಳಿಸಿದೆ.

ವಿಡಿಯೊ ಇಲ್ಲಿದೆ ನೋಡಿ...



ಈ ಇಡೀ ಘಟನೆ ಅಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರು ತಮಾಷೆಯ ಕಾಮೆಂಟ್‍ಗಳನ್ನು ಮಾಡಿದ್ದಾರೆ. "ಗೂಳಿ ಟೆಸ್ಟ್ ಡ್ರೈವ್ ಮಾಡಲು ಬಯಸಿದೆ" ಎಂದು ಒಬ್ಬ ನೆಟ್ಟಿಗರು ವ್ಯಂಗ್ಯವಾಡಿದರೆ, ಇನ್ನೊಬ್ಬರು ತಮಾಷೆಯಾಗಿ, "ಗೂಳಿ ಸ್ಕೂಟಿಯನ್ನು ಸ್ಕೇಟ್‌ಬೋರ್ಡ್‌ ಮಾಡಿದೆ." ಎಂದಿದ್ದಾರೆ. ಮತ್ತೊಬ್ಬರು, "ಸಿಸಿಟಿವಿ ಇಲ್ಲದಿದ್ದರೆ ಇದನ್ನು ವಿಮೆ ಪಾಲಿಸಿ ಕಂಪೆನಿಗೆ ಹೇಗೆ ವಿವರಿಸುವುದು?" ಎಂದು ಕೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಬಿಸಿಲಿನ ತಾಪಕ್ಕೆ ಕುಸಿದು ಬಿದ್ದ ಕುದುರೆ; ಹೃದಯ ವಿದ್ರಾವಕ ವಿಡಿಯೊ ವೈರಲ್!

ಈ ಹಿಂದೆ ಋಷಿಕೇಶದಲ್ಲಿ ಗೂಳಿ ದಾಳಿಯ ಆಘಾತಕಾರಿ ವಿಡಿಯೊವೊಂದು ವೈರಲ್ ಆಗಿತ್ತು. ವ್ಯಕ್ತಿಯೊಬ್ಬ ನದಿಯ ದಡದಲ್ಲಿ ನಿಂತ ಬೀದಿ ಗೂಳಿಯನ್ನು ರಕ್ಷಿಸಲು ಹೋಗಿದ್ದಾನೆ. ಕೊನೆಗೆ ಗೂಳಿ ಅವನನ್ನು ತಿವಿದು ನದಿಗೆ ಎಸೆದಿದೆ.ಇದನ್ನು ನೋಡಿ ನೆಟ್ಟಿಗರು ಶಾಕ್‌ ಆಗಿದ್ದಾರೆ.