ರೈಲ್ವೆ ಹಳಿಗಳ ನಡುವೆ ಸಿಲುಕಿಕೊಂಡ ಒಂಟೆ: ಪೈಲೆಟ್ ಸಮಯಪ್ರಜ್ಞೆಯಿಂದ ತಪ್ಪಿತು ದುರಂತ; ರಕ್ಷಣಾ ಕಾರ್ಯಾಚರಣೆಯ ವಿಡಿಯೊ ವೈರಲ್
Viral News: ರೈಲ್ವೆ ಸೇತುವೆ ಹಳಿಯ ನಡುವೆ ಒಂಟೆಯೊಂದು ಸಿಲುಕಿದ ಘಟನೆ ಗುಜರಾತ್‌ನಲ್ಲಿ ನಡೆದಿದೆ. ಹಳಿಯಲ್ಲಿ ಒಂಟೆ ಇರುವುದನ್ನು ಗಮನಿಸಿದ ಪೈಲಟ್ ತಕ್ಷಣ ಬ್ರೇಕ್ ಹಾಕಿ ಸಮಯ ಪ್ರಜ್ಞೆ ಮೆರೆದಿದ್ದಾರೆ. ಇದರಿಂದಾಗಿ ರೈಲ್ವೆ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಹಲವು ಎಕ್ಸ್‌ಪ್ರೆಸ್ ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡವು.
ಗುಜರಾತ್‌ನಲ್ಲಿ ರೈಲ್ವೇ ಹಳಿಗಳ ನಡುವೆ ಸಿಲುಕಿಕೊಂಡ ಒಂಟೆಯ ರಕ್ಷಣೆ -
ಗಾಂಧಿನಗರ, ಆ. 28: ರೈಲ್ವೆ ಸೇತುವೆಯ ಹಳಿಯ ನಡುವೆ ಸಿಲುಕಿಕೊಂಡು ಹೊರ ಬರಲು ಸಾಧ್ಯವಾಗದೆ ಒದ್ದಾಡುತ್ತಿದ್ದ ಒಂಟೆಯನ್ನು ರಕ್ಷಿಸಿದ ಘಟನೆ ಗುಜರಾತ್‌ನಲ್ಲಿ ನಡೆದಿದೆ. ಹಳಿಯಲ್ಲಿ ಒಂಟೆ ಇರುವುದನ್ನು ಗಮನಿಸಿದ ಪೈಲಟ್ ತಕ್ಷಣವೇ ಬ್ರೇಕ್ ಹಾಕಿ ಸಮಯ ಪ್ರಜ್ಞೆ ಮೆರೆದಿದ್ದಾರೆ. ಇದರಿಂದಾಗಿ ರೈಲ್ವೆ ಸಂಚಾರ ವ್ಯವಸ್ಥೆಯ ಅಸ್ತವ್ಯಸ್ತಗೊಂಡಿದ್ದು, ಹಲವಾರು ಎಕ್ಸ್‌ಪ್ರೆಸ್ ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡವು. ಸೇತುವೆಯ ಕಿರಿದಾದ ಜಾಗದಲ್ಲಿ ಒಂಟೆ ಸಿಲುಕಿದ್ದರಿಂದ ಕ್ರೇನ್, ಹಗ್ಗ ಹಾಗೂ ಬೆಲ್ಟ್‌ಗಳನ್ನು ಬಳಸಿ ಕೆಲವು ಗಂಟೆಗಳ ಕಾರ್ಯಚರಣೆ (Viral News) ನಂತರ ಒಂಟೆಯನ್ನು ರಕ್ಷಿಸಲಾಯಿತು.
ಗುಜರಾತ್‌ನ ವಂಝಾಲಿಯಾ-ರಾಣವಾವ್ ವಿಭಾಗದಲ್ಲಿ ಬ್ರಾಡ್-ಗೇಜ್ ರೈಲ್ವೆ ಸೇತುವೆಯ ಬಳಿ ಈ ಘಟನೆ ನಡೆದಿದೆ. ಈ ದೃಶ್ಯವು ಗಂಭೀರ ಅಪಘಾತಕ್ಕೆ ಕಾರಣವಾಗಬಹುದಿತ್ತು. ಆದರೆ ದಾದರ್-ಪೋರ್ಬಂದರ್ ಸೌರಾಷ್ಟ್ರ ಎಕ್ಸ್‌ಪ್ರೆಸ್‌ನ ಪೈಲಟ್‌ನ ತ್ವರಿತ ಕ್ರಮವು ಎದುರಾಗಬಹುದಾಗಿದ್ದ ದೊಡ್ಡ ಅಪಾಯವನ್ನು ತಪ್ಪಿಸಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ:
🚨CAMEL RESCUED BY JCB | Train was halted in Gujarat's Porbandar district after a camel got trapped on the railway track near Vanzjaliya–Ranavav, later rescued by JCB pic.twitter.com/6qQwQ5r9Og
— The Tatva (@thetatvaindia) August 27, 2026
ಪೋರ್‌ಬಂದರ್ ಜಿಲ್ಲೆಯ ವಾಂಝಲಿಯಾ-ರಾಣಾವಾವ್ ಭಾಗದ ಸೇತುವೆ ಸಂಖ್ಯೆ 95ರಲ್ಲಿ ಆಗಸ್ಟ್ 27ರ ಮುಂಜಾನೆ ಸುಮಾರು 4:45ಕ್ಕೆ ಈ ಘಟನೆ ನಡೆದಿದೆ. ರೈಲು ಸೇತುವೆಯ ಮೇಲೆ ಚಲಿಸುತ್ತಿದ್ದಾಗ ಹಳಿಯ ನಡುವೆ ಒಂಟೆಯೊಂದು ಸಿಲುಕಿಕೊಂಡಿತ್ತು. ಇದನ್ನು ಲೋಕೋ ಪೈಲೆಟ್ ದೂರದಿಂದಲೇ ಗಮನಿಸಿ ಸಮಯ ಪ್ರಜ್ಞೆ ಮೆರೆದಿದ್ದಾರೆ. ತಕ್ಷಣವೇ ಬ್ರೇಕ್ ಹಾಕಿ, ಒಂಟೆಗೆ ಡಿಕ್ಕಿ ಹೊಡೆಯುವ ಮೊದಲು ರೈಲನ್ನು ನಿಲ್ಲಿಸಿದ್ದಾರೆ.
ನ್ಯಾಯ ಸಿಕ್ಕಿಲ್ಲ ಎಂದು ಬೇಸತ್ತು ಪೊಲೀಸ್ ಠಾಣೆಯಲ್ಲೇ ವಿಷ ಸೇವಿಸಿದ ಯುವತಿ!
ರೈಲ್ವೆ ಸಿಬ್ಬಂದಿ ಹಾಗೂ ಪೋರ್‌ಬಂದರ್ ಅಗ್ನಿಶಾಮಕ ದಳವು ಸ್ಥಳಕ್ಕೆ ಆಗಮಿಸಿ ಒಂಟೆ ರಕ್ಷಣೆಗೆ ಬೃಹತ್ ಕಾರ್ಯಾಚರಣೆ ನಡೆಸಿದರು. ಒಂಟೆ ಕಿರಿದಾದ ಜಾಗದಲ್ಲಿ ಸಿಲುಕಿರುವುದರಿಂದ ಕ್ರೇನ್, ಹಗ್ಗ ಹಾಗೂ ಬೆಲ್ಟ್‌ಗಳನ್ನು ಬಳಸಿ ಸುಮಾರು 4 ಗಂಟೆಗಳ ಸತತ ಪ್ರಯತ್ನಗಳ ನಂತರ ಒಂಟೆಗೆ ಯಾವುದೇ ಗಾಯವಾಗದಂತೆ ಹೊರ ತೆಗೆಯಲಾಯಿತು.
ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಈ ಮಾರ್ಗದ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು. 2 ಸ್ಥಳೀಯ ಪ್ಯಾಸೆಂಜರ್ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಯಿತು. ಒಂಟೆಯನ್ನು ಸುರಕ್ಷಿತವಾಗಿ ತೆರವು ಮಾಡುವವರೆಗೆ ರೈಲ್ವೆ ತಂಡಗಳು ಸಹಕರಿಸಿದವು.