ನೇಪಾಳದಲ್ಲಿ ಭೀಕರ ಜಲಪ್ರಳಯ: ನೀರಿನ ಸೆಳೆತಕ್ಕೆ ಪ್ರವಾಹದಲ್ಲಿ ಕೊಚ್ಚಿ ಹೋದ ಆನೆಗಳ ಹಿಂಡು!
Viral News: ಭೋಟೆ ಕೋಶಿ ನದಿಯಲ್ಲಿ ಉಂಟಾದ ಹಠಾತ್ ಪ್ರವಾಹವು ನೇಪಾಳದ ನುವಾಕೋಟ್ ಮತ್ತು ಧಾಡಿಂಗ್ ಜಿಲ್ಲೆಗಳನ್ನು ಆವರಿಸಿಕೊಂಡಿದೆ. ಈ ಭೀಕರ ಪ್ರವಾಹಕ್ಕೆ ನೇಪಾಳದ ಹಲವು ಗ್ರಾಮಗಳು ಕೊಚ್ಚಿ ಹೋಗಿದ್ದು ಜನವಸತಿ ಪ್ರದೇಶಗಳು, ರಸ್ತೆಗಳು ಸಂಪೂರ್ಣ ಜಲ ಸಮಾಧಿಯಾಗಿವೆ. ಇದೀಗ ನೇಪಾಳದಿಂದ ಕೊಚ್ಚಿಬಂದು ಉತ್ತರ ಪ್ರದೇಶದ ಬಹ್ರೈಚ್ ಬಳಿಯ ಧುರೀಣ ನದಿಯಲ್ಲಿ ಪರ ದಾಡುತ್ತಿದ್ದ ಐದು ಕಾಡಾನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ.
ನೀರಿನ ಸೆಳೆತಕ್ಕೆ ಪ್ರವಾಹದಲ್ಲಿ ಕೊಚ್ಚಿ ಹೋದ ಆನೆಗಳ ಹಿಂಡು -
ಕಠ್ಮಂಡು, ಆ. 27: ನೇಪಾಳ ಉಂಟಾದ ದಿಢೀರ್ ಜಲಪ್ರಳಯ (Nepal Flood) ಕಂಡು ಜಗತ್ತೇ ನಡುಗಿ ಹೋಗಿದೆ. ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 365ಕ್ಕೆ ಏರಿಕೆಯಾಗಿದ್ದು, ಸಾವಿರಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಅವಶೇಷಗಳ ನಡುವೆ ಸಿಲುಕಿರುವವರಿಗಾಗಿ ರಕ್ಷಣಾ ತಂಡಗಳು ಶೋಧ ಕಾರ್ಯಚರಣೆ ನಡೆಸುತ್ತಿವೆ. ಈ ನಡುವೆ ನದಿನೀರಿನಲ್ಲಿ ಸಿಲುಕಿ ಐದು ಕಾಡಾನೆಗಳು ಕೊಚ್ಚಿಕೊಂಡು ಹೋಗಿವೆ. ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ಭೋಟೆ ಕೋಶಿ ನದಿಯಲ್ಲಿ ಉಂಟಾದ ಹಠಾತ್ ಪ್ರವಾಹವು ನೇಪಾಳದ ನುವಾಕೋಟ್ ಮತ್ತು ಧಾಡಿಂಗ್ ಜಿಲ್ಲೆಗಳನ್ನು ಆವರಿಸಿಕೊಂಡಿದೆ. ಈ ಭೀಕರ ಪ್ರವಾಹಕ್ಕೆ ನೇಪಾಳದ ಹಲವು ಗ್ರಾಮಗಳು ಕೊಚ್ಚಿ ಹೋಗಿದ್ದು ಜನವಸತಿ ಪ್ರದೇಶಗಳು, ರಸ್ತೆಗಳು ಸಂಪೂರ್ಣ ಜಲ ಸಮಾಧಿಯಾಗಿವೆ. ಇದೀಗ ನೇಪಾಳದಿಂದ ಕೊಚ್ಚಿಬಂದು ಉತ್ತರ ಪ್ರದೇಶದ ಬಹ್ರೈಚ್ ಬಳಿಯ ಧುರೀಣ ನದಿಯಲ್ಲಿ ಪರದಾಡುತ್ತಿದ್ದ ಐದು ಕಾಡಾನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ.
ವಿಡಿಯೊ ನೋಡಿ:
Elephants from Nepal were seen being swept into northern India(UP) by the flash floods that occurred yesterday... pic.twitter.com/mJKJI5ZQwY
— ashish kumar (@Betamasterjika) August 27, 2026
ವೈರಲ್ ಆದ ವಿಡಿಯೊದಲ್ಲಿ ಹಲವು ಆನೆಗಳು ನೀರಿನಲ್ಲಿ ಸಿಲುಕಿಕೊಂಡಿರುವುದನ್ನು ತೋರಿಸಲಾಗಿದೆ. ಅವುಗಳು ಪ್ರವಾಹದಲ್ಲಿ ಸಿಲುಕಿ ಒದ್ದಾಡುತ್ತಿರುವುದು ಕಂಡು ಬಂದಿದೆ. ಮೂರು ದೊಡ್ಡ ಆನೆಗಳು ಹಾಗೂ ಎರಡು ಸಣ್ಣ ಮರಿಗಳು ಉತ್ತರ ಪ್ರದೇಶದ ಕೈಲಾಸ ಪುರಿ ಬ್ಯಾರೇಜ್ ನದಿಯ ನೀರಿನ ಸೆಳೆತದಲ್ಲಿ ಈಜಲಾಗದೆ ತೀವ್ರ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದವು ಎಂದು ವೈವರಲ್ ವಿಡಿಯೊದಲ್ಲಿ ವಿವರಿಸಲಾಗಿದೆ. ಆದರೆ ಇದು ನಿಜವಾದ ವಿಡಿಯಿವಲ್ಲ ಎನ್ನುವ ಮಾತೂ ಕೇಳಿ ಬಂದಿದ್ದು, ಇದರ ಸತ್ಯಾಸತ್ಯತೆ ಇನ್ನಷ್ಟೆ ಹೊರ ಬೀಳಬೇಕಿದೆ.
ಸಾರ್ವಜನಿಕರ ಮುಂದೆಯೇ ನದಿಗೆ ಕಸ ಎಸೆದ ದಂಪತಿ; ನಾಚಿಕೆಯಿಂದ ತಲೆ ತಗ್ಗಿಸಿದ ನಾಗರಿಕ ಸಮಾಜ
ಈ ಘಟನೆಯು ವೈರಲ್ ಆಗುತ್ತಿದ್ದಂತೆ ಅನೇಕರು ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಗಿರ್ಜಾಪುರಿ ಬ್ಯಾರೇಜ್ ಕಡೆಗೆ ಆನೆಗಳ ಹಿಂಡು ಕೊಚ್ಚಿಬರುತ್ತಿರುವ ಮಾಹಿತಿ ಸಿಗುತ್ತಿದ್ದಂತೆ ಅರಣ್ಯ ವ್ಯಾಪ್ತಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಅಧಿಕಾರಿಗಳು ತಕ್ಷಣವೇ ನೀರಾವರಿ ಇಲಾಖೆಯೊಂದಿಗೆ ಮಾತುಕತೆ ನಡೆಸಿ ಬ್ಯಾರೇಜ್‌ನ ಗೇಟ್‌ಗಳನ್ನು ಬಂದ್ ಮಾಡಿಸಿದ್ದಾರೆ.
ನೀರಿನ ಹರಿವು ಕಡಿಮೆಯಾಗುತ್ತಿದ್ದಂತ ಆನೆಗಳು ತಮ್ಮ ಮರಿಗಳನ್ನು ಸುರಕ್ಷಿತವಾಗಿ ಹಿಡಿದುಕೊಂಡು ದಂಡೆಯತ್ತ ಸಾಗಿದವು. ಬಳಿಕ ಸಿಬ್ಬಂದಿ ಆನೆಗಳ ಹಿಂಡನ್ನು ಸಮೀಪದ ಅಭಯಾರಣ್ಯಕ್ಕೆ ಸುರಕ್ಷಿತವಾಗಿ ಸಾಗಿಸಿದ್ದಾರೆ ಎನ್ನಲಾಗಿದೆ.