ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

''ಒಂದೇ ಒಂದು ಗುಂಡಿ ಇಲ್ಲ! ಬೆಂಗಳೂರಿಗಿಂತ ಹೈದರಾಬಾದ್ ರಸ್ತೆಗಳೇ ಪರ್ಫೆಕ್ಟ್," ವಿದೇಶಿ ಪ್ರವಾಸಿಗ ಹೇಳಿದ್ದೇನು?

Viral Video: ಭಾರತದ ಪ್ರಮುಖ ನಗರವಾದ ಬೆಂಗಳೂರು ಹಾಗೂ ಹೈದರಾಬಾದ್ ನಡುವೆ ಆಗಾಗ ಪೈಪೋಟಿ ಆಗುತ್ತಲೇ ಇರುತ್ತವೆ‌ , ಈ ಬಾರಿ ಕೆನಡಾದ ಪ್ರವಾಸಿಹೈದರಾಬಾದ್‌ನ ರಸ್ತೆಗಳಿಗೆ ಮೆಚ್ಚುಗೆ ವ್ಯಕ್ತ ಪಡಿಸಿ ಬೆಂಗಳೂರಿನ ರಸ್ತೆಗಳ ಸ್ಥಿತಿಯ ಬಗ್ಗೆ ಬೇಸರ ಹೊರಹಾಕಿದ್ದಾರೆ. ಬೆಂಗಳೂರು ಅಭಿವೃದ್ಧಿಹೊಂದುತ್ತಿದ್ದರೂ ಇನ್ನೂ ಸಂಚಾರ ಮತ್ತು ಮೂಲಸೌಕರ್ಯ ಸಮಸ್ಯೆಗಳಲ್ಲಿ ಯಾಕೆ ಮುಂದಿದೆ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರಿಗಿಂತ ಹೈದರಾಬಾದ್ ರಸ್ತೆ ಬೆಸ್ಟ್ ಎಂದ ಕೆನಡಾ ಪ್ರಜೆ: ಹೇಳಿದ್ದೇನು?

ಬೆಂಗಳೂರಿಗಿಂತ ಹೈದರಾಬಾದ್ ರಸ್ತೆ ಬೆಸ್ಟ್ ಎಂದ ಕೆನಡಾ ಪ್ರಜೆ -

Profile
Pushpa Kumari May 21, 2026 2:35 PM

ಹೈದರಾಬಾದ್, ಮೇ 21: ಭಾರತಕ್ಕೆ ಭೇಟಿ ನೀಡಿದ ವಿದೇಶಿಗರು ಇಲ್ಲಿನ ಆತಿಥ್ಯ ಹಾಗೂ ಸೌಕರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಲೇ ಇರುತ್ತಾರೆ. ಇದೀಗ ಕೆನಡಾ ಪ್ರಜೆಯೊಬ್ಬರು ಭಾರತದ ಪ್ರತಿಷ್ಠಿತ ನಗರಗಳಿಗೆ ಭೇಟಿ ನೀಡಿದ್ದು ಹೈದರಾಬಾದ್ ರಸ್ತೆಗಳ ಬಗ್ಗೆ ಮುಕ್ತಕಂಠದಿಂದ ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ. ಭಾರತದ ಪ್ರಮುಖ ನಗರವಾದ ಬೆಂಗಳೂರು (Bengaluru) ಹಾಗೂ ಹೈದರಾಬಾದ್ ನಡುವೆ ಆಗಾಗ ಪೈಪೋಟಿ ಆಗುತ್ತಲೇ ಇರುತ್ತವೆ‌ , ಈ ಬಾರಿ ಕೆನಡಾದ ಪ್ರವಾಸಿ ಹೈದರಾಬಾದ್‌ನ ರಸ್ತೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ಬೆಂಗಳೂರಿನ ರಸ್ತೆಗಳ ಸ್ಥಿತಿಯ ಬಗ್ಗೆ ಬೇಸರ ಹೊರಹಾಕಿದ್ದಾರೆ. ಬೆಂಗಳೂರು ಅಭಿವೃದ್ಧಿ ಹೊಂದುತ್ತಿದ್ದರೂ ಇನ್ನೂ ಸಂಚಾರ ಮತ್ತು ಮೂಲಸೌಕರ್ಯ ಸಮಸ್ಯೆಗಳಲ್ಲಿ ಯಾಕೆ ಮುಂದಿದೆ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.

ಕೆನಡಾದ ಕಂಟೆಂಟ್ ಕ್ರಿಯೇಟರ್ವೊಬ್ಬರು ಈ ವಿಡಿಯೊ ಶೇರ್ ಮಾಡಿಕೊಂಡಿದ್ದು ಹೈದರಾಬಾದ್‌ನಲ್ಲಿ ಸುಗಮ ರಸ್ತೆಗಳು, ಸುಲಭವಾದ ಸಂಚಾರ ವ್ಯವಸ್ಥೆ ಕಂಡು ಅವರು ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ‌. ಕ್ಯಾಲೆಬ್ ಫ್ರೈಸೆನ್ ಎಂದು ಗುರುತಿಸಲ್ಪಟ್ಟ ವ್ಯಕ್ತಿ ಕಾರಿನಲ್ಲಿ ನಗರದ ಮೂಲಕ ಪ್ರಯಾಣಿಸುವಾಗ ಕ್ಲಿಪ್ ಅನ್ನು ರೆಕಾರ್ಡ್ ಮಾಡಿದ್ದಾರೆ. ಕಿಟಕಿಯ ಹೊರಗೆ ನೋಡುತ್ತಾ, ಬೆಂಗಳೂರಿಗೆ ಹೋಲಿಸಿದರೆ ಚಾಲನಾ ಅನುಭವ ಎಷ್ಟು ಭಿನ್ನವಾಗಿದೆ ಎಂದು ಅವರು ಪದೇ ಪದೇ ವಿಡಿಯೊದಲ್ಲಿ ತಿಳಿಸಿದ್ದಾರೆ.

ಹೈದರಾಬಾದ್‌ನಲ್ಲಿ ಈ ರಸ್ತೆಗಳು ಯಾವುವು? ಇದು ಅದ್ಭುತವಾಗಿದೆ. ಬೆಂಗಳೂರಿನಲ್ಲಿ ಈ ರೀತಿಯ ರಸ್ತೆಗಳು ಯಾಕಿಲ್ಲ? ತಾನು ನಗರದ ಮಧ್ಯ ಭಾಗದಲ್ಲಿ ಪ್ರಯಾಣಿಸುತ್ತಿದ್ದರೂ ವಿಶಾಲವಾದ ರಸ್ತೆಗಳು, ಒಂದು ಗುಂಡಿಗಳು ಸಹ ಇಲ್ಲಿ ಕಾಣ ಸಿಗುತ್ತಿಲ್ಲ. ಪಾದಚಾರಿಗಳು ಅಥವಾ ಪ್ರಾಣಿಗಳು ಸಂಚಾರಕ್ಕೆ ಆಗಾಗ್ಗೆ ಅಡ್ಡಿಪಡಿಸುವುದನ್ನು ಕೂಡ ಅವರು ಗಮನಿಸಿಲ್ಲ ಎಂದರು‌.

Viral Video: ಗಡಿ ದಾಟಿ ಭಾರತದೊಳಗೆ ಸುಲಭವಾಗಿ ಕಾಲಿಡಬಹುದು ಎಂದ ಪಾಕಿಸ್ತಾನ ಪತ್ರಕರ್ತೆಗೆ ತರಾಟೆ

ಹೈದರಾಬಾದ್‌ನ ಮುಖ್ಯ ರಸ್ತೆಗಳು "ನಿರ್ಮಲ"ವಾಗಿ ಕಾಣುತ್ತವೆ ಟ್ರಾಫಿಕ್ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿ ಸಿದ್ದಾರೆ. ಹೈದರಾಬಾದ್‌ನಲ್ಲಿ ಸಂಚಾರವೇ ಇಲ್ಲ ಎಂದು ಇದರ ಅರ್ಥವಲ್ಲ, ಆದರೆ ಸಂಚಾರವನ್ನು ತಗ್ಗಿಸಲು ಮತ್ತು ವೇಗಗೊಳಿಸಲು ಅವರು ಉತ್ತಮ ಗುಣಮಟ್ಟದ ರಸ್ತೆ ಮೂಲಸೌಕರ್ಯವನ್ನು ನಿರ್ಮಿಸುವಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಆದರೆ ಬೆಂಗಳೂರಿನಲ್ಲಿ ಈ ಸಮಸ್ಯೆ ಹೇಳತೀರದು ಅಂದರು.

ಈ ವೀಡಿಯೊ ತ್ವರಿತವಾಗಿ ಆನ್‌ಲೈನ್‌ನಲ್ಲಿ ಹಲವು ಪ್ರತಿಕ್ರಿಯೆಗಳಿಗೆ ಕಾರಣವಾಯಿತು, ಅನೇಕ ಬಳಕೆದಾರರು ಹೈದರಾಬಾದ್ ಮತ್ತು ಬೆಂಗಳೂರನ್ನು ಹೋಲಿಕೆ ಮಾಡಲು ಪ್ರಾರಂಭಿಸಿದ್ದಾರೆ. ಹೈದರಾಬಾದ್‌ನ ಮೂಲಸೌಕರ್ಯವು ವರ್ಷಗಳಲ್ಲಿ ಬಹಳಷ್ಟು ಸುಧಾರಿಸಿದೆ ಎಂದು ಕೆಲವರು ಒಪ್ಪಿಕೊಂಡರು. ಬಳಜೆದಾರರೊಬ್ಬರು ಆದಾಗ್ಯೂ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ನರಕದ ಪಾಡು ಎಂದು ಅಳಲು ತೋಡಿಕೊಂಡಿದ್ದಾರೆ.