ಮದುವೆ ದಿನವೇ ಪೊಲೀಸರ ಅತಿಥಿಯಾದ ಸೆಲೆಬ್ರಿಟಿ ಕಪಲ್! ನಿನಗಿದು ಬೇಕಿತ್ತಾ ಮಗನೇ ಎಂದ ನೆಟ್ಟಿಗರು
ನವ ದಂಪತಿ ರೈಫಲ್ ಹಿಡಿದು ಗಾಳಿಯಲ್ಲಿ ಗುಂಡು ಹಾರಿಸಿ ಬಳಿಕ ಹಾರ ಬದಲಿಸಿಕೊಂಡಿದ್ದು ಅದರ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಆನ್ಲೈನ್‌ನಲ್ಲಿ ಸಂಚಲನ ಉಂಟು ಮಾಡುತ್ತಿದ್ದಂತೆ ಬಳಿಕ ವಿಷಯ ತಿಳಿದ ಮೀರತ್‌ನ ಅಧಿಕಾರಿಗಳು ಇದನ್ನು ಗಮನಿಸಿ ಪ್ರಕರಣ ದಾಖಲಿಸಿದ್ದಾರೆ.
ಗಾಳಿಯಲ್ಲಿ ಗುಂಡು ಹಾರಿಸಿದ ನವ ದಂಪತಿ -
ಮೀರತ್: ಮದುವೆ ಸಮಾರಂಭವು ಬಹಳ ಅದ್ಧೂರಿಯಾಗಿರಬೇಕು ಎಂಬ ಕಾರಣಕ್ಕೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ. ಮದುವೆ ಮನೆಗೆ ಅದ್ಧೂರಿಯಾಗಿ ಎಂಟ್ರಿ, ವಧು ವರನನ್ನು ವಿಶೇಷ ರೀತಿ ಸ್ವಾಗತ ಮಾಡುವುದು ಹೀಗೆ ಗ್ರ್ಯಾಂಡ್ ಆಗಿ ಮಾಡಲಾಗುತ್ತದೆ. ಇನ್ನು ಮದುವೆ ಸಮಾರಂಭ ವಿಶೇಷವಾಗಿಸುವ ಸಲುವಾಗಿ ಪಟಾಕಿ ಸಿಡಿಸುವುದು ಸಾಮಾನ್ಯ ಆದರೆ ಇಲ್ಲೊಂದು ಜೋಡಿ ಮದುವೆ ದಿನ ರೈಫಲ್ ನಲ್ಲಿ ಗುಂಡು ಹಾರಿಸಿದ್ದ ಘಟನೆ ಮೀರತ್‌ನಲ್ಲಿ ನಡೆದಿದೆ. ನವ ದಂಪತಿ ರೈಫಲ್ ಹಿಡಿದು ಗಾಳಿಯಲ್ಲಿ ಗುಂಡು ಹಾರಿಸಿ ಬಳಿಕ ಹಾರ ಬದಲಾಯಿಸಿಕೊಂಡಿದ್ದು ಅದರ ವಿಡಿಯೋ (Viral Video) ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಆನ್ಲೈನ್‌ನಲ್ಲಿ ಸಂಚಲನ ಉಂಟು ಮಾಡುತ್ತಿದ್ದಂತೆ ಬಳಿಕ ವಿಷಯ ತಿಳಿದ ಮೀರತ್‌ನ ಅಧಿಕಾರಿಗಳು ಇದನ್ನು ಗಮನಿಸಿ ಪ್ರಕರಣ ದಾಖಲಿಸಿದ್ದಾರೆ.
ಹರಿಯಾಣ ಕಿಕ್ ಬಾಕ್ಸರ್-ವರ ಸಾಹಿಲ್ ಭಾರದ್ವಾಜ್ ಅಂತಾರಾಷ್ಟ್ರೀಯ ಜಾವೆಲಿನ್ ಎಸೆತಗಾರ್ತಿ ಅಣ್ಣು ರಾಣಿ ಅವರ ಮದುವೆ ಕಾರ್ಯಕ್ರಮವನ್ನು ಮಿರತ್ ನಲ್ಲಿ ಆಯೋಜಿಸಲಾಗಿತ್ತು. ನವೆಂಬರ್ 18ರ ರಾತ್ರಿ ಮೀರತ್‌ನ ಅರಮನೆಯೊಂದರಲ್ಲಿ ಈ ವಿವಾಹ ನಡೆದಿದೆ. ಮದುವೆ ಸಮಾರಂಭಕ್ಕೆ ನವ ವಿವಾಹಿತರು ವೇದಿಕೆಯ ಮೇಲೆ ನಿಂತು ಜೊತೆಯಾಗಿ ಸೇರಿ ರೈಫಲ್ ಹಿಡಿದುಕೊಂಡು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈ ವಿಡಿಯೋವನ್ನು ಇನ್ ಸ್ಟಾಗ್ರಾಂ ನಲ್ಲಿ ಹಂಚಿಕೊಳ್ಳಲಾಗಿದೆ. ಇದನ್ನು ಮನೋರಂಜನೆಯ ಉದ್ದೇಶಕ್ಕಾಗಿ ಮಾಡಿದ್ದರೂ ಇದೀಗ ದಂಪತಿಗಳಿಬ್ಬರು ಪ್ರಕರಣ ಒಂದರಲ್ಲಿ ಸಿಲುಕುವಂತೆ ಮಾಡಿದೆ.
ವಿಡಿಯೋ ಇಲ್ಲಿದೆ:
ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದಂತೆ ಕಾನೂನಿನ ನಿಯಮ ಉಲ್ಲಂಘನೆಯಾದ ವಿಚಾರ ಕೂಡ ಮುನ್ನೆಲೆಗೆ ಬಂದಿದೆ. ಮೀರತ್‌ನ ಅಧಿಕಾರಿಗಳು ಇದನ್ನು ಗಮನಿಸಿ ಪರಿಶೀಲಿಸಿದ್ದಾರೆ. ಮೀರತ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವಿಪಿನ್ ಟಾಡಾ ಅವರ ನೇತೃತ್ವದಲ್ಲಿ ದಂಪತಿಗಳ ವಿರುದ್ಧ ಸರ್ಧಾನಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೈಫಲ್ ಅನ್ನು ತಮ್ಮ ಸುರಕ್ಷತೆಗೆ ಹೊರತು ಪಡಿಸಿ ಮನೋರಂಜನೆಯ ಉದ್ದೇಶಕ್ಕೆ ಬಳಸುವುದು ಕಾನೂನಿನ ನಿಯಮ ಉಲ್ಲಂಘನೆ ಮಾಡಿದಂತೆ. ಇದರಿಂದ ಜೀವ ಹಾನಿಯಾಗುವ ಸಂಭವ ಇದ್ದು ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕೃತ್ಯಕ್ಕಾಗಿ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 125 ರ ಅಡಿಯಲ್ಲಿ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 25 ಮತ್ತು 30 ರ ಅಡಿಯಲ್ಲಿ ಎಫ್‌ಐ ಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರೈಫಲ್ ಸತ್ಯನಾರಾಯಣ್ ಎಂಬ ವ್ಯಕ್ತಿಗೆ ಸೇರಿದ್ದು ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಅಣ್ಣು ರಾಣಿ ಅವರು ಜಾವೆಲಿನ್ ಕೇತ್ರದಲ್ಲಿ ಅಗ್ರಗಣ್ಯ ಸಾಧನೆ ಮಾಡಿದ್ದಾರೆ. 2019 ರಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‌ನಲ್ಲಿ ಜಾವೆಲಿನ್ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಕೂಡ ಇವರಿಗಿದೆ. 2023 ರಲ್ಲಿ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದರು. ಇವರ ಪತಿ ಸಾಹಿಲ್ ಭಾರದ್ವಾಜ್ ಅವರು ಕಿಕ್ ಬಾಕ್ಸಿಂಗ್‌ನಲ್ಲಿ ನಾಲ್ಕು ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದಾರೆ. ಜುಲೈ 2025 ರಲ್ಲಿ ಛತ್ತೀಸ್‌ಗಢದಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಅವರು ಕಂಚಿನ ಪದಕ ಗೆದ್ದಿದ್ದಾರೆ. ಸದ್ಯ ಗಾಳಿಯಲ್ಲಿ ಗುಂಡು ಹಾರಿಸಿದ ಪರಿಣಾಮ ಮದುವೆ ದಿನವೇ ಪೊಲೀಸರ ಅತಿಥಿಯಾಗಿದ್ದಾರೆ.