ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮದ್ಯದ ಅಮಲಿನಲ್ಲಿ ರೈಲು ಹತ್ತಿ ಯುವಕನ ಹುಚ್ಚಾಟ: ವೈರಲ್ ವಿಡಿಯೊ ಇಲ್ಲಿದೆ

ವ್ಯಕ್ತಿಯೊಬ್ಬ ಕಂಠಪೂರ್ತಿ ಕುಡಿದು ರೈಲು ನಿಲ್ದಾಣದಲ್ಲಿ ರೈಲಿನ ಮೇಲೆ ನಿಂತು ಹೈ ವೋಲ್ಟೇಜ್ ವಿದ್ಯುತ್‌ ತಂತಿಗಳನ್ನು ಮುಟ್ಟಲು ಹೋದ ಘಟನೆ ಜಾರ್ಖಂಡ್‌ನ ಧನ್ಬಾದ್‌ನಲ್ಲಿ ನಡೆದಿದೆ. ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 2ರಲ್ಲಿ ಕುಡಿದ ಮತ್ತಿನಲ್ಲಿದ್ದ ಆ ವ್ಯಕ್ತಿ ಮನ ಬಂದಂತೆ ವರ್ತಿಸಿದ್ದಾನೆ. ಸದ್ಯ ಈ ಕುರಿತಾದ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಮತ್ತಿನಲ್ಲಿ ರೈಲಿನ ಮೇಲೆ ನಿಂತು ವಿದ್ಯುತ್ ತಂತಿ ಮುಟ್ಟಲು ಹೋದ ಯುವಕ

ಮದ್ಯದ ಅಮಲಿನಲ್ಲಿ ರೈಲಿನ ಮೇಲೆ ಹತ್ತಿ ಯುವಕನ ಹುಚ್ಚಾಟ -

Profile
Pushpa Kumari Nov 19, 2025 8:39 PM

ರಾಂಚಿ: ಕುಡಿತದ ನಶೆಯಲ್ಲಿರುವವರಿಗೆ ತಮ್ಮ ಸುತ್ತಲೂ ಏನಾದರೂ ಅದರ ಪರಿಜ್ಞಾನವೇ ಇರುವುದಿಲ್ಲ. ಮದ್ಯ ಸೇವಿಸಿ ಬಾಯಿಗೆ ಬಂದಂತೆ ಮಾತನಾಡುವುದು, ವಸ್ತುಗಳನ್ನು ಒಡೆದು ಹಾನಿ ಮಾಡುವುದು, ಕುಡಿದು ವಾಹನ ಚಲಾಯಿಸಿ ಅಪಘಾತ ಎಸಗುವುದು ಅನೇಕ ಅವಘಡಗಳನ್ನು ಮಾಡುತ್ತಲೇ ಇರುತ್ತಾರೆ. ಇದೀಗ ವ್ಯಕ್ತಿಯೊಬ್ಬ ಕಂಠ ಪೂರ್ತಿ ಕುಡಿದು ರೈಲು ನಿಲ್ದಾಣದಲ್ಲಿ ದಾಂಧಲೆ ಎಬ್ಬಿಸಿದ್ದಾನೆ. ರೈಲಿನ ಮೇಲೆ ನಿಂತು ಹೈ ವೋಲ್ಟೇಜ್ ವಿದ್ಯುತ್‌ ತಂತಿಯನ್ನು ಮುಟ್ಟಲು ಹೋದ ಘಟನೆ ಜಾರ್ಖಂಡ್‌ನ ಧನ್ಬಾದ್‌ನಲ್ಲಿ ನಡೆದಿದೆ. ರೈಲ್ವೇ ಸ್ಟೇಶನ್‌ನ ಪ್ಲಾಟ್‌ಫಾರ್ಮ್ ಸಂಖ್ಯೆ 2ರಲ್ಲಿ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿ ಮನ ಬಂದಂತೆ ವರ್ತಿಸಿದ್ದಾನೆ. ಸದ್ಯ ಈ ಕುರಿತಾದ ವಿಡಿಯೊ (Viral video) ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ನವೆಂಬರ್ 17ರಂದು ಈ ಟನೆ ನಡೆದಿದೆ. ವ್ಯಕ್ತಿ ಅತಿಯಾಗಿ ಮದ್ಯ ಸೇವಿಸಿದ್ದು, ಬಳಿಕ ಅಮಲಿನಲ್ಲಿಯೇ ರೈಲಿನ ಹಳಿಯ ಮೇಲೆ ಸಾಗಿದ್ದಾನೆ. ಅಲ್ಲಿಂದ ಬಳಿಕ ನಿಂತ ರೈಲೊಂದರ ಚಾವಣಿಗೆ ಹತ್ತಿದ್ದಾನೆ. ಹರಿದ ಬಟ್ಟೆಗಳನ್ನು ಧರಿಸಿದ ವ್ಯಕ್ತಿ, ಬರಿಗಾಲಿನಲ್ಲಿ ರೈಲಿನ ಮೇಲ್ಭಾಗದಲ್ಲಿ ನಿಂತಿರುವುದನ್ನು ಸಹ ಪ್ರಯಾಣಿಕರೊಬ್ಬರು ಗಮನಿಸಿ ಕೆಳಗಿಳಿಯುವಂತೆ ಹೇಳಿದ್ದಾರೆ. ಆದರೆ ಆತ ಮಾತ್ರ ರೈಲಿನ ಮೇಲಿಂದಲೇ ವಿದ್ಯುತ್ ತಂತಿ ಮುಟ್ಟುತ್ತೇನೆ ಎಂದು ಅಲ್ಲಿದ್ದ ಜನರಿಗೆ ಹೆದರಿಸಿದ್ದಾನೆ.

ರೈಲಿನ ಮೇಲೆ ನಿಂತು ವಿದ್ಯುತ್ ತಂತಿ ಮುಟ್ಟಲು ಹೋದ ವ್ಯಕ್ತಿ:

ರೈಲ್ವೆ ಅಧಿಕಾರಿಗಳಿಗೆ ವಿಷಯ ತಲುಪುತ್ತಿದ್ದಂತೆ ರಕ್ಷಣ ಸಿಬಂದಿ ಮತ್ತು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ ದೃಶ್ಯ ಈ ವೈರಲ್ ವಿಡಿಯೊದಲ್ಲಿ ಕಂಡು ಬಂದಿದೆ. ಪರಿಸ್ಥಿತಿ ಅರಿತ ರೈಲ್ವೆ ಇಲಾಖೆಯವರು ತಕ್ಷಣ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಹೀಗಾಗಿ ದೊಡ್ಡ ಅಪಘಾತವೊಂದು ತಪ್ಪಿದೆ. ನಂತರ ಸಿಬ್ಬಂದಿ ಆತನ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದ ದೃಶ್ಯ ಮೊಬೈಲ್ ವಿಡಿಯೊದಲ್ಲಿ ಸೆರೆಯಾಗಿದೆ.

ಇದನ್ನು ಓದಿ:Viral Video: ಓವರ್ ಟೇಕ್ ಮಾಡಲು ಹೋಗಿ ಲಾರಿಯ ಚಕ್ರದಡಿಗೆ ಸಿಲುಕಿ ಸ್ಕೂಟರ್ ಸವಾರ ಅಪ್ಪಚ್ಚಿ: ವಿಡಿಯೊ ವೈರಲ್

ಆತನನ್ನು ರಕ್ಷಿಸಲು ಭದ್ರತಾ ಸಿಬಂದಿ ಮತ್ತು ಸಿಆರ್‌ಪಿಎಫ್ ಅಧಿಕಾರಿಗಳು ಮನವೊಲಿಸಲು ಸರ್ವ ಪ್ರಯತ್ನ ಮಾಡಿದ್ದಾರೆ. ಆತನನ್ನು ಕೆಳಗಿಳಿಸಲು ಏಣಿಯ ಸಹಾಯದಿಂದ ಭದ್ರತಾ ಸಿಬಂದಿಯೊಬ್ಬರು ರೈಲಿನ ಮೇಲೆ ಹತ್ತಲು ಮುಂದಾಗಿದ್ದಾರೆ. ಆದರೆ ಆತ ರಕ್ಷಣೆಗೆಂದು ಬಂದವರ ಮೇಲೆಯೇ ಹಲ್ಲೆ ಮಾಡಲು ಮುಂದಾಗಿದ್ದಾನೆ. ತನ್ನ ಕೈಯಲ್ಲಿದ್ದ ಬೂಟುಗಳನ್ನು ಬಳಸಿ ಸಿಬಂದಿಗೆ ಹೊಡೆದಿದ್ದಾನೆ.

ಬಳಿಕ ಭದ್ರತಾ ಸಿಬ್ಬಂದಿಯೊಬ್ಬರು ರೈಲಿನ ಚಾವಣಿಯ ಇನ್ನೊಂದು ಬದಿಯಿಂದ ತೆರಳಿ ರೈಲಿನಿಂದ ವ್ಯಕ್ತಿಯನ್ನು ಕೆಳಗಿಳಿಸಿದರು. ಈ ಘಟನೆಯ ಬಗ್ಗೆ ಪ್ರಕರಣ ದಾಖಲಾಗಿದೆ. ರೈಲ್ವೆ ಪೊಲೀಸ್ ಅಧಿಕಾರಿಗಳು ಆ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದು ತನಿಖೆ ಮುಂದುವರಿಸಿದ್ದಾರೆ.