75 ವರ್ಷದ ವೃದ್ಧ ತಾಯಿಯ ಕೂದಲು ಹಿಡಿದು ರಸ್ತೆಯಲ್ಲಿ ಎಳೆದೊಯ್ದ ಪಾಪಿ ಮಗ: ಕ್ರೌರ್ಯದ ವಿಡಿಯೋ ವೈರಲ್
Viral Video: ಪಾಪಿ ಮಗನೊಬ್ಬ ವೃದ್ಧ ತಾಯಿಯ ಕೂದಲು ಹಿಡಿದು ರಸ್ತೆಯುದ್ದಕ್ಕೂ ಎಳೆ ದೊಯ್ದಿದ್ದಾನೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಆಕ್ರೋಶಕ್ಕೆ ಕಾರಣವಾಗಿದೆ. ಶಂಕಿತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳ ಬೇಕೆಂದು ನೆಟ್ಟಿಗರು ಒತ್ತಾಯಿಸಿದ್ದಾರೆ.
ವೃದ್ಧ ತಾಯಿಗೆ ದೈಹಿಕವಾಗಿ ಕಿರುಕುಳ ನೀಡಿದ ಮಗ -
ಜಬಲ್ಪುರ,ಆ.10: ಇಂದು ಸಾಕಿ- ಸಲಹಿದ ಪೋಷಕರಿಗೆ ಕಿರುಕುಳ ನೀಡುವಂತಹ ಅನೇಕ ಪ್ರಕರಣಗಳು ವರದಿಯಾಗಿವೆ. ಕೆಲ ಮಕ್ಕಳು ತಮ್ಮ ವೃದ್ಧ ಪೋಷಕರನ್ನು ಪೋಷಿಸಲು ಆಗದೆ ವೃದ್ಧಾಶ್ರಮಕ್ಕೆ ಸೇರಿಸುತ್ತಿದ್ದಾರೆ. ಇದೀಗ ಪಾಪಿ ಮಗನೊಬ್ಬ ವೃದ್ಧ ತಾಯಿಯ ಕೂದಲು ಹಿಡಿದು ರಸ್ತೆಯುದ್ದಕ್ಕೂ ಎಳೆದೊಯ್ದಿದ್ದಾನೆ. ಈ ಘಟನೆಯ ದೃಶ್ಯ (Viral Video) ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಆಕ್ರೋಶಕ್ಕೆ ಕಾರಣವಾಗಿದೆ. ಶಂಕಿತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಒತ್ತಾಯಿಸಿದ್ದಾರೆ.
75 ವರ್ಷದ ವೃದ್ಧ ತಾಯಿಯ ಮೇಲೆ ಹೆತ್ತ ಮಗನೇ ಹಲ್ಲೆಯನ್ನು ನಡೆಸಿದ್ದಾನೆ. ಈ ಘಟನೆ ಜಬಲ್ಪುರದ ಚರಂಝಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮಹರ್ಷಿ ವಾಲ್ಮೀಕಿ ವಾರ್ಡ್‌ನ ವಾರ್ಡ್ ಸಂಖ್ಯೆ 78 ರಲ್ಲಿರುವ ಅಶೋಕ್ ವಿಹಾರ್ ಕಾಲೋನಿಯಲ್ಲಿ ನಡೆದಿದೆ. ತನ್ನ ವೃದ್ಧ ತಾಯಿಯನ್ನು ಕೂದಲು ಹಿಡಿದು ಎಳೆದೊಯ್ದಿದ್ದು ರಾಕ್ಷಸ ವರ್ತನೆ ತೋರಿದ್ದಾನೆ.
ವಿಡಿಯೋ ನೋಡಿ:
Son Drags And Hits 75-Year-Old Mother On Road In Jabalpur; CCTV Captures Incident #MPnews #MadhyaPradesh pic.twitter.com/Tn7NirpqFh
— Free Press Madhya Pradesh (@FreePressMP) August 9, 2026
ಮಿತ್ರ ವಿಶ್ವಕರ್ಮ ಎಂದು ಗುರುತಿಸಲಾದ ವೃದ್ಧ ಮಹಿಳೆಗೆ ಆಕೆಯ ಮಗ ರಾಜು ವಿಶ್ವಕರ್ಮ ಎಂಬಾತ ಹಲ್ಲೆಯನ್ನು ನಡೆಸಿದ್ದಾನೆ. ಆಕೆ ಭಯದಿಂದ ತನ್ನ ಮನೆಯ ಹೊರಗೆ ಓಡು ತ್ತಿದ್ದಂತೆ ಆತ ಬೆನ್ನಟ್ಟಿ ಬಂದಿದ್ದಾನೆ. ಬಳಿಕ ರಸ್ತೆಯಲ್ಲೇ ಆಕೆಯ ಕೂದಲು ಹಿಡಿದು ಎಳೆದಾಡಿ, ಹಲವಾರು ಭಾರಿ ಹೊಡೆದಿದ್ದಾನೆ. ನೆರೆಹೊರೆಯವರು ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ, ಅವರೊಂದಿಗೂ ಆತ ಅನುಚಿತವಾಗಿ ವರ್ತಿಸಿ ಬೆದರಿಕೆ ಹಾಕಿದ್ದಾನೆ.
Viral Video: ನೆರೆಮನೆಯ ಯುವಕನಿಂದನೇ ಕಿರುಕುಳ; ವಿಡಿಯೊ ಮಾಡಿ ಕಣ್ಣೀರು ಹಾಕಿದ ಅಪ್ರಾಪ್ತ ಬಾಲಕಿ
ಸ್ಥಳೀಯರು ನೀಡಿದ ಮಾಹಿತಿಯಂತೆ, ಆರೋಪಿ ರಾಜು ಕುಡಿದು ಮನೆಗೆ ಬಂದು ತಾಯಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ರಾಜು ಆಗಾಗ್ಗೆ ಮದ್ಯ ಸೇವಿಸಿ ನೆರೆ ಮನೆಯವರಿಗೂ ತೊಂದರೆ ನೀಡಿದ್ದಾನೆ. ಈ ಹಿಂದೆಯೂ ಇದೇ ರೀತಿಯ ಘಟನೆಗಳಲ್ಲಿ ಭಾಗಿಯಾಗಿದ್ದಾನೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ವೃದ್ಧ ಮಹಿಳೆ ರಕ್ಷಣೆ ನೀಡಬೇಕೆಂದು ನೆಟ್ಟಿಗರು ಒತ್ತಾಯಿಸಿದ್ದಾರೆ.ಹಲ್ಲೆಯ ವೀಡಿಯೊ ಪೊಲೀಸರ ಗಮನಕ್ಕೆ ಬಂದಿದ್ದು ರಂಝಿ ಪೊಲೀಸ್ ಠಾಣೆಯ ಉಸ್ತುವಾರಿ ಕಾನೂನಿನ ಪ್ರಕಾರ ಶಂಕಿತನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ..