ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮೊಬೈಲ್ ಕದ್ದ ಕಳ್ಳನನ್ನು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದ ಸಹೋದರಿಯರು; ವಿಡಿಯೋ ವೈರಲ್‌

Viral Video: ಮೊಬೈಲ್ ಕಳ್ಳನನ್ನು ಇಬ್ಬರು ಸಹೋದರಿಯರು ಬೆನ್ನಟ್ಟಿ ಧೈರ್ಯದಿಂದ ಆತನನ್ನು ಎದುರಿಸಿದ್ದಾರೆ. ಮಧ್ಯ ಪ್ರದೇಶದ ಪದವ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಮುರಾರ್‌ನ ಸಿಪಿ ಕಾಲೋನಿಯ ನಿವಾಸಿಗಳಾದ ಇಬ್ಬರು ಸಹೋದರಿಯರು ಹರ್ಷಿತಾ ಮತ್ತು ರಸಿತಾ ಅಗರ್ವಾಲ್ ಸ್ಕೂಟರ್‌ನಲ್ಲಿ ಕಾಲೇಜಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.

ಮೊಬೈಲ್ ಕಳ್ಳನನ್ನು ಬೆನ್ನಟ್ಟಿದ ಯುವತಿಯರು: ಧೈರ್ಯಕ್ಕೆ ನೆಟ್ಟಿಗರ ಪ್ರಶಂಸೆ!

ಮೊಬೈಲ್ ಕಳ್ಳನನ್ನು ಬೆನ್ನಟ್ಟಿದ ಯುವತಿಯರು -

Profile
Pushpa Kumari Aug 10, 2026 3:02 PM

ಗ್ವಾಲಿಯರ್,ಆ.10: ಫೋನ್ ಕಳ್ಳತನ ಮಾಡಲು ಯತ್ನಿಸಿದ ಕಳ್ಳನನ್ನು ಸಿನಿಮೀಯ ರೀತಿಯಲ್ಲಿ ಹಿಡಿದ ರೋಚಕ ಘಟನೆಯೊಂದು ಭಾರೀ ವೈರಲ್ (Viral News) ಆಗುತ್ತಿದೆ. ಪರಾರಿಯಾಗಲು ಯತ್ನಿಸಿದ ಮೊಬೈಲ್ ಕಳ್ಳನನ್ನು ಇಬ್ಬರು ಸಹೋದರಿಯರು ಬೆನ್ನಟ್ಟಿ ಧೈರ್ಯದಿಂದ ಆತನನ್ನು ಎದುರಿಸಿದ್ದಾರೆ. ಮಧ್ಯ ಪ್ರದೇಶದ ಪದವ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಮುರಾರ್‌ನ ಸಿಪಿ ಕಾಲೋನಿಯ ನಿವಾಸಿಗಳಾದ ಇಬ್ಬರು ಸಹೋದರಿಯರು ಹರ್ಷಿತಾ ಮತ್ತು ರಸಿತಾ ಅಗರ್ವಾಲ್ ಸ್ಕೂಟರ್‌ನಲ್ಲಿ ಕಾಲೇಜಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.

ಪೊಲೀಸರ ಪ್ರಕಾರ, ಪದವ್‌ನ ಸೋಫಾ ಗ್ಯಾಲರಿಯ ಬಳಿ ಸಹೋದರಿಯರು ಹಾದು ಹೋಗುತ್ತಿದ್ದರು. ಆಗ ಬೈಕ್‌ನಲ್ಲಿ ಬಂದ ಖದೀಮನೊಬ್ಬ ಹಿಂದಿನಿಂದ ಬಂದು ರಸಿತಾ ಅವರ ಕೈಯಿಂದ ಮೊಬೈಲ್ ಫೋನ್ ಕಸಿದುಕೊಂಡಿದ್ದಾನೆ. ಕಳ್ಳತನ ಮಾಡಿದ ಕೂಡಲೇ ಆರೋಪಿ ತಕ್ಷಣವೇ ವೇಗ ಹೆಚ್ಚಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ, ಸಹೋದರಿಯರು ಇಬ್ಬರು ಧೈರ್ಯ ಕಳೆದುಕೊಳ್ಳಲಿಲ್ಲ. ಶಂಕಿತನನ್ನು ಬೆನ್ನಟ್ಟಲು ನಿರ್ಧರಿಸಿದ್ದು ಸುಮಾರು 80 ಕಿ.ಮೀ ವೇಗದಲ್ಲಿ ತಮ್ಮ ಸ್ಕೂಟರ್ ಅನ್ನು ಓಡಿಸಿದ್ದಾರೆ

ವಿಡಿಯೋ ನೋಡಿ:



ಕಳ್ಳ ಬೈಕ್ ನಲ್ಲಿ ಮತ್ತಷ್ಟು ಸ್ಪೀಡ್ ಹೆಚ್ಚಿಸಿದ್ದು ಈ ಸಂದರ್ಭದಲ್ಲಿ ಬೈಕ್‌ಗೆ ಟೆಂಪೋ ಒಂದ ಅಡ್ಡ ಬಂದಿದೆ. ಈ ವೇಳೆ ಆತ ದಿಕ್ಕು ಬದಲಾಯಿಸಿದ್ದು ಸಹೋದರಿಯರು ತಮ್ಮ ಸ್ಕೂಟರ್ ಅನ್ನು ಆತನ ಬೈಕಿಗೆ ಡಿಕ್ಕಿ ಹೊಡೆದಿದ್ದಾರೆ. ಈ ಪರಿಣಾಮ ಶಂಕಿತ ಆಯತಪ್ಪಿ ರಸ್ತೆಗೆ ಬಿದ್ದಿದ್ದಾನೆ. ಕಳ್ಳನನ್ನು ತಕ್ಷಣವೇ ಹಿಡಿದು ಕೊಂಡ ಸಹೋದರಿಯರು ಗಟ್ಟಿಯಾಗಿ ಕಿರುಚಾಡಿ ಸಾರ್ವಜನಿಕರ ಗಮನ ಸೆಳೆದಿದ್ದಾರೆ.

Bengaluru Viral Video: ಮಲಗಿದ್ದ ಮಕ್ಕಳ ನಡುವೆ ಕಾಣಿಸಿಕೊಂಡ ಬೃಹತ್‌ ನಾಗರಹಾವು; ಬೆಚ್ಚಿಬಿದ್ದ ಪೋಷಕರು!

ಆ ವ್ಯಕ್ತಿ ಮೊಬೈಲ್ ಫೋನ್ ಕಸಿದುಕೊಂಡಿದ್ದಾನೆಂದು ತಿಳಿದ ನಂತರ ನಿವಾಸಿಗಳು ಆತನನ್ನು ತಡೆಯಲು ಸಹಾಯ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆಯ ವೀಡಿಯೊ ಸೋಷಿ ಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇಬ್ಬರು ಸಹೋದರಿಯರು ಶಂಕಿತನನ್ನು ಅವನ ಕಾಲರ್ ಹಿಡಿದು ಪದೇ ಪದೇ ಕಪಾಳಮೋಕ್ಷ ಮಾಡುತ್ತಿದ್ದಾರೆ. ಯುವತಿಯರು ಧೈರ್ಯ ತೋರಿಸಿದ್ದಕ್ಕಾಗಿ ನೆಟಿಜನ್‌ಗಳಿಂದ ಪ್ರಶಂಸೆ ಪಡೆಯುತ್ತಿದ್ದಾರೆ.

ಆರೋಪಿಯನ್ನು ಪಂಜಾಬ್ ಮೂಲದ ಮನ್ಪ್ರೀತ್ ಎಂದು ತಿಳಿದುಬಂದಿದೆ. ವಿಚಾರಣೆಯ ಸಮಯದಲ್ಲಿ, ಅವನು ಎರಡು ದಿನಗಳ ಹಿಂದೆಯಷ್ಟೇ ಗ್ವಾಲಿಯರ್‌ಗೆ ಬಂದು ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಅವನಿಗೆ ಹಿಂದಿನ ಯಾವುದೇ ಕ್ರಿಮಿನಲ್ ದಾಖಲೆ ಇದೆಯೇ ಎಂದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.