ಕಂಪನಿಯ ಆರ್ಥಿಕ ಲಾಭದಲ್ಲಿ ಉದ್ಯೋಗಿಗಳಿಗೆ 236 ಕೋಟಿ ರೂ. ಬೋನಸ್ ನೀಡಿದ ಮಾಲೀಕ!
Viral News: ಚೀನಾದ ಹೆನಾನ್ ಕುವಾಂಗ್‌ಶಾನ್ ಕ್ರೇನ್ ಕಂಪನಿಯ ಸಂಸ್ಥಾಪಕ ಕುಯಿ ಪೀಜುನ್ ಉದ್ಯೊಗಿಗಳಿಗೆ ಅಪಾರ ಮೌಲ್ಯದ ಹಣ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಕಂಪನಿಯ ಕೆಲಸ ಗಾರರಿಗೆ 26 ಮಿಲಿಯನ್ ಯುಎಸ್ ಡಾಲರ್ (236 ಕೋಟಿ ರೂ.) ಹಣ ನೀಡುವ ಮೂಲಕ ಅಚ್ಚರಿ ಪಡಿಸಿದ್ದಾರೆ. ಸದ್ಯ ಕಂಪನಿಯ ಬೋನಸ್ ಮೊತ್ತ ಕಂಡು ಇಡೀ ಜಗತ್ತೇ ಅಚ್ಚರಿಪಟ್ಟಿದೆ.
ಚೀನೀ ಸಂಸ್ಥೆಯ ಬೋನಸ್ 236 ಕೋಟಿ -
ಚೀನಾ,ಫೆ.26: ಯಾವುದೇ ಹಬ್ಬದ ಸಂದರ್ಭದಲ್ಲಿ ಉದ್ಯೋಗಿಗಳಿಗೆ ಬೋನಸ್ ನೀಡಿರುವುದನ್ನು ನೀವು ಕೇಳಿರಬಹುದು. ಸಾಮಾನ್ಯವಾಗಿ ಕಂಪನಿಗಳು ತನ್ನ ಉದ್ಯೋಗಿಗಳಿಗೆ ಡ್ರೆಸ್, ಸ್ವೀಟ್ ಬಾಕ್ಸ್, ಹೀಗೆ ಗಿಫ್ಟ್ ಕೊಡುವುದು ಇದೆ. ಆದರೆ ಚೀನಾದ (China) ಹೆನಾನ್ ಕುವಾಂಗ್‌ಶಾನ್ ಕ್ರೇನ್ ಕಂಪನಿಯ ಸಂಸ್ಥಾಪಕ ಕುಯಿ ಪೀಜುನ್ ಉದ್ಯೊಗಿಗಳಿಗೆ ಅಪಾರ ಮೌಲ್ಯದ ಹಣ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಕಂಪನಿಯ ಕೆಲಸಗಾರರಿಗೆ 26 ಮಿಲಿಯನ್ ಯುಎಸ್ ಡಾಲರ್ (236 ಕೋಟಿ ರೂ.) ಹಣ ನೀಡುವ ಮೂಲಕ ಅಚ್ಚರಿಪಡಿಸಿದ್ದಾರೆ. ಸದ್ಯ ಕಂಪನಿಯ ಬೋನಸ್ ಮೊತ್ತ ಕಂಡು ಇಡೀ ಜಗತ್ತೇ ಅಚ್ಚರಿಪಟ್ಟಿದೆ.
ಚೀನಾದ ಕಂಪನಿಯ ಸ್ಥಾಪಕ ತಮ್ಮ ಇತ್ತೀಚಿನ ಆರ್ಥಿಕ ಯಶಸ್ಸನ್ನು ಉದ್ಯೋಗಿಗಳ ಜೊತೆಗೆ ಆಚರಣೆ ಮಾಡಿದ್ದಾರೆ. ಈ ಕಂಪನಿಯ ಯಶಸ್ಸನ್ನು ಆಚರಿಸಲು ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು 7,000 ಉದ್ಯೋಗಿಗಳಿಗೆ ಅವಕಾಶ ಕಲ್ಪಿಸಲು 800 ಔತಣಕೂಟ ಮೇಜುಗಳನ್ನು ಅಳವಡಿಸಲಾಗಿತ್ತು. ಸಂಸ್ಥೆಯು ವರ್ಷಾಂತ್ಯದ ಬೋನಸ್‌ಗಳಲ್ಲಿ 180 ಮಿಲಿಯನ್ ಯುವಾನ್ (ಸುಮಾರು ರೂ. 236 ಕೋಟಿ) ವಿತರಣೆ ಮಾಡಿದೆ. ಇದು ಅದರ ಒಟ್ಟು ವಾರ್ಷಿಕ ಲಾಭವಾದ 270 ಮಿಲಿಯನ್ ಯುವಾನ್ (ರೂ. 357 ಕೋಟಿ)ಯ ಸುಮಾರು 70% ಉದ್ಯೋಗಿಗಳಿಗೆ ವಿತರಣೆ ಮಾಡಿದೆ.
ವಿಡಿಯೋ ನೋಡಿ:
💰 Fou .. !
— ONG_la_VIE 🇨🇮 (@ONG_la_VIE) February 25, 2026
Une entreprise chinoise de grues a distribué 26 millions $ en cash à ses 7 000 employés lors de son gala annuel.
💸 Le concept : des piles de billets sur 800 tables et un concours de comptage. Ceux qui comptaient juste repartaient avec le butin ! 🇨🇳 pic.twitter.com/wEPmxwnuK2
ಈ ಕಾರ್ಯಕ್ರಮದಲ್ಲಿ ಮೇಜುಗಳ ಮೇಲೆ ನೋಟುಗಳ ಕಂತೆಗಳನ್ನು ಹರಡಿ ಇಡಲಾಗಿತ್ತು. ಉದ್ಯೋಗಿಗಳು ಈ ಹಣವನ್ನು ಅಲ್ಲೇ ಎಣಿಸಿ ಬ್ಯಾಗ್ ಗೆ ತುಂಬಿಸುತ್ತಿರುವ ವೀಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಬಗ್ಗೆ ಮಾತನಾಡಿದ ಉದ್ಯಮಿ ನಾನು ಹಣವನ್ನು ನೀಡಲು ಇಷ್ಟಪಡುವುದಿಲ್ಲ,ಆದರೆ "ಯುವಜನರು ಕಾರು ಸಾಲ ಮನೆ ಸಾಲ ಹೀಗೆ ಹೊರೆಯಾಗಿರುತ್ತಾರೆ". ಹಾಗಾಗಿ ನಾವು ನೀಡಬಹುದಾದ ಯಾವುದೇ ಪರಿಹಾರವು ಅವರಿಗೆ ಸಹಾಯ ಆಗುತ್ತದೆ ಎಂದಿದ್ದಾರೆ. ಸದ್ಯ ಅವರ ಕಾರ್ಪೊರೇಟ್ ನಾಯಕತ್ವಕ್ಕೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
Viral Video: ಸರ್ಕಾರಿ ಆಸ್ಪತ್ರೆಯ ಬೆಡ್ ಮೇಲೆ ಬೀದಿ ನಾಯಿಗಳಿಗೆ ರಾಯಲ್ ಟ್ರೀಟ್‌ಮೆಂಟ್; ವೈರಲ್ ಆಗ್ತಿದೆ ವಿಡಿಯೋ
ಇಂಟರ್ನೆಟ್ ಅವರನ್ನು "ಹೆಚ್ಚು ಹಣವನ್ನು ನೀಡಲು ಇಷ್ಟಪಡುವ ಬಾಸ್" ಎಂದು ಕರೆದಿದ್ದಾರೆ .ಹೆನಾನ್ ಕುವಾಂಗ್‌ಶಾನ್ ಕ್ರೇನ್ ಕಂಪನಿಯು ಸೆಪ್ಟೆಂಬರ್ 2002 ರಲ್ಲಿ ಸ್ಥಾಪನೆಯಾಗಿದೆ.ಇದು 130 ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯಾಚರಣೆಗಳೊಂದಿಗೆ ವಸ್ತು ನಿರ್ವಹಣಾ ಉತ್ಪನ್ನಗಳ ಪ್ರಮುಖ ತಯಾರಕರಾಗಿ ಬೆಳೆದಿದೆ.