ಹಣ ಉಳಿಸಲು ವಿಮಾನ ನಿಲ್ದಾಣಕ್ಕೆ ಪಿಜ್ಜಾ ಆರ್ಡರ್ ಮಾಡಿದ ಕುಟುಂಬ: ಸ್ಮಾರ್ಟ್ ಪ್ಲ್ಯಾನಿಂಗ್ ಎಂದ ನೆಟ್ಟಿಗರು
Viral News: ಇಲ್ಲೊಂದು ಅಮರಿಕ ಕುಟುಂಬವು ವಿಮಾನ ನಿಲ್ದಾಣದ ರೆಸ್ಟೋರೆಂಟ್‌ನಲ್ಲಿ ಉಪಾಹಾರ ಸೇವಿಸುವ ಬದಲು ಆನ್‌ಲೈನ್ ಮೂಲಕ ಪಿಜ್ಜಾ ಆರ್ಡರ್ ಮಾಡಿ ಸವಿದಿದೆ. ಈ ಕುಟುಂಬವು ನೇರವಾಗಿ ಡೊಮಿನೋಸ್ ಪಿಜ್ಜಾವನ್ನು ವಿಮಾನ ನಿಲ್ದಾಣಕ್ಕೆ ಆರ್ಡರ್ ಮಾಡಿದೆ. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಮಾನ ನಿಲ್ದಾಣಕ್ಕೆ ಪಿಜ್ಜಾ ಆರ್ಡರ್ ಮಾಡಿದ ಕುಟುಂಬಸ್ಥರು -
ವಾಷಿಂಗ್ಟನ್, ಫೆ. 25: ಸಾಮಾನ್ಯವಾಗಿ ವಿಮಾನ ನಿಲ್ದಾಣಗಳಲ್ಲಿ ಊಟ, ತಿಂಡಿಯ ಬೆಲೆ ದುಬಾರಿಯಾಗಿರುತ್ತದೆ. ಇಲ್ಲಿನ ಆಹಾರಕ್ಕೆ ಡಬಲ್ ಹಣ ಪಾವತಿಸಬೇಕಾಗುತ್ತದೆ. ಆದರೆ ಇಲ್ಲೊಂದು ಅಮೆರಿಕದ ಕುಟುಂಬವು ಆಹಾರಕ್ಕೆ ದುಬಾರಿ ಹಣ ಪಾವತಿಸುವುದನ್ನು ತಪ್ಪಿಸಲು ಭರ್ಜರಿ ಐಡಿಯಾ ಮಾಡಿದೆ. ವಿಮಾನ ನಿಲ್ದಾಣದ ರೆಸ್ಟೋರೆಂಟ್‌ನಿಂದ ಉಪಾಹಾರ ಸೇವಿಸುವ ಬದಲು ಆನ್‌ಲೈನ್ ಮೂಲಕ ಪಿಜ್ಜಾ ಆರ್ಡರ್ ಮಾಡಿ ಸವಿದಿದೆ. ಈ ಕುಟುಂಬವು ನೇರವಾಗಿ ಡೊಮಿನೋಸ್ ಪಿಜ್ಜಾವನ್ನು ವಿಮಾನ ನಿಲ್ದಾಣದೊಳಕ್ಕೆ ಆರ್ಡರ್ ಮಾಡಿದೆ. ಇದರ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗಿದೆ.
ವಿಮಾನ ನಿಲ್ದಾಣಗಳಲ್ಲಿ ಒಂದು ಕಪ್ ಚಹಾಕ್ಕೂ ದುಪ್ಪಟ್ಟು ಹಣ ವ್ಯಯಿಸಬೇಕಾಗುತ್ತದೆ. ಈ ಕಾರಣದಿಂದ ಅಮೆರಿಕದ ಈ ಕುಟುಂಬವು ಹೊಸ ಪ್ಲ್ಯಾನ್ ಮಾಡಿದೆ. ತಮ್ಮ ವಿಮಾನ ಬರುವುದು ವಿಳಂಬವಾದಾಗ ಕುಟುಂಬಸ್ಥರು ದುಬಾರಿ ಹಣ ಕೊಟ್ಟು ಅಲ್ಲಿಯ ಉಪಹಾರ ಖರೀದಿಸುವ ಬದಲು ಡೊಮಿನೋಸ್ ಪಿಜ್ಜಾವನ್ನು ವಿಮಾನ ನಿಲ್ದಾಣಕ್ಕೇ ಆರ್ಡರ್ ಮಾಡಿದ್ದಾರೆ.
ಡೊಮಿನೋಸ್ ಆರ್ಡರ್ ಸ್ವೀಕರಿಸುವಾಗ ಕುಟುಂಬವು ಟರ್ಮಿನಲ್ ಒಳಗೆ ಕಾಯುತ್ತಿರುವುದನ್ನು ದೃಶ್ಯಗಳು ತೋರಿಸುತ್ತವೆ. ಆ ಕ್ಷಣ ಅನೇಕ ವೀಕ್ಷಕರನ್ನು ಆಶ್ಚರ್ಯಗೊಳಿಸಿದೆ. ಡೆಲಿವರಿ ಬಾಯ್ ಬಂದಾಗ, ಕುಟುಂಬದ ಸದಸ್ಯರೊಬ್ಬರು ಹೋಗಿ ಪಿಜ್ಜಾ ಬಾಕ್ಸ್‌ಗಳನ್ನು ತೆಗೆದುಕೊಂಡಿದ್ದಾರೆ. ಸೆಕ್ಯೂರಿಟಿ ಚೆಕ್ ಮುಗಿಸಿದ ನಂತರ ವಿಮಾನ ಏರುವ ಗೇಟ್ ಬಳಿಯೇ ಇಡೀ ಕುಟುಂಬ ಪಿಜ್ಜಾ ಸವಿದಿದೆ.
ರೈಲಿನಲ್ಲೇ ಮಿನಿ ಕನ್ಸರ್ಟ್: ಅಹಮದಾಬಾದ್-ಲಖನೌ ಪ್ರಯಾಣಿಕರಿಂದ ಮಸ್ತಿ
ಈ ದೃಶ್ಯ ತ್ವರಿತವಾಗಿ ಗಮನ ಸೆಳೆದಿದ್ದು, ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ಐಡಿಯಾವನ್ನು ಅನೇಕರು ಸ್ಮಾರ್ಟ್ ಪ್ಲ್ಯಾನಿಂಗ್ ಎಂದಿದ್ದಾರೆ. ಆದರೆ ಈ ವಿಡಿಯೊ ನೋಡಿದ ತಕ್ಷಣ ಪಿಜ್ಜಾ ಬಾಕ್ಸ್ ಹಿಡಿದುಕೊಂಡು ನೀವು ಸೆಕ್ಯೂರಿಟಿ ಚೆಕ್ ಮೂಲಕ ಹೇಗೆ ಒಳಗೆ ಬಂದಿದ್ದೀರಿ? ಎಂದು ಪ್ರಶ್ನೆ ಮಾಡಿದ್ದಾರೆ.